HomeSpecialತಿಳಿದುಕೊಳ್ಳಿ ಮೈಕ್ರೋವೇವ್ ಒವನ್ ಬಳಸುವ ಕುರಿತ ಒಂದಷ್ಟು ಮಾಹಿತಿ

ತಿಳಿದುಕೊಳ್ಳಿ ಮೈಕ್ರೋವೇವ್ ಒವನ್ ಬಳಸುವ ಕುರಿತ ಒಂದಷ್ಟು ಮಾಹಿತಿ

ಮೈಕ್ರೋವೇವ್ ನಿತ್ಯ ಬಳಸುವವರು, ಫ್ರಿಜ್ ನಲ್ಲಿಟ್ಟ ವಸ್ತುಗಳನ್ನು ಬಿಸಿ ಮಾಡಲು ಮಾತ್ರ ಬಳಸುತ್ತಾರೆ. ತಿಂಡಿ ಅಥವಾ ನೀರನ್ನು ಬಿಸಿ ಮಾಡಲು ಮಾತ್ರ ಬಳಕೆಯಾಗುವ ಇದನ್ನು ಇತರ ಯಾವ ಸಂದರ್ಭಗಳಲ್ಲಿ ಬಳಸಬಹುದು ನೋಡೋಣ.

ಕೇಕ್ ಅನ್ನು ಪ್ರತಿ ಬಾರಿ ಹೊರಗಿನಿಂದ ತರುವ ಬದಲು ಮೈಕ್ರೋವೇವ್ ಮುಖಾಂತರ ಒಮ್ಮೆ ತಯಾರಿಸಿ ನೋಡಿ. ಕೇವಲ ಹತ್ತು ನಿಮಿಷಗಳಲ್ಲಿ ಕೇಕ್ ಅಥವಾ ಕುಕ್ಕೀಸ್ ಅನ್ನು ಆಕರ್ಷಕವಾಗಿ ತಯಾರಿಸಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೊಟ್ಟೆಯ ತಿನಿಸು ತಯಾರಿಸುವ ವೇಳೆ ಬೆಣ್ಣೆ ಅಥವಾ ಎಣ್ಣೆ ಸಿಡಿಯುವುದನ್ನು ತಪ್ಪಿಸಲು ಮೈಕ್ರೋವೇವ್ ನಲ್ಲಿಟ್ಟು ನೋಡಿ. ಇದು ಗ್ಯಾಸ್ನಲ್ಲಿ ಬೆಂದ ಮೊಟ್ಟೆಗಿಂತಲೂ ಹೆಚ್ಚು ರುಚಿಕರವಾಗಿರುತ್ತದೆ.

ಕಡಿಮೆ ನೀರು ಬಳಸಿಯೂ ತರಕಾರಿಗಳನ್ನು ಬೇಯಿಸುವ ಅಗತ್ಯವಿದ್ದರೆ ಇದು ಒಳ್ಳೆಯದು. ಕೆಲವೊಮ್ಮೆ ಅನ್ನದೊಂದಿಗೆ ಮಸಾಲೆ ಬೆರೆಸದ ಖಾಲಿ ತರಕಾರಿಗಳನ್ನು ತಿನ್ನಲು ಬಯಸುವವರು ಇದರ ಮೂಲಕವೇ ತಯಾರಿಸಬಹುದು.

ಹಪ್ಪಳ, ಚಿಪ್ಸ್ ಮೊದಲಾದ ಕುರುಕುರು ತಿಂಡಿಯನ್ನು ಎಣ್ಣೆಯ ಸಹಾಯವಿಲ್ಲದೆ ಕೇವಲ ಮೈಕ್ರೋವೇವ್ ನಲ್ಲಿಟ್ಟು ಬೇಯಿಸಿ ತಿನ್ನಬಹುದು. ಇದರ ತಯಾರಿಗೆ ಹೆಚ್ಚೆಂದರೆ ಒಂದು ನಿಮಿಷ ಸಾಕು.

For Latest News Updates, Join Our Whatsapp Community🚩
RELATED ARTICLES

Most Popular