ಕರಿದ ತಿನಿಸು ಸೇವನೆಯಿಂದ ಕಾಡುವ ಅಸಿಡಿಟಿ ಸಮಸ್ಯೆಗೆ ಇಲ್ಲಿದೆ ಮನೆಮದ್ದು

ಕರಿದ ತಿನಿಸುಗಳನ್ನು ಬಹುತೇಕ ಎಲ್ಲರೂ ಇಷ್ಟಪಡ್ತಾರೆ. ಬೋಂಡಾ, ಬಜ್ಜಿ, ಪಾನಿಪುರಿ, ಬರ್ಗರ್‌ ಹೀಗೆ ಬಗೆಬಗೆಯ ಜಂಕ್‌ ಫುಡ್‌ಗಳೇ ನಮ್ಮೆಲ್ಲರ ಫೇವರಿಟ್.‌ ಈ ತಿನಿಸುಗಳು ಬಹಳ ರುಚಿಕರವಾಗಿರುತ್ತವೆ, ಆದ್ರೆ ಕರಿದ ತಿಂಡಿಗಳನ್ನು ತಿಂದ ಮೇಲೆ ಅನೇಕ ಸಮಸ್ಯೆಗಳು ಶುರುವಾಗುತ್ತವೆ.

ಕೊಲೆಸ್ಟ್ರಾಲ್, ಬಿಪಿ, ಹೃದ್ರೋಗ ಮತ್ತು ಮಧುಮೇಹದ ಅಪಾಯವನ್ನು ಈ ತಿನಿಸುಗಳು ಹೆಚ್ಚಿಸುತ್ತದೆ. ಇವಿಷ್ಟೇ ಅಲ್ಲ ಕರಿದ ತಿನಿಸುಗಳ ಸೇವನೆ ಬಳಿಕ ಆಸಿಡಿಟಿ ಸಮಸ್ಯೆ ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಒಮ್ಮೆ ಕರಿದ ಎಣ್ಣೆಯಲ್ಲೇ ಮತ್ತೆ ತಿನಿಸುಗಳನ್ನು ಕರಿದು ತಿಂದಾಗಲಂತೂ ಆಸಿಡಿಟಿ ಕಾಮನ್‌. ಆ ತಿನಿಸುಗಳನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುವುದರಿಂದ ಆಸಿಡಿಟಿ ಉಂಟಾಗುತ್ತದೆ.

ಈ ಆಸಿಡಿಟಿಗೆ ಕೆಲವೊಂದು ಮನೆಮದ್ದುಗಳ ಮೂಲಕ ಸುಲಭ ಪರಿಹಾರ ಕಂಡುಕೊಳ್ಳಬಹುದು.  ಮಲಬದ್ಧತೆ, ಅಸಿಡಿಟಿ, ಅಜೀರ್ಣ, ಗ್ಯಾಸ್‌ನಂತಹ ಸಮಸ್ಯೆಗಳು ಸಹ ಇದ್ದಾಗ ದೈನಂದಿನ ಜೀವನದ ಸಾಮಾನ್ಯ ಚಟುವಟಿಕೆಗಳನ್ನು ಮಾಡಲು ಕಷ್ಟವಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಔಷಧಗಳನ್ನು ಸೇವಿಸುವ ಬದಲು ಕೆಲವು ಮನೆಮದ್ದುಗಳನ್ನು ಮಾಡಬಹುದು.

ಓಮ: ಅನಾರೋಗ್ಯಕರ ಆಹಾರ ಸೇವನೆಯಿಂದ ಉಂಟಾಗುವ ಆಸಿಡಿಟಿಗೆ ಓಮ ಅಥವಾ ಅಜ್ವೈನ್‌ ಪರಿಹಾರ ನೀಡುತ್ತದೆ. ಸ್ವಲ್ಪ ಓಮವನ್ನು ನೀರಿನಲ್ಲಿ ಕುದಿಸಿ ಅದನ್ನು ಕುಡಿಯಿರಿ.

ಸೋಂಪು: ಸೋಂಪು ಮೌತ್‌ ಫ್ರೆಶ್ನರ್‌ನಂತೆ ಕೆಲಸ ಮಾಡುತ್ತದೆ. ಇದರ ಜೊತೆಜೊತೆಗೆ ಆಸಿಡಿಟಿಯಿಂದಲೂ ಮುಕ್ತಿ ನೀಡುತ್ತದೆ. ಒಂದು ಚಮಚ ಸೋಂಪಿನ ಕಾಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಬೆಳಗ್ಗೆ ಆ ನೀರನ್ನು ಕುಡಿಯಿರಿ.

ಇಂಗು: ಆಹಾರದ ರುಚಿಯನ್ನು ಹೆಚ್ಚಿಸಲು ಇಂಗು ಬಳಸುತ್ತೇವೆ. ಇದು ಅಜೀರ್ಣ ಮತ್ತು ಅಸಿಡಿಟಿಗೂ ಪರಿಣಾಮಕಾರಿ ಮದ್ದು. ಇಂಗನ್ನು ಬಿಸಿ ನೀರಿಗೆ ಬೆರೆಸಿ ಸೇವನೆ ಮಾಡಿ. ಈ ರೀತಿ ಮಾಡುವುದರಿಂದ ಆಸಿಡಿಟಿ ಬಹುಬೇಗ ನಿವಾರಣೆಯಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read