HomeEntertainmentಹೃದಯಾಘಾತದಿಂದ ನಟ ನಿತಿನ್ ಗೋಪಿ ನಿಧನ

ಹೃದಯಾಘಾತದಿಂದ ನಟ ನಿತಿನ್ ಗೋಪಿ ನಿಧನ

ಬೆಂಗಳೂರು: ಸ್ಯಾಂಡಲ್ವುಡ್ ಗೆ ಮತ್ತೊಂದು ಆಘಾತ ಎದುರಾಗಿದೆ. ನಟ ನಿತಿನ್ ಗೋಪಿ(39) ಹೃದಯಾಘಾತದಿಂದ ನಿಧನರಾಗಿದ್ದಾರೆ.

1996ರಲ್ಲಿ ಬಿಡುಗಡೆಯಾಗಿದ್ದ ಡಾ. ವಿಷ್ಣುವರ್ಧನ್ ಅಭಿನಯದ ‘ಹಲೋ ಡ್ಯಾಡಿ’ ಚಿತ್ರದಲ್ಲಿ ವಿಷ್ಣು ಪುತ್ರನಾಗಿ ನಿತಿನ್ ಗೋಪಿ ನಟಿಸಿದ್ದರು. ‘ಶಾಲೆಗೆ ಈ ದಿನ ರಜಾ…’ ಹಾಡನ್ನು ಜನ ಈಗಲೂ ಗುನುಗುನುಗಿಸುತ್ತಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಂಗಳೂರಿನ ಇಟ್ಟಮಡುವಿನ ಅಪಾರ್ಟ್ಮೆಂಟ್ ನಲ್ಲಿ ತಂದೆ, ತಾಯಿಯೊಂದಿಗೆ ನಿತಿನ್ ವಾಸವಾಗಿದ್ದು, ಇಂದು ಬೆಳಗಿನಜಾವ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾರೆ.

ಅವರ ತಂದೆ ಗೋಪಿ ಅವರು ಖ್ಯಾತ ಕೊಳಲು ವಾದಕರಾಗಿದ್ದಾರೆ. ನಿತಿನ್ ನಿಧನದ ಸುದ್ದಿ ತಿಳಿದ ಚಿತ್ರರಂಗ ಹಾಗೂ ಕಿರುತೆರೆ ಕಲಾವಿದರು ಕಂಬನಿ ಮಿಡಿದಿದ್ದಾರೆ. ‘ಮುತ್ತಿನಂತ ಹೆಂಡತಿ’, ‘ನಿಶಬ್ದ’, ‘ಚಿರಬಾಂಧವ್ಯ’, ‘ಹಲೋ ಡ್ಯಾಡಿ’, ‘ಕೆರಳಿದ ಕೇಸರಿ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಿತಿನ್ ಗೋಪಿ ನಟಿಸಿದ್ದರು. ಹಲವು ಧಾರಾವಾಹಿಗಳನ್ನು ನಿರ್ದೇಶನ ಮಾಡಿದ್ದು, ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular