HomeLatest Newsನಿಮ್ಮ ನೆಚ್ಚಿನ ವಜ್ರದ ʼಆಭರಣʼಗಳನ್ನು ಸ್ವಚ್ಛಗೊಳಿಸಲು ಇಲ್ಲಿದೆ ಟಿಪ್ಸ್

ನಿಮ್ಮ ನೆಚ್ಚಿನ ವಜ್ರದ ʼಆಭರಣʼಗಳನ್ನು ಸ್ವಚ್ಛಗೊಳಿಸಲು ಇಲ್ಲಿದೆ ಟಿಪ್ಸ್

ಮಹಿಳೆಯರಿಗೆ ಆಭರಣವೆಂದರೆ ತುಂಬಾ ಇಷ್ಟ. ಅದರಲ್ಲೂ ವಜ್ರ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ವಜ್ರದಿಂದ ತಯಾರಿಸಿದ ಹಾರ, ಉಂಗುರಗಳು ತುಂಬಾ ಸುಂದರವಾಗಿರುತ್ತದೆ. ಹಾಗಾಗಿ ಅದರ ಹೊಳಪನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ವಜ್ರದ ಆಭರಣಗಳನ್ನು ಸ್ವಚ್ಛಗೊಳಿಸಲು ಈ ವಿಧಾನ ಬಳಸಿ.

ವಜ್ರ ಸೇರಿದಂತೆ ಎಲ್ಲಾ ರೀತಿಯ ಆಭರಣಗಳನ್ನು ಸ್ವಚ್ಛಗೊಳಿಸಲು ಅಡುಗೆ ಸೋಡಾ ಬಹಳ ಸಹಕಾರಿ. ಹಾಗಾಗಿ ಒಂದು ಕಪ್ ನೀರಿನಲ್ಲಿ 1 ಚಮಚ ಅಡುಗೆ ಸೋಡಾವನ್ನು ಮಿಕ್ಸ್ ಮಾಡಿ ಕೆಲವು ನಿಮಿಷಗಳ ಕಾಲ ಇಡಿ. ನಂತರ ತೊಳೆದು ಬಟ್ಟೆಯಿಂದ ಒರೆಸಿರಿ.

ಟೂತ್ ಪೇಸ್ಟ್ ಬಳಸಿ ಆಭರಣವನ್ನು ಸ್ವಚ್ಛಗೊಳಿಸಬಹುದು. ಹಾಗಾಗಿ ವಜ್ರದ ಆಭರಣದ ಮೇಲೆ ಟೂತ್ ಪೇಸ್ಟ್ ಅನ್ನು ಹಚ್ಚಿ. ನಿಧಾನವಾಗಿ ಉಜ್ಜಿ ತೊಳೆಯಿರಿ. ಬಳಿಕ ಬಟ್ಟೆಯಿಂದ ಒರೆಸಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಜ್ರದ ಆಭರಣಗಳ ಮೇಲೆ ಯಾವುದೇ ತರಹದ ಗೀರುಗಳು ಬೀಳಬಾರದಂತಿದ್ದರೆ ವಜ್ರದ ಆಭರಣಗಳನ್ನು ಇತರ ಆಭರಣಗಳ ಜೊತೆ ಇಡಬೇಡಿ. ಅದನ್ನು ಬಟ್ಟೆಯಿಂದ ಸುತ್ತಿ ಆಭರಣವಿಡುವ ಚೀಲದಲ್ಲಿ ಇಡಿ.

ವಜ್ರದ ಆಭರಣ ಸ್ವಚ್ಛಗೊಳಿಸಲು ಆಭರಣ ಕ್ಲೀನರ್ ಗಳನ್ನು ಬಳಸಬಹುದು. ಇದು ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಅಥವಾ ಯಾವುದೇ ಸ್ಥಳೀಯ ಆಭರಣ ಅಂಗಡಿಗಳಲ್ಲಿ ಸಿಗುತ್ತದೆ. ಹಾಗೇ ವಜ್ರದ ಆಭರಣದ ಲೇಬಲ್ ನಲ್ಲಿರುವಂತೆ ಸ್ವಚ್ಛಗೊಳಿಸಿ.

For Latest News Updates, Join Our Whatsapp Community🚩
RELATED ARTICLES

Most Popular