HomeLifestyleಆರೋಗ್ಯಕರ ʼಖರ್ಜೂರʼದ ಮಿಲ್ಕ್ ಶೇಕ್

ಆರೋಗ್ಯಕರ ʼಖರ್ಜೂರʼದ ಮಿಲ್ಕ್ ಶೇಕ್

ಆರೋಗ್ಯಕರ ಆಹಾರ ಸೇವನೆ ಮಾಡೋರ ಸಂಖ್ಯೆ ಬೆರಳೆಣಿಕೆಯಂತಾಗಿದೆ. ರುಚಿಕರ ಹಾಗೂ ಆರೋಗ್ಯಕ್ಕೆ ಅತ್ಯುತ್ತಮವಾಗಿರುವ ಖರ್ಜೂರದ ಶೇಕ್ ಮಾಡೋದು ಹೇಗೆ ಅಂತಾ ಹೇಳ್ತೇವೆ. ಸುಲಭವಾಗಿ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ.

ಖರ್ಜೂರದ ಶೇಕ್ ಮಾಡಲು ಬೇಕಾಗುವ ಪದಾರ್ಥ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ವಲ್ಪ ಖರ್ಜೂರ

3-4 ಗೋಡಂಬಿ

2 ಏಲಕ್ಕಿ

2 ಕಪ್ ಹಾಲು

ಖರ್ಜೂರದ ಶೇಕ್ ಮಾಡುವ ವಿಧಾನ : ಮೊದಲು ಖರ್ಜೂರವನ್ನು ಚೆನ್ನಾಗಿ ತೊಳೆದುಕೊಳ್ಳಿ. ನಂತ್ರ ಅದ್ರ ಬೀಜವನ್ನು ತೆಗೆದು ಸಣ್ಣದಾಗಿ ಹೆಚ್ಚಿಕೊಳ್ಳಿ.

ಏಲಕ್ಕಿ ಸಿಪ್ಪೆ ತೆಗೆದು ಪುಡಿ ಮಾಡಿಕೊಳ್ಳಿ. ಇನ್ನೊಂದು ಕಡೆ ಗೋಡಂಬಿಯನ್ನು ಸ್ವಲ್ಪ ಬಿಸಿ ಮಾಡಿ. ನಂತ್ರ ಮಿಕ್ಸಿಗೆ ಖರ್ಜೂರ, ಗೋಡಂಬಿ ಹಾಗೂ ಹಾಲನ್ನು ಹಾಕಿ ರುಬ್ಬಿಕೊಳ್ಳಿ. ಇದಕ್ಕೆ ಏಲಕ್ಕಿ ಪುಡಿಯನ್ನು ಹಾಕಿ ಸರಿಯಾಗಿ ಮಿಕ್ಸ್ ಮಾಡಿ.

For Latest News Updates, Join Our Whatsapp Community🚩
RELATED ARTICLES

Most Popular