ಮಹಿಳೆಯರು ಸದಾ ಫಿಟ್ ಆಗಿರಲು ಇಲ್ಲಿದೆ ಡಯಟ್ ಪ್ಲಾನ್…..!

ಹೆಚ್ಚಾಗುವ ತೂಕ ಪ್ರತಿಯೊಬ್ಬರ ತಲೆಬಿಸಿಗೆ ಕಾರಣವಾಗುತ್ತದೆ. ಮನೆ ಕೆಲಸ ಮಾಡಿಕೊಂಡಿರುವ ಮಹಿಳೆಯರೂ ಫಿಟ್ನೆಸ್ ಗೆ ಮಹತ್ವ ನೀಡ್ತಾರೆ. ಇದೇ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ಜಿಮ್, ಏರೋಬಿಕ್ಸ್, ಯೋಗ ಕ್ಲಾಸ್ ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನು ನೋಡಬಹುದು.

ಆದ್ರೆ ಅನೇಕರಿಗೆ ಈ ಬಗ್ಗೆ ಸರಿಯಾದ ಮಾಹಿತಿಯಿರುವುದಿಲ್ಲ. ವ್ಯಾಯಾಮವನ್ನ ಹೇಗೆ ಪ್ರಾರಂಭಿಸಬೇಕು ಮತ್ತು ಆಹಾರ ಪದ್ಧತಿ ಹೇಗಿರಬೇಕು ಅನ್ನೋ ಬಗ್ಗೆ ಇಲ್ಲಿದೆ ಡೇಲಿ ಡಯಟ್ ಪ್ಲಾನ್.

ಬೆಳಿಗ್ಗೆ ಎದ್ದ ತಕ್ಷಣ ಜಿಮ್ ಗೆ ಹೋಗುವ ಮುಂಚೆ ನೀರಿಗೆ ಜೇನುತುಪ್ಪ ಮತ್ತು ನಿಂಬೆ ರಸ ಸೇರಿಸಿ ಕುಡಿಯಿರಿ. ಇದ್ರಿಂದ ದಿನವಿಡೀ ತುಂಬಾ ಉಲ್ಲಾಸದಿಂದ ಕೂಡಿರುತ್ತದೆ. ಬಹುಬೇಗನೆ ಅನವಶ್ಯಕ ಬೊಜ್ಜು ಕಡಿಮೆಯಾಗುತ್ತದೆ.

ಬ್ಲಡ್ ಪ್ರೆಶರ್ ಇಲ್ಲದವರು ಬೆಳಿಗ್ಗೆ ಸ್ವಲ್ಪ ನೆನೆಸಿದ ಬಾದಾಮಿ ಮತ್ತು 1 ಕಪ್ ಕಾಫಿ ಕುಡಿಯಿರಿ. 2 ಬೇಯಿಸಿದ ಮೊಟ್ಟೆಗಳೊಂದಿಗೆ ಟೋಸ್ಟ್ ತಿನ್ನಿ.

ಸಾಂಪ್ರದಾಯಿಕ ಊಟಕ್ಕಿಂತ ಉತ್ತಮವಾದ ಆಹಾರ ಇನ್ನೊಂದಿಲ್ಲ. ಊಟದಲ್ಲಿ ಅನ್ನದ ಜೊತೆಗೆ  ಹಸಿರು ತರಕಾರಿ, ಮೊಸರು ಮತ್ತು ತಾಜಾ ಸಲಾಡ್‌ ಇರಲಿ.

ಸಂಜೆ  ಗ್ರೀನ್ ಟೀ ಕುಡಿಯಿರಿ, ಜೊತೆಗೆ ಹಣ್ಣು ತಿನ್ನಿ.

ಆದಷ್ಟು ಮುಂಚೆ, ರಾತ್ರಿ 8 ಗಂಟೆಯ ಮೊದಲು ಊಟ ಮಾಡಿ. ಹಸಿರು ತರಕಾರಿಗಳೊಂದಿಗೆ ಪ್ರೋಟೀನ್ ಶೇಕ್ ತೆಗೆದುಕೊಳ್ಳಬಹುದು. ದಿನಕ್ಕೆ ಕನಿಷ್ಠ ಮೂರರಿಂದ ಐದು ಲೀಟರ್ ನೀರು ಕುಡಿಯಿರಿ. ನೀರಿನಿಂದ ಜೀರ್ಣಾಂಗ ವ್ಯವಸ್ಥೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಚರ್ಮದ ತೇವಾಂಶವನ್ನು ಸಹ ಕಾಪಾಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read