HomeBeautyಕಪ್ಪು ಮಚ್ಚೆಗಳ ನಿವಾರಣೆಗೆ ಇಲ್ಲಿದೆ ಒಂದಷ್ಟು ಟಿಪ್ಸ್

ಕಪ್ಪು ಮಚ್ಚೆಗಳ ನಿವಾರಣೆಗೆ ಇಲ್ಲಿದೆ ಒಂದಷ್ಟು ಟಿಪ್ಸ್

ಕಪ್ಪು ಮಚ್ಚೆಗಳು ಬರುವುದಕ್ಕೆ ಹಲವಾರು ಕಾರಣಗಳಿವೆ. ಮುಖದಲ್ಲಿ ಚಿಕ್ಕ ಮಚ್ಚೆ ಕಾಣಿಸಿದರು ಮಹಿಳೆಯರು ಆತಂಕಕ್ಕೊಳಗಾಗುತ್ತಾರೆ. ಇನ್ನೂ ಮೂಗು, ಮೊಣಕೈ, ಮೊಣಕಾಲು, ಕುತ್ತಿಗೆ ಮತ್ತಿತರ ಭಾಗಗಳಲ್ಲಿ ಚರ್ಮ ಕಪ್ಪಾಗಿ ಬದಲಾದರೆ ತೊಂದರೆ ಅನಿಸುತ್ತದೆ. ಇದರಿಂದ ಮುಕ್ತಿ ಪಡೆಯಬೇಕಾದರೆ ಈ ಸಲಹೆಗಳನ್ನು ಅನುಸರಿಸಿ ನೋಡಿ.

* ಹುಳಿಯಾದ ಮೊಸರಿನಲ್ಲಿ ಬಾರ್ಲಿ ಹಿಟ್ಟನ್ನು ಕಲಸಿ ಪೇಸ್ಟ್ ಆಗಿ ಮಾಡಿ ಮಚ್ಚೆಗಳ ಮೇಲೆ ಲೇಪನ ಮಾಡಬೇಕು. ಪ್ರತಿ ದಿನ ಹೀಗೆ ಮಾಡಿ 15 ನಿಮಿಷಗಳ ನಂತರ ತೊಳೆಯಬೇಕು.

* ನಿದ್ರೆ ಮಾಡುವ ಮುನ್ನ ಆಪಲ್ ಸೀಡರ್ ವಿನೆಗರ್ ಅನ್ನು ಮಚ್ಚೆಗಳ ಮೇಲೆ ಹಚ್ಚಿ ಬೆಳಗ್ಗೆ ತೊಳೆಯಬೇಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

* ಎರಡು ದಿನಕ್ಕೊಮ್ಮೆ ಟೊಮ್ಯಾಟೊ ರಸವನ್ನು ಮಚ್ಚೆಗಳ ಮೇಲೆ ಹಚ್ಚಿ ಅರ್ಧ ಗಂಟೆಯ ನಂತರ ತೊಳೆಯಬೇಕು.

* ಅಲೋವೆರಾ ಜೆಲ್ ಅನ್ನು ಲೇಪನ ಮಾಡಿಕೊಂಡರೆ ಈ ಸಮಸ್ಯೆ ಕಡಿಮೆಯಾಗುತ್ತದೆ.

* ಕೊಬ್ಬರಿ ಎಣ್ಣೆಯನ್ನು ಸಮಸ್ಯೆ ಇರುವ ಕಡೆ ಹಚ್ಚಿ ಒಂದು ಗಂಟೆಯ ನಂತರ ಸ್ನಾನ ಮಾಡಿದರೆ ಮಚ್ಚೆಗಳ ಸಮಸ್ಯೆ ಕಡಿಮೆಯಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular