HomeHealthಹಲ್ಲು ನೋವು ನಿವಾರಣೆಗೆ ಇಲ್ಲಿದೆ ಮನೆ ಮದ್ದು

ಹಲ್ಲು ನೋವು ನಿವಾರಣೆಗೆ ಇಲ್ಲಿದೆ ಮನೆ ಮದ್ದು

ಹಲ್ಲುಗಳು ನಿತ್ಯ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಹಾಗಾಗಿ ಅವುಗಳ ರಕ್ಷಣೆ ಅಷ್ಟೇ ಅಗತ್ಯ. ಅದಕ್ಕಾಗಿ ಕೆಲವೊಂದು ಕ್ರಮಗಳನ್ನು ಅನುಸರಿಸಿದರೆ ಹಲ್ಲುಗಳ ಸ್ವಾಸ್ಥ್ಯ ಕಾಪಾಡಿಕೊಳ್ಳಬಹುದು. ಹೇಗೆ ಅಂತ ತಿಳಿದುಕೊಳ್ಳೋಣ.

* ಹುಳುಕು ಹಲ್ಲಿನಿಂದಾಗಿ ನೋವು ಬರುತ್ತಿದ್ದರೆ ನಿಯಮಿತವಾಗಿ ಲವಂಗ ಜಗಿಯುವುದನ್ನು ಅಭ್ಯಾಸ ಮಾಡಿಕೊಂಡರೆ ನೋವು ಅಲ್ಪಮಟ್ಟಿಗೆ ಕಡಿಮೆಯಾಗುತ್ತದೆ.

* ಹಲ್ಲಿನಲ್ಲಿ ಉಪ್ಪಿನಂಶ ಕಡಿಮೆ ಇದ್ದರೆ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಮೂರು ದಿನಕ್ಕೊಮ್ಮೆ ಉಗುರು ಬೆಚ್ಚಗಿನ ನೀರಿಗೆ ಉಪ್ಪು ಹಾಕಿಕೊಂಡು ಬಾಯಿ ತೊಳೆಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

* ಹಲ್ಲು ನೋವು ಬಂದಾಗ ಬೆಳ್ಳುಳ್ಳಿಯನ್ನು ಕಲ್ಲುಪ್ಪಿನೊಂದಿಗೆ ಸೇರಿಸಿಕೊಂಡು ತಿಂದರೆ ಕ್ಷಣಾರ್ಧದಲ್ಲಿಯೇ ನೋವು ಮಾಯವಾಗುತ್ತದೆ. ಅದರೊಂದಿಗೆ ಬಾಯಲ್ಲಿ ಅನಗತ್ಯ ಬ್ಯಾಕ್ಟೀರಿಯಾಗಳಿದ್ದರೆ ಸತ್ತು ಹೋಗುತ್ತವೆ.

* ಅರಿಶಿಣವನ್ನು ಬಿಸಿನೀರಿಗೆ ಮಿಶ್ರಣ ಮಾಡಿ ಕುಡಿಯುವುದರಿಂದ ಹಲ್ಲುಗಳಿಗೆ ಸೋಂಕು ಉಂಟಾಗುವುದು ತಪ್ಪುತ್ತದೆ.

* ಬೇವಿನ ಎಲೆಯನ್ನು ಜಗಿಯುವುದರಿಂದ ಹಲ್ಲು ಹಾಗೂ ವಸಡಿಗೆ ತೊಂದರೆ ಕೊಡುವ ಬ್ಯಾಕ್ಟೀರಿಯಾಗಳಿದ್ದರೆ ಸಂಪೂರ್ಣವಾಗಿ ಸತ್ತು ಹೋಗುತ್ತವೆ.

* ವಾರಕ್ಕೊಮ್ಮೆಯಾದರೂ ಬೇವಿನ ಕಡ್ಡಿಯಿಂದ ಹಲ್ಲು ಉಜ್ಜಿದರೆ ಹಲ್ಲುಗಳು ಗಟ್ಟಿಯಾಗುವುದರ ಜೊತೆಗೆ ಆರೋಗ್ಯವಾಗಿರುತ್ತವೆ.

For Latest News Updates, Join Our Whatsapp Community🚩
RELATED ARTICLES

Most Popular