HomeHealthತಿಂಗಳ ರಜೆಯ ಹೊಟ್ಟೆ ನೋವಿಗೆ ಇಲ್ಲಿದೆ ಮದ್ದು....!

ತಿಂಗಳ ರಜೆಯ ಹೊಟ್ಟೆ ನೋವಿಗೆ ಇಲ್ಲಿದೆ ಮದ್ದು….!

ತಿಂಗಳ ರಜೆಯ ಸಮಯದಲ್ಲಿ ಮಹಿಳೆಯರಿಗೆ ಹತ್ತು ಹಲವು ಸಮಸ್ಯೆಗಳು ಕಾಡುತ್ತಿರುತ್ತವೆ. ಅವುಗಳಲ್ಲಿ ಹೊಟ್ಟೆ ನೋವು ಕೂಡಾ ಒಂದು. ಇದರ ಪರಿಹಾರಕ್ಕೆ ಹೀಗೆ ಮಾಡಬಹುದು.

ಹೆಚ್ಚು ನೀರು ಅಥವಾ ಬಿಸಿ ನೀರು ಕುಡಿಯಿರಿ. ಇದು ಸ್ನಾಯುಗಳು ಸಂಕುಚಿತಗೊಳ್ಳುವುದರಿಂದ ಕಾಡುವ ಸಮಸ್ಯೆಯಾಗಿರುವುದರಿಂದ ಬಿಸಿ ನೀರು ಕುಡಿಯುವುದು ಇದಕ್ಕೆ ಪರಿಹಾರ ಸಿಗುತ್ತದೆ.

ತಿಂಗಳ ರಜಾದ ಸಮಯದಲ್ಲಿ ವಿಪರೀತ ಕಾಫಿ ಕುಡಿದರೆ ದೇಹದಲ್ಲಿ ನಿರ್ಜಲೀಕರಣ ಉಂಟಾಗಬಹುದು. ಕಾಫಿ ಕುಡಿದರೆ ಹೆಚ್ಚು ಮೂತ್ರ ವಿಸರ್ಜನೆಯಾಗಿ ಸ್ನಾಯು ಸೆಳೆತ ಹೆಚ್ಚಬಹುದು. ಕಾಫಿ ಸೇವನೆಯಿಂದ ಹಾರ್ಮೋನ್ ಗಳ ಮೇಲೂ ಪರಿಣಾಮ ಬೀರಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದಿನಕ್ಕೆ ಎರಡರಿಂದ ಮೂರು ಕಪ್ ಕಾಫಿ ಕುಡಿಯುವುದು ಸಮಸ್ಯೆ ತಾರದು. ಅದಕ್ಕಿಂತ ಹೆಚ್ಚಿನ ಕಾಫಿ ಕುಡಿಯುವುದು ಒಳ್ಳೆಯದಲ್ಲ. ಅದರ ಬದಲು ಗ್ರೀನ್ ಟೀ ಕುಡಿಯಿರಿ. ಇದು ದೇಹದಿಂದ ಕಲ್ಮಶಗಳನ್ನು ಹೊರ ಹಾಕುತ್ತದೆ ಮಾತ್ರವಲ್ಲ ನಿಮ್ಮ ಹೊಟ್ಟೆ ನೋವನ್ನೂ ಕಡಿಮೆ ಮಾಡುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular