HomeKarnatakaBIG NEWS: ಸ್ವಿಮಿಂಗ್ ಮಾಡುತ್ತಿದ್ದಾಗಲೇ ಹೃದಯಾಘಾತ: ಸೇನಾಧಿಕಾರಿ ಸಾವು

BIG NEWS: ಸ್ವಿಮಿಂಗ್ ಮಾಡುತ್ತಿದ್ದಾಗಲೇ ಹೃದಯಾಘಾತ: ಸೇನಾಧಿಕಾರಿ ಸಾವು

ಬೆಳಗಾವಿ: ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಮತ್ತೆ ಹೆಚ್ಚುತ್ತಿದೆ. ಸ್ವಿಮಿಂಗ್ ಮಾಡುತ್ತಿದ್ದಾಗಲೇ ಹೃದಯಾಘಾತ ಸಂಭವಿಸಿ ಸೇನಾಧಿಕಾರಿಯೊಬ್ಬರು ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿಯ ನಾನಾವಾಡಿಯ ಕಮಾಂಡೋ ವಿಂಗ್ ಆವರಣದಲ್ಲಿ ಈ ದುರಂತ ಸಂಭವಿಸಿದೆ. ಸ್ವಿಮಿಂಗ್ ಪೂಲ್ ನಲ್ಲಿ ಸ್ವಿಮ್ ಮಾಡುತ್ತಿದ್ದಾಗ ಹಠಾತ್ ಹೃದಯಘಾತ ಸಂಭವಿಸಿ ಸೇನಾಧಿಕಾರಿ ಕೊನೆಯುಸಿರೆಳೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹರಿಯಾಣ ಮೂಲದ ಲೆಫ್ಟಿನೆಂಟ್ ಅಮಿತ್ ಸಿಂಗ್ ಹೃದಯಾಘಾತದಿಂದ ಸಾವನ್ನಪ್ಪಿದವರು. ಇವರು ಬೆಳಗಾವಿಯ ಎಂಎಲೈ ಆರ್ ಸಿ ಕಮಾಂಡೋ ವಿಂಗ್ ನಲ್ಲಿ ಟ್ರೇನಿಂಗ್ ನಲ್ಲಿ ಅಧಿಕಾರಿಯಾಗಿದ್ದರು.

ಸ್ವಿಮ್ ಮಾಡುತ್ತಿದ್ದಾಗಲೇ ಅಮಿತ್ ಸಿಂಗ್ ಹೃದಯಗಹಾತಕ್ಕೊಳಗಾಗಿದ್ದಾರೆ. ತಕ್ಷಣ ಲೈಫ್ ಗಾರ್ಡ್ ಪ್ರದೀಪ್ ಕುಮಾರ್ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಬಳಿಕ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular