HomeKarnatakaBIG NEWS : ಬೆಂಗಳೂರಿನ ಫುಟ್ಪಾತ್’ನಲ್ಲಿ ಮತ್ತೆ ಅಂಗಡಿ ಇಟ್ಟರೆ ಭಾರಿ ದಂಡ..! ಸಚಿವ ಕೃಷ್ಣ...

BIG NEWS : ಬೆಂಗಳೂರಿನ ಫುಟ್ಪಾತ್’ನಲ್ಲಿ ಮತ್ತೆ ಅಂಗಡಿ ಇಟ್ಟರೆ ಭಾರಿ ದಂಡ..! ಸಚಿವ ಕೃಷ್ಣ ಭೈರೇಗೌಡ ಖಡಕ್ ಸೂಚನೆ

ಬೆಂಗಳೂರು : ಬೆಂಗಳೂರಿನಲ್ಲಿ ಸುರಕ್ಷಿತ ಫುಟ್‌ಪಾತ್ ಅಭಿಯಾನದಡಿ ಇದುವರೆಗೆ ಸುಮಾರು 490 ಕಿಲೋಮೀಟರ್‌ಗೂ ಹೆಚ್ಚು ಫುಟ್‌ಪಾತ್‌ಗಳನ್ನು ಅತಿಕ್ರಮಣದಿಂದ ಮುಕ್ತಗೊಳಿಸಿದರೂ, ಹಲವೆಡೆ ಬೀದಿಬದಿ ವ್ಯಾಪಾರಿಗಳು ಮತ್ತೆ ಫುಟ್‌ಪಾತ್‌ಗಳನ್ನು ಆಕ್ರಮಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಮರುಪರಿಶೀಲನೆ ನಡೆಸುವಂತೆ ಹಾಗೂ ನಿಯಮ ಉಲ್ಲಂಘಿಸುವವರ ವಿರುದ್ಧ ಭಾರೀ ದಂಡ ವಿಧಿಸುವಂತೆ ಸೂಚಿಸಿದ್ದಾರೆ.

ಹೌದು.   ಬೆಂಗಳೂರು ನಗರದಲ್ಲಿ ಫುಟ್‌ಪಾತ್‌ಗಳನ್ನು ಅತಿಕ್ರಮಣದಿಂದ ಮುಕ್ತಗೊಳಿಸಲು ಸರ್ಕಾರ ಮತ್ತೊಮ್ಮೆ ಕಠಿಣ ಕ್ರಮಕ್ಕೆ ಮುಂದಾಗಿದೆ. ಈಗಾಗಲೇ ತೆರವುಗೊಳಿಸಿದ ಫುಟ್‌ಪಾತ್‌ಗಳಲ್ಲಿ ಮತ್ತೆ ಅಂಗಡಿ, ತಳ್ಳುಗಾಡಿ ಅಥವಾ ಇತರೆ ಅತಿಕ್ರಮಣ ಕಂಡುಬಂದರೆ ಭಾರಿ ದಂಡ ವಿಧಿಸುವಂತೆ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಮರುಪರಿಶೀಲನೆ ನಡೆಸಿ ನಿಯಮ ಉಲ್ಲಂಘಿಸುವವರ ವಿರುದ್ಧ ಯಾವುದೇ ವಿನಾಯಿತಿ ನೀಡದಂತೆ ಸೂಚಿಸಲಾಗಿದೆ.

ನಗರದ ಪ್ರಮುಖ ರಸ್ತೆಗಳಲ್ಲಿನ ಫುಟ್‌ಪಾತ್‌ಗಳನ್ನು ಪಾದಚಾರಿಗಳಿಗೆ ಸುರಕ್ಷಿತವಾಗಿ ಬಳಸುವ ಉದ್ದೇಶದಿಂದ ಸರ್ಕಾರ ವಿಶೇಷ ಕಾರ್ಯಾಚರಣೆ ನಡೆಸಿತ್ತು. ಆದರೆ ತೆರವು ಕಾರ್ಯಾಚರಣೆಯ ಕೆಲವೇ ದಿನಗಳಲ್ಲಿ ಕೆಲವು ವ್ಯಾಪಾರಿಗಳು ಮತ್ತೆ ಫುಟ್‌ಪಾತ್‌ಗಳ ಮೇಲೆ ಅಂಗಡಿ, ತಳ್ಳುಗಾಡಿ ಹಾಗೂ ವಸ್ತುಗಳನ್ನು ಇಟ್ಟು ವ್ಯಾಪಾರ ಆರಂಭಿಸಿರುವುದು ಪತ್ತೆಯಾಗಿದೆ. ಇದರಿಂದ ಪಾದಚಾರಿಗಳು ಮತ್ತೆ ರಸ್ತೆಯಲ್ಲೇ ನಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ತಕ್ಷಣವೇ ಮರುಪರಿಶೀಲನೆ ನಡೆಸಿ ಅತಿಕ್ರಮಣ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳುವಂತೆ ಸಚಿವರು ಸೂಚಿಸಿದ್ದಾರೆ. ಕೇವಲ ವ್ಯಾಪಾರಿಗಳಷ್ಟೇ ಅಲ್ಲದೆ, ಫುಟ್‌ಪಾತ್‌ಗಳನ್ನು ಅಡ್ಡಿಪಡಿಸುವ ಅನಧಿಕೃತ ಪಾರ್ಕಿಂಗ್‌, ತ್ಯಜಿಸಿದ ವಾಹನಗಳು, ಜಾಹೀರಾತು ಫಲಕಗಳು ಹಾಗೂ ಇತರ ಅಡೆತಡೆಗಳನ್ನೂ ತೆರವುಗೊಳಿಸುವಂತೆ ನಿರ್ದೇಶನ ನೀಡಲಾಗಿದೆ. ನಿಯಮ ಉಲ್ಲಂಘಿಸುವವರ ಮೇಲೆ ಭಾರೀ ದಂಡ ವಿಧಿಸಿ, ಅಗತ್ಯವಿದ್ದರೆ ವಸ್ತುಗಳನ್ನು ವಶಪಡಿಸಿಕೊಳ್ಳುವ ಕ್ರಮವೂ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ಸರ್ಕಾರವು ಈ ಅಭಿಯಾನದ ಉದ್ದೇಶ ಬೀದಿಬದಿ ವ್ಯಾಪಾರಿಗಳನ್ನು ಸಂಪೂರ್ಣವಾಗಿ ತೆರವುಗೊಳಿಸುವುದಲ್ಲ, ಬದಲಾಗಿ ಪಾದಚಾರಿಗಳ ಹಕ್ಕನ್ನು ರಕ್ಷಿಸುವ ಜೊತೆಗೆ ಕಾನೂನುಬದ್ಧವಾಗಿ ನಿಗದಿಪಡಿಸಿದ ವ್ಯಾಪಾರ ವಲಯಗಳಿಗೆ ಅವರನ್ನು ಸ್ಥಳಾಂತರಿಸುವುದಾಗಿದೆ ಎಂದು ಪುನರುಚ್ಚರಿಸಿದೆ. ಅಧಿಕಾರಿಗಳು ನಿರಂತರ ನಿಗಾವಹಿಸಿ ಫುಟ್‌ಪಾತ್‌ಗಳು ಮತ್ತೆ ಅತಿಕ್ರಮಣವಾಗದಂತೆ ಕ್ರಮ ಕೈಗೊಳ್ಳಲಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular