HomeKarnatakaBIG NEWS: ಅಪ್ರಾಪ್ತ ಬಾಲಕಿಗೆ ಮದುವೆಗೆ ಮುಂದಾಗಿದ್ದ ವೇಳೆಯೇ ಪೊಲೀಸರ ಎಂಟ್ರಿ: ಬಾಲ್ಯವಿವಾಹ ನಿಲ್ಲಿಸಿದ ಅಕ್ಕ...

BIG NEWS: ಅಪ್ರಾಪ್ತ ಬಾಲಕಿಗೆ ಮದುವೆಗೆ ಮುಂದಾಗಿದ್ದ ವೇಳೆಯೇ ಪೊಲೀಸರ ಎಂಟ್ರಿ: ಬಾಲ್ಯವಿವಾಹ ನಿಲ್ಲಿಸಿದ ಅಕ್ಕ ಪಡೆ

ಬೆಳಗಾವಿ: ಅಪ್ರಾಪ್ತ ಬಾಲಕಿಗೆ ಪೋಷಕರು ರಾತ್ರೋರಾತ್ರಿ ವಿವಾಹ ಮಾಡಲು ಮುಂದಾಗಿದ್ದ ವೇಳೆ ಪೊಲೀಸ್ ಸಿಬ್ಬಂದಿಗಳು ಮನೆಗೆ ಎಂಟ್ರಿ ಕೊಟ್ಟಿದ್ದು, ಬಾಲ್ಯವಿವಾಹವೊಂದನ್ನು ತಡೆದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಶಿಕ್ಷಣ ವ್ಯವಸ್ಥೆ, ಆಧುನಿಕ ಜಗತ್ತು ಎಷ್ಟೇ ಮುಂದುವರೆದರೂ ಬಾಲ್ಯವಿವಾಹದಂತದ ಪಿಡುಗು ಇನ್ನೂ ಜೀವಂತವಾಗಿರುವುದು ನಿಜಕ್ಕೂ ದುರಂತವೇ ಸರಿ. ಗಡಿ ಜಿಲ್ಲೆ ಬೆಳಗಾವಿಯಲ್ಲಿ ನಡೆಯುತ್ತಿದ್ದ ಬಾಲ್ಯವಿವಾಹವನ್ನು ಅಕ್ಕ ಪಡೆ ನಿಲ್ಲಿಸಿರುವ ಘಟನೆ ವರದಿಯಾಗಿದೆ.

ಬೆಳಗಾವಿ ನಗರದ ವಂಟಮೂರಿ ಕಾಲನಿಯಲ್ಲಿ ಏ.20 ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಪೊಲೀಸರು ರಾತ್ರಿ ಪೆಟ್ರೋಲಿಂಗ್ ನಡೆಸುತ್ತಿದ್ದ ವೇಳೆ ಅಕ್ಕ ಪಡೆ ಸಿಬ್ಬಂದಿ ಮನೆಯೊಂದರ ಮುಂದೆ ಮಂಟಪ ಹಾಕಿರುವುದನ್ನು ಕಂಡು ಮನೆಗೆ ಹೋಗಿ ವುಚಾರಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ಥಳಕ್ಕೆ ಅಕ್ಕ ಪಡೆ ಸಿಬ್ಬಂದಿ ತೆರಳಿ ವಿಚಾರಿಸಿದಾಗ ಮನೆಯಲ್ಲಿ ಬಾಲಕಿಯ ಮದುವೆ ಸಿದ್ಧತೆ ನಡೆಯುತ್ತಿದ್ದು, ಮಹಾರಾಷ್ಟ್ರದ ಪುಣಾ ನಿವಾಸಿಯೊಂದಿಗೆ ರಾತ್ರೋ ರಾತ್ರಿ ಮದುವೆ ನೆರವೇರಿಸಲು ತಯಾರಿ ನಡೆಸಿರುವುದು ಬೆಳಕಿಗೆ ಬಂದಿದೆ.

ಬಾಲಕಿಯ ಆಧಾರ್ ಕಾರ್ಡ್ ಹಾಗೂ ಜನನ ಪ್ರಮಾಣ ಪತ್ರ ಪರಿಶೀಲಿಸಿದಾಗ, ಆಕೆಗೆ ಕೇವಲ 17 ವರ್ಷ 4 ತಿಂಗಳು ಎಂಬುದು ಗೊತ್ತಾಗಿದೆ. ತಕ್ಷಣ ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ದಿಲೀಪ ನಿಂಬಾಳಕರ ಅವರಿಗೆ ಅಕ್ಕ ಪಡೆ ಮಾಹಿತಿ ನೀಡಿದ್ದು, ಅವರ ಮಾರ್ಗದರ್ಶನದಲ್ಲಿ ಮಕ್ಕಳ ಸಹಾಯವಾಣಿ ತಂಡ ಹಾಗೂ ಮಾಳಮಾರುತಿ ಪೊಲೀಸ್ ಠಾಣೆಯ 112 ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿ ಮದುವೆ ನಿಲ್ಲಿಸಿ ಬಾಲಕಿಯನ್ನು ರಕ್ಷಿಸಲಾಯಿತು.

ಬಾಲಕಿಯನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಲಾಗಿದೆ. ಮಗಳಿಗೆ ಬಾಲ್ಯ ವಿವಾಹಕ್ಕೆ ಮುಂದಾಗಿದ್ದ ತಂದೆ-ತಾಯಿ ವಿರುದ್ಧ ಬೆಳಗಾವಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular