HomeLifestyleಇಲ್ಲಿದೆ ರುಚಿಕರ ‘ಫಲೂಧ’ ಮಾಡುವ ವಿಧಾನ

ಇಲ್ಲಿದೆ ರುಚಿಕರ ‘ಫಲೂಧ’ ಮಾಡುವ ವಿಧಾನ

ಬೇಸಿಗೆ ಶುರುವಾಗ್ತಿದೆ, ತಣ್ಣಗಿನ ವಸ್ತು ತಿನ್ನಬೇಕು ಅನಿಸುತ್ತಿರುತ್ತದೆ. ಹೊರಗಡೆ ತಿನ್ನಲು ಕಾಯಿಲೆ ಭಯ, ಹಾಗಾಗಿ ಮನೆಯಲ್ಲಿಯೇ ಸುಲಭವಾಗಿ ಫಲೂದ ಮಾಡುವ ವಿಧಾನ ಇಲ್ಲಿದೆ ನೋಡಿ.

ಬೇಕಾಗುವ ಸಾಮಗ್ರಿಗಳು:

1 ಕಪ್ – ಹಾಲು, 2 ಟೇಬಲ್ ಸ್ಪೂನ್ – ಸಕ್ಕರೆ, 1 ಟೇಬಲ್ ಸ್ಪೂನ್ – ಸಬ್ಜಾ ಬೀಜ(1 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ
), 2 ಟೇಬಲ್ ಸ್ಪೂನ್ – ರೋಸ್ ಜೆಲ್ಲಿ. 1 ಟೇಬಲ್ ಸ್ಪೂನ್ – ರೋಸ್ ಸಿರಪ್, ¼ ಕಪ್ – ಫಲೂಡ ಸೇವ್, 2 ಟೇಬಲ್ ಸ್ಪೂನ್ – ಐಸ್ ಕ್ರೀಂ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾಡುವ ವಿಧಾನ:

ಹಾಲನ್ನು ಕುದಿಸಿಕೊಂಡು ತಣ್ಣಗಾದ ಮೇಲೆ ಫ್ರಿಡ್ಜ್ ನಲ್ಲಿಟ್ಟು ಕೂಲ್ ಮಾಡಿಕೊಳ್ಳಿ. ನಂತರ ಇದಕ್ಕೆ ಸಕ್ಕರೆ ಹಾಕಿ ಕರಗಿಸಿಕೊಳ್ಳಿ ನಂತರ ಸಬ್ಜಾ ಬೀಜವನ್ನು ಸೋಸಿಕೊಳ್ಳಿ. 1 ಕಪ್ ನೀರನ್ನು ಕುದಿಸಿಕೊಂಡು ಅದಕ್ಕೆ ಫಲೂಡ ಸೇವ್ ಅನ್ನು ಹಾಕಿ. ಅದು ಬೆಂದ ಬಳಿಕ ನೀರನ್ನು ಬಸಿದುಕೊಳ್ಳಿ.

ನಂತರ 1 ದೊಡ್ಡ ಗ್ಲಾಸ್ ತೆಗೆದುಕೊಂಡು ಅದಕ್ಕೆ ಮೊದಲು ಜೆಲ್ಲಿ ಹಾಕಿ ನಂತರ ಸಬ್ಜಾ ಬೀಜ ಹಾಕಿ ಹಾಗೇ ಫಲೂಡ ಸೇವ್, ರೋಸ್ ಸಿರಪ್ ಸೇರಿಸಿ. ಇದಾದ ಬಳಿಕ ಹಾಲು ಹಾಕಿ ಅದರ ಮೇಲೆ ಐಸ್ ಕ್ರೀಂ ಹಾಕಿದರೆ ಫಲೂಡ ಸವಿಯಲು ರೆಡಿ.

For Latest News Updates, Join Our Whatsapp Community🚩
RELATED ARTICLES

Most Popular