HomeSpecialಪ್ರತಿ ನಿತ್ಯ ಉಪಯೋಗಿಸುವ ಬೆಡ್‌ ಶೀಟ್ ಗಳನ್ನು ಹೀಗೆ ಸ್ವಚ್ಚಗೊಳಿಸಿ

ಪ್ರತಿ ನಿತ್ಯ ಉಪಯೋಗಿಸುವ ಬೆಡ್‌ ಶೀಟ್ ಗಳನ್ನು ಹೀಗೆ ಸ್ವಚ್ಚಗೊಳಿಸಿ

ಬೇಸಿಗೆ ಕಾಲದಲ್ಲಿ ಹೆಚ್ಚು ಬೆವರು ಬರುವುದರಿಂದ ಬೆಡ್ ಶೀಟ್ ಬೇಗನೆ ಗಲೀಜಾಗುತ್ತದೆ. ಇದರಿಂದ ಬೆಡ್ ಶೀಟ್ ನಿಂದ ಕೆಟ್ಟ ವಾಸನೆ ಬರುತ್ತದೆ. ಇದನ್ನು ಸ್ವಚ್ಛಗೊಳಿಸದಿದ್ದರೆ ಚರ್ಮದ ಮೇಲೆ ಬ್ಯಾಕ್ಟೀರಿಯಾ ಇನ್ ಫೆಕ್ಷನ್ ಆಗಿ ಅಲರ್ಜಿ ಉಂಟಾಗುತ್ತದೆ. ಹಾಗಾಗಿ ಈ ಬೆಡ್ ಶೀಟ್ ಗಳನ್ನು ಸ್ವಚ್ಛಗೊಳಿಸಿ, ಬೆವರಿನ ವಾಸನೆಯನ್ನು ನಿವಾರಿಸಲು ಇದನ್ನು ಹಾಕಿ ವಾಶ್ ಮಾಡಿ.

*ಬಿಳಿ ವಿನೆಗರ್ ಆಮ್ಲೀಯ ಗುಣಗಳನ್ನು ಹೊಂದಿದೆ. ಇದು ದಿಂಬು, ಬೆಡ್ ಶೀಟ್ ಗಳಲ್ಲಿರುವ ಬ್ಯಾಕ್ಟೀರಿಯಗಳನ್ನು ತೊಲಗಿಸಲು ಸಹಕಾರಿ. ಹಾಗಾಗಿ ನೀರಿಗೆ ಬಿಳಿ ವಿನೆಗರ್ ಮಿಕ್ಸ್ ಮಾಡಿ ಬೆಡ್ ಶೀಟ್ ನ್ನು ಆ ನೀರಿನಲ್ಲಿ ನೆನೆಸಿಡಿ. 2 ಗಂಟೆಗಳ ಬಳಿಕ ಅದನ್ನು ಸೋಪ್ ಬಳಸಿ ವಾಶ್ ಮಾಡಿ. ಇದರಿಂದ ಬ್ಯಾಕ್ಟೀರಿಯಾಗಳು ನಾಶವಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

*ಬೆಡ್ ಶೀಟ್ ಗಳಲ್ಲಿ ಬರುವ ಬೆವರಿನ ವಾಸನೆಯನ್ನು ನಿವಾರಿಸಲು ಬೆಡ್ ಶೀಟ್ ವಾಶ್ ಮಾಡುವಾಗ ಅದರಲ್ಲಿ ಲ್ಯಾವೆಂಡರ್ ಎಸೆನ್ಷಿಯಲ್ ಆಯಿಲ್ ಅನ್ನು 5 ಹನಿಗಳಷ್ಟು ಬೆರೆಸಿ ವಾಶ್ ಮಾಡಿ. ಇದರಿಂದ ಸುವಾಸನೆ ಬರುತ್ತದೆ, ಚೆನ್ನಾಗಿ ನಿದ್ರೆ ಕೂಡ ಮಾಡಬಹುದು.

For Latest News Updates, Join Our Whatsapp Community🚩
RELATED ARTICLES

Most Popular