HomeEntertainmentಶೀಘ್ರದಲ್ಲೇ ಬಿಡುಗಡೆಯಾಗಲಿದೆ 'ಹೆಜ್ಜಾರು' ಚಿತ್ರದ ರೋಮ್ಯಾಂಟಿಕ್ ಹಾಡು

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ‘ಹೆಜ್ಜಾರು’ ಚಿತ್ರದ ರೋಮ್ಯಾಂಟಿಕ್ ಹಾಡು

ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಹರ್ಷಪ್ರಿಯ ನಿರ್ದೇಶನದ ‘ಹೆಜ್ಜಾರು’ ಚಿತ್ರದ ರೋಮ್ಯಾಂಟಿಕ್ ಮೆಲೋಡಿ ಹಾಡು ಶೀಘ್ರದಲ್ಲೇ ರಾಂಜಿ ರಿದಮ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಇಂದು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದೆ.

ಈ ಚಿತ್ರವನ್ನು ಗಗನ ಎಂಟರ್ಪ್ರೈಸಸ್ ಬ್ಯಾನರ್ ನಲ್ಲಿ ವಿಮಲಾ ಎನ್ ನಿರ್ಮಾಣ ಮಾಡಿದ್ದು, ಸುನಿತಾ ಟಿ ಆರ್ ಸಹ ನಿರ್ಮಾಪಕರಾಗಿದ್ದಾರೆ. ಭಗತ್ ಸೇರಿದಂತೆ ಲಿಯೋನಿಲ್ಲ ಶ್ವೇತ ಡಿಸೋಜಾ, ಗೋಪಾಲ್ ದೇಶಪಾಂಡೆ, ನವೀನ್ ಕೃಷ್ಣ, ಅರುಣ ಬಾಲರಾಜ್ ಬಣ್ಣ ಹಚ್ಚಿದ್ದಾರೆ.

ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆ ನೀಡಿದ್ದು, ಅಜಿತ್ ದ್ರಾಕುಲ ಸಂಕಲನ, ಅಮರ ಗೌಡ ಛಾಯಾಗ್ರಹಣವಿದೆ. ಕನ್ನಡದ ಮೊಟ್ಟ ಮೊದಲ ಪ್ಯಾರಲಲ್ ಲೈಫ್ ಸ್ಟೋರಿ ಸಿನಿಮಾ ಇದಾಗಿದ್ದು, ಇನ್ನೇನು ಬಿಡುಗಡೆಗೆ ಸಜ್ಜಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular