ಬೆಂಗಳೂರು: ರಾಜ್ಯಾದ್ಯಂತ ಇಳೆಯ ತಾಪಮಾನ ಏರುತ್ತಲೇ ಇದೆ. ಮಳೆರಾಯ ಇನ್ನು ಕರುಣೆ ತೋರದ ಕಾರಣ ಭುವಿ ಸುಡುವಂತಾಗಿದ್ದು, ಹವಾಮಾನ ತಜ್ಞರು ಹೀಟ್ವೇವ್ (Heatwave) ಅಥವಾ ಶಾಖದ ಅಲೆಗಳ ಎಚ್ಚರಿಕೆ ನೀಡುತ್ತಿದ್ದಾರೆ. ಈ ಸುಡುವ ಬಿಸಿಲು ಕೇವಲ ಸುಸ್ತು ತರುವುದು ಮಾತ್ರವಲ್ಲ, ಅಜಾಗರೂಕರಾಗಿದ್ದರೆ ಪ್ರಾಣಕ್ಕೆ ಅಪಾಯವನ್ನೂ ತರಬಲ್ಲದು
ಆಹಾರ ಲಘುವಾಗಿರಲಿ: ಎಣ್ಣೆ, ಮಸಾಲೆ, ಖಾರ, ಜಿಡ್ಡಿನ ಆಹಾರಗಳು ಹೆಚ್ಚಿದಷ್ಟೂ ದೇಹಕ್ಕೆ ಅವುಗಳನ್ನು ಜೀರ್ಣಿಸುವಲ್ಲಿ ತೊಂದರೆ. ಯಾವುದೇ ರೀತಿಯ ಕೆಫೇನ್ ಮತ್ತು ಆಲ್ಕೊಹಾಲ್ ದೂರ ಇರಿಸಿ. ದ್ರಾಕ್ಷಿ, ದಾಳಿಂಬೆ, ಕಲ್ಲಂಗಡಿ, ಕಿತ್ತಳೆಯಂಥ ರಸಭರಿತ ಹಣ್ಣುಗಳು, ಸಲಾಡ್ಗಳು, ಸೌತೇಕಾಯಿಯಂಥ ತರಕಾರಿಗಳು ಊಟದ ಭಾಗವಾಗಿರಲಿ. ಇದರಿಂದ ದೇಹದ ಉಷ್ಣತೆ ಹೆಚ್ಚಿ, ಆರೋಗ್ಯದ ಸಮಸ್ಯೆಗಳಾಗುವುದನ್ನು ತಪ್ಪಿಸಬಹುದು. ಬೆಳಗಿನ ಹನ್ನೊಂದು ಗಂಟೆಯಿಂದ ಸಂಜೆ ನಾಲ್ಕು ಗಂಟೆಯವರೆಗೆ ಬಿಸಿಲಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಿ. ವೃದ್ಧರಿಗಂತೂ ಈ ಸಮಯ ಖಂಡಿತಕ್ಕೂ ಹೇಳಿಸಿದ್ದಲ್ಲ. ಹೊರಗಿನ ಕೆಲಸಗಳಿಗೆ ತಂಪು ಹೊತ್ತನ್ನೇ ಆಯ್ದುಕೊಳ್ಳಿ. ಈ ಅವಧಿ ಯಲ್ಲಿ ಮಕ್ಕಳನ್ನು ಮನೆಯೊಳಗೆ ಮಾತ್ರವೇ ಆಡುವುದಕ್ಕೆ ಬಿಡಿ. ಸಾಕು ಪ್ರಾಣಿಗಳಿಗೂ ನೆರಳು ಅಗತ್ಯ. ಅವುಗಳಿಗೆ ಸಾಕಷ್ಟು ನೀರುಣಿಸಿ.
ಬಿಸಿಲಿನ ಆಘಾತವಾದರೆ ಏನು ಮಾಡಬೇಕು?
ತಕ್ಷಣ ವ್ಯಕ್ತಿಯನ್ನು ನೆರಳಿಗೆ ಕರೆತನ್ನಿ.
ಬಿಗಿಯಾದ ಬಟ್ಟೆಗಳನ್ನು ಸಡಿಲಗೊಳಿಸಿ, ಮೈಗೆ ತಂಪಾದ ಗಾಳಿ ಬೀಸಿ.
ತಂಪಾದ ನೀರು, ಎಳನೀರು ಅಥವಾ ORS ಅನ್ನು ಸ್ವಲ್ಪ ಸ್ವಲ್ಪವಾಗಿ ಕುಡಿಸಿ.
ಒದ್ದೆ ಬಟ್ಟೆಯಿಂದ ಮೈ ಒರೆಸಿ ಉಷ್ಣತೆ ಕಡಿಮೆ ಮಾಡಿ. ಅರ್ಧ ತಾಸಿನಲ್ಲಿ ಸುಧಾರಿಸದಿದ್ದರೆ ಕೂಡಲೇ ಆಸ್ಪತ್ರೆಗೆ ಸೇರಿಸಿ.
ತಡೆಯುವುದು ಹೇಗೆ? (Prevention is better than cure)
ನೀರು ಕುಡಿಯಿರಿ: ಬಾಯಾರಿಕೆ ಆಗದಿದ್ದರೂ ದಿನವಿಡೀ ನೀರು ಕುಡಿಯುತ್ತಿರಿ. ಮಜ್ಜಿಗೆ, ಎಳನೀರು, ಕಬ್ಬಿನ ರಸ ಮತ್ತು ರಾಗಿ ಅಂಬಲಿ ದೇಹಕ್ಕೆ ಅಮೃತವಿದ್ದಂತೆ.
ಲಘು ಆಹಾರ: ಅತಿಯಾದ ಮಸಾಲೆ, ಎಣ್ಣೆ ಮತ್ತು ಜಿಡ್ಡಿನ ಆಹಾರ ಬೇಡ. ಹಣ್ಣು ಮತ್ತು ಸಲಾಡ್ಗಳಿಗೆ ಹೆಚ್ಚಿನ ಆದ್ಯತೆ ನೀಡಿ.
ಸಮಯ ಪ್ರಜ್ಞೆ: ಬೆಳಗ್ಗೆ 11 ರಿಂದ ಸಂಜೆ 4 ರವರೆಗೆ ಬಿಸಿಲಿಗೆ ಹೋಗಬೇಡಿ. ವೃದ್ಧರು ಮತ್ತು ಮಕ್ಕಳು ಮನೆಯೊಳಗಿರಲಿ.
ಸಾಕುಪ್ರಾಣಿಗಳ ಕಾಳಜಿ: ನಿಮ್ಮ ಮನೆಯ ಸಾಕುಪ್ರಾಣಿಗಳಿಗೂ ನೆರಳು ಮತ್ತು ಸಾಕಷ್ಟು ನೀರು ನೀಡುವುದನ್ನು ಮರೆಯಬೇಡಿ.
ಹೊರಗೆ ಹೋಗುವಾಗ ಛತ್ರಿ ಅಥವಾ ಟೋಪಿ ಬಳಸಿ. ಬಿಸಿಲಿನ ತೀವ್ರತೆ ಹೆಚ್ಚಿರುವಾಗ ಕಾಫಿ, ಟೀ ಅಥವಾ ಆಲ್ಕೋಹಾಲ್ ಸೇವನೆಯಿಂದ ದೂರವಿರಿ, ಏಕೆಂದರೆ ಇವು ದೇಹವನ್ನು ಮತ್ತಷ್ಟು ನಿರ್ಜಲೀಕರಣ (Dehydration) ಮಾಡುತ್ತವೆ.

