HomeLive Newsಹೀಟ್ ಸ್ಟ್ರೋಕ್: ಜನಗಣಿತಿ ಕಾರ್ಯದಲ್ಲಿ ತೊಡಗಿದ್ದ ಮತ್ತಿಬ್ಬರು ಶಿಕ್ಷಕರು ಸಾವು

ಹೀಟ್ ಸ್ಟ್ರೋಕ್: ಜನಗಣಿತಿ ಕಾರ್ಯದಲ್ಲಿ ತೊಡಗಿದ್ದ ಮತ್ತಿಬ್ಬರು ಶಿಕ್ಷಕರು ಸಾವು

ಭುವನೇಶ್ವರ: ದೇಶಾದ್ಯಂತ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ರಣ ಬಿಸಿಲ ಝಳಕ್ಕೆ ಹಿಟ್ ಸ್ಟ್ರೋಕ್ ಆಗಿ ಸಾವು-ನೋವುಗಳು ಸಂಭವಿಸುತ್ತಿವೆ. ಕೆಲ ದಿನಗಳ ಹಿಂದೆ ಜನಗಣತಿ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದ ವೇಳೆ ಶಾಲೆಯ ಮುಖ್ಯಶಿಕ್ಷಕರೊಬ್ಬರು ಉಷ್ಣಾಘಾತದಿಂದ ಸಾವನ್ನಪ್ಪಿದ್ದ ಘಟನೆ ಭುವನೇಶ್ವರದಲ್ಲಿ ವರದಿಯಾಗಿತ್ತು. ಈ ಘಟನೆ ಮಾಸುವ ಮುನ್ನವೇ ಇದೀಗ ಮತ್ತೆ ಇಬ್ಬರು ಶಿಕ್ಷಕರು ಹೀಟ್ ಸ್ಟ್ರೋಕ್ ನಿಂದ ಬಲಿಯಾಗಿದ್ದಾರೆ.

ಒಡಿಶಾದ ಮಯೂರ್ ಗಂಜ್ ಹಾಗೂ ಸುಂದರಘರ್ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದೆ. ಜನಗಣತೊಗೆ ಹೋಗಿದ್ದ ಇಬ್ಬರು ಶಿಕ್ಷಕರು ತಾಪಮಾನ ಏರಿಕೆಯ್ಂದ ತೀವ್ರವಾಗಿ ಬಳಲಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಮೃತರನ್ನು ಮಯೂರ್ ಗಂಜ್ ಜಿಲ್ಲೆಯ ಬೇಟ್ ನೋಟ್ ಬ್ಲಾಕ್ ನ ವೈದ್ಯನಾಥ್ ಹೈಸ್ಕೂಲು ಶಿಕ್ಷಕ ರಾಜಕುಮಾರ್ ಹೆಂಬ್ರಾಮ್ ಹಗೂ ಸುಂದರ್ ಘರ್ ಜಿಲ್ಲೆಯ ಗುರುಂಡಿಯಾ ಬ್ಲಾಕ್ ನ ಜರ್ದಾ ಸರ್ಕಾರಿ ಹೈಸ್ಕೂಲ್ ಶಿಕ್ಷಕ ಅನುರಾಗ್ ಎಕ್ಕಾ ಎಂದು ಗುರುತಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಬ್ಬರೂ ಶಿಕ್ಷಕರು ತಮಗೆ ನಿಯೋಜಿಸಿದ್ದ ಹಳ್ಳಿಯಲ್ಲಿ ಜನಗಣತಿ ಕಾರ್ಯದಲ್ಲಿ ತೊಡಗಿದ್ದರು. ಎರಡೂ ಜಿಲ್ಲೆಗಳಲ್ಲಿಯೂ ಉಷ್ಣಾಂಶ 37 ಡಿಗ್ರಿ ಸೆಲ್ಸಿಯಸ್ ದಾಟಿತ್ತು. ಬಿಸಿಲ ಝಳ ತಾಳಲಾರದೇ ಇಬ್ಬರೂ ತೀವ್ರವಾಗಿ ಅಸ್ವಸ್ಥರಾಗಿದ್ದರು. ಇಬ್ಬರನ್ನೂ ಪ್ರತ್ಯೇಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಬ್ಬರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

ಒಡಿಶಾದಾದ್ಯಂತ ಉಷ್ಣ ಅಲೆ ಹೆಚ್ಚುತ್ತಿದ್ದು, ಹವಾಮಾನ ಇಲಾಖೆ ಹೀಟ್ ವೇವ್ ಎಚ್ಚರಿಕೆ ನೀಡಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular