HomeBeautyಬೆನ್ನಿನ ಮೇಲೆ ಕಾಣಿಸಿಕೊಳ್ಳುವ ಮೊಡವೆ ಸಮಸ್ಯೆಗೆ ಇಲ್ಲಿದೆ ಮುಕ್ತಿ

ಬೆನ್ನಿನ ಮೇಲೆ ಕಾಣಿಸಿಕೊಳ್ಳುವ ಮೊಡವೆ ಸಮಸ್ಯೆಗೆ ಇಲ್ಲಿದೆ ಮುಕ್ತಿ

ಹುಡುಗಿಯರ ಮುಖದಲ್ಲಿ ಮೊಡವೆ ಸಮಸ್ಯೆ ಸಾಮಾನ್ಯ. ಬೇಸಿಗೆಯಲ್ಲಿ ಮೊಡವೆ, ಕೆಂಪು ಗುಳ್ಳೆಗಳು, ತುರಿಕೆ ಸಮಸ್ಯೆಯಾಗುತ್ತದೆ. ಕೆಲವರ ಬೆನ್ನು, ಕುತ್ತಿಗೆ ಮೇಲೆ ಮೊಡವೆ, ಕೆಂಪು ಗುಳ್ಳೆ ಕಾಣಿಸಿಕೊಳ್ಳುತ್ತದೆ. ಇದ್ರಿಂದ ಡೀಪ್ ಬ್ಯಾಕ್ಲೆಸ್ ಬಟ್ಟೆ ಧರಿಸಲು ಸಾಧ್ಯವಾಗುವುದಿಲ್ಲ. ಮನೆಯಲ್ಲಿರುವ ಕೆಲ ಮದ್ದುಗಳನ್ನು ಬಳಸಿ ಈ ಸಮಸ್ಯೆಗೆ ಮುಕ್ತಿ ಪಡೆಯಬಹುದು.

ಬೆನ್ನಿನ ಮೇಲೆ ಕಾಣಿಸಿಕೊಳ್ಳುವ ಮೊಡವೆಗೆ ಅನೇಕ ಕಾರಣಗಳಿವೆ. ಎಣ್ಣೆಯುಕ್ತ ಚರ್ಮ, ಅತಿಯಾದ ಬೆವರು, ರಾಸಾಯನಿಕ ಉತ್ಪನ್ನಗಳ ಅತಿಯಾದ ಬಳಕೆ, ಬಿಗಿಯಾದ ಬಟ್ಟೆ, ಔಷಧಿ ತೆಗೆದುಕೊಳ್ಳುವುದು, ಹಾರ್ಮೋನುಗಳಲ್ಲಿನ ಬದಲಾವಣೆಗಳು, ಅಪೌಷ್ಠಿಕ ಆಹಾರ ಸೇವನೆ ಇದಕ್ಕೆ ಕಾರಣವಾಗುತ್ತದೆ.

ಅರ್ಧ ಚಮಚ ಟಿ-ಟ್ರೀ ಆಯಿಲ್ ಮತ್ತು ಒಂದು ಚಮಚ ತೆಂಗಿನ ಎಣ್ಣೆಯನ್ನು ಮಿಕ್ಸ್ ಮಾಡಿ. ಇದನ್ನು ಮೊಡವೆ ಜಾಗಕ್ಕೆ ಹಚ್ಚಿ, 20 ನಿಮಿಷ ಬಿಡಿ. ನಂತ್ರ ಸ್ನಾನ ಮಾಡಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಒಂದು ಪಾತ್ರೆಗೆ 2 ಚಮಚ ಅಲೋವೆರಾ ಜೆಲ್ ಮತ್ತು ಒಂದು ಚಿಟಕಿ ಅರಿಶಿನ ಪುಡಿಯನ್ನು ಬೆರೆಸಿ ಪೇಸ್ಟ್ ಮಾಡಿ. ಮೊಡವೆಗೆ ಹಚ್ಚಿ 30 ನಿಮಿಷ ಬಿಟ್ಟು ಸ್ನಾನ ಮಾಡಿ.

For Latest News Updates, Join Our Whatsapp Community🚩
RELATED ARTICLES

Most Popular