HomeKarnatakaRation Card : ʻAPL-BPLʼ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

Ration Card : ʻAPL-BPLʼ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

 

ಬೆಂಗಳೂರು : ಹೊಸ ಎಪಿಎಲ್‌, ಬಿಪಿಎಲ್‌ ರೇಷನ್‌ ಕಾರ್ಡ್‌ ಗೆ ಈಗಾಗಲೇ ಅರ್ಜಿ ಸಲ್ಲಿಸಿದವರಿಗೆ ಆಹಾರ ಇಲಾಖೆ ಸಿಹಿಸುದ್ದಿ ನೀಡಿದ್ದು, ಶೀಘ್ರವೇ ಕಾರ್ಡ್‌ ವಿತರಣೆ ಮಾಡಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೌದು, ಆಹಾರ ಇಲಾಖೆಯು ಜನವರಿ ಮೊದಲ ವಾರವೇ ಹೊಸ ರೇಷನ್‌ ಕಾರ್ಡ್‌ ವಿತರಣೆ ಮಾಡಲು ಸಿದ್ಧತೆ ನಡೆಸಿದೆ ಎನ್ನಲಾಗಿದ್ದು, ರೇಷನ್‌ ಕಾರ್ಡ್‌ ಗೆ ಈಗಾಗಲೇ ಅರ್ಜಿ ಸಲ್ಲಿಸಿ ಕಾಯುತ್ತಿರುವವರಿಗೆ ಸಿಹಿಸುದ್ದಿ ಸಿಕ್ಕಂತಾಗಿದೆ.

ರಾಜ್ಯದಲ್ಲಿ ಸುಮಾರು 2.95 ಲಕ್ಷ ಅರ್ಜಿಗಳು ಬಾಕಿಯಿದ್ದು, ಶೀಘ್ರವೇ ಪರಿಶೀಲಿಸಿ ಕಾರ್ಡ್‌ ವಿತರಣೆ ಮಾಡುವ ಸಂಬಂಧ ಅಧಿಕಾರಿಗಳಿಗೆ ಸೂಚನೆ ನೀಡಿದೆ ಎನ್ನಲಾಗಿದ್ದು, ಇನ್ನೊಂದು ವಾರದಲ್ಲೇ ಅರ್ಹರಿಗೆ ಪಡಿತರ ಚೀಟಿ ವಿತರಣೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ರೇಷನ್‌ ಕಾರ್ಡ್‌ ಗೆ ಅರ್ಜಿ ಸಲ್ಲಿಸಿರುವ ಫಲಾನುಭವಿಗಳು ರೇಷನ್‌ ಕಾರ್ಡ್‌ ನಲ್ಲಿ ಹೆಸರು ಬಂದಿದೆಯಾ ಅಂತ ಈ ರೀತಿ ಚೆಕ್‌ ಮಾಡಬಹುದು.

ಮೊದಲಿಗೆ https://ahara.kar.nic.in/WebForms/Show_RationCard.aspx ವಿಭಾಗದಲ್ಲಿ ಎಡ ಭಾಗದಲ್ಲಿ ಕಾಣುವ ಈ ಪಡಿತರ ಚೀಟಿ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಅಲ್ಲಿ ನಿಮಗೆ ವಿತರಣೆಯಾಗದ ಹೊಸ ಪಡಿತರ ಚೀಟಿ ಲಿಸ್ಟ್ ಎಂಬುದು ಕಾಣಿಸುತ್ತದೆ.

ನಂತರ ನೀವು ನಿಮ್ಮ ಜಿಲ್ಲೆ ಗ್ರಾಮ ಹಾಗೂ ಮತದಾರ ವಿವರಗಳನ್ನು ನೀಡಿ ಗೋ ಎಂದು ಕ್ಲಿಕ್ ಮಾಡಿದರೆ ಒಂದು ಲಿಸ್ಟ್ ತೆರೆದುಕೊಳ್ಳುತ್ತದೆ.

ನಂತರ ವಿತರಣೆ ಆಗದೇ ಇರುವ ಹೊಸ ರೇಷನ್ ಕಾರ್ಡ್ ಲಿಸ್ಟ್‌ ಕಾಣುತ್ತದೆ. ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ರೆ ಸದ್ಯದಲ್ಲಿಯೇ ರೇಷನ್ ಕಾರ್ಡ್ ಬರಲಿದೆ ಎಂದು ಅರ್ಥ.

For Latest News Updates, Join Our Whatsapp Community🚩
RELATED ARTICLES

Most Popular