HomeLifestyleಇಲ್ಲಿದೆ ಗೋಧಿ ಹಿಟ್ಟಿನಿಂದ ಪೌಷ್ಟಿಕವಾದ ಲಾಡು ಮಾಡುವ ವಿಧಾನ

ಇಲ್ಲಿದೆ ಗೋಧಿ ಹಿಟ್ಟಿನಿಂದ ಪೌಷ್ಟಿಕವಾದ ಲಾಡು ಮಾಡುವ ವಿಧಾನ

ಗೋಧಿ ಆರೋಗ್ಯಕರ ಮತ್ತು ಪೌಷ್ಟಿಕ ಆಹಾರ. ಕಬ್ಬಿಣಾಂಶ ಹೇರಳವಾಗಿರುವ ಗೋಧಿಯಲ್ಲಿ ಸಕ್ಕರೆ ಪ್ರಮಾಣ ಕಡಿಮೆ ಇರುವುದರಿಂದ ಇದನ್ನು ಮಧುಮೇಹಿಗಳು ಇಷ್ಟಪಟ್ಟು ತಿನ್ನುತ್ತಾರೆ.

ತೂಕ ಇಳಿಸಿಕೊಳ್ಳುವವರಿಗೂ ಇದು ಅಚ್ಚುಮೆಚ್ಚು. ಇಂತಹ ಗೋಧಿಯಿಂದ ರುಚಿ ರುಚಿಯಾದ ಲಾಡು ಕೂಡ ತಯಾರಿಸಬಹುದು. ಅದು ಹೇಗೆ ಅನ್ನುವ ವಿವರ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗೋಧಿಹಿಟ್ಟು – 1 ಲೋಟ
ಒಣಕೊಬ್ಬರಿ – 3/4 ಲೋಟ
ಬೆಲ್ಲ – 1 ಲೋಟ
ಏಲಕ್ಕಿಪುಡಿ – ಸ್ವಲ್ಪ
ತುಪ್ಪ – ಸ್ವಲ್ಪ

ಮಾಡುವ ವಿಧಾನ

ಗೋಧಿಹಿಟ್ಟನ್ನು ಬಾಣಲೆಗೆ ಹಾಕಿ ಸುವಾಸನೆ ಬರುವ ತನಕ ಕೆಂಪಗೆ ಹುರಿಯಬೇಕು. ಒಣಕೊಬ್ಬರಿ ಜೊತೆಗೆ ಸ್ವಲ್ಪ ಏಲಕ್ಕಿ ಬೆರೆಸಿ ಮಿಕ್ಸಿಯಲ್ಲಿ ಪುಡಿ ಮಾಡಬೇಕು.

ಬಳಿಕ ಹುರಿದ ಹಿಟ್ಟು, ಕೊಬ್ಬರಿಪುಡಿ, ತುರಿದ ಬೆಲ್ಲ ಸೇರಿಸಿ ಕಾಯಿಸಿದ ತುಪ್ಪ ಹಾಕಿ ಉಂಡೆ ಕಟ್ಟಬೇಕು. ಈಗ ಘಮಘಮ ಪರಿಮಳದ ಲಡ್ಡುಗಳು ತಿನ್ನಲು ರೆಡಿ.

For Latest News Updates, Join Our Whatsapp Community🚩
RELATED ARTICLES

Most Popular