
ಪ್ರೋಟೀನ್ ಕೊರತೆ : ಆಹಾರದಲ್ಲಿ ಕಡಿಮೆ ಪ್ರೋಟೀನ್ ಇದ್ದರೆ ಆಗ ಹಸಿವು ಹೆಚ್ಚಾಗುತ್ತದೆ. ಪ್ರೋಟೀನ್ ಶಕ್ತಿ ನೀಡುವ ಜೊತೆಗೆ ಹಸಿವನ್ನು ಹೆಚ್ಚಿಸುವ ಹಾರ್ಮೋನ್ ನಿಯಂತ್ರಿಸುತ್ತದೆ. ಅದೇ ಪ್ರೋಟೀನ್ ದೇಹದಲ್ಲಿ ಕಡಿಮೆ ಆದಾಗ ಹಸಿವು ಹೆಚ್ಚಾಗುತ್ತದೆ.
ನಿದ್ರಾಹೀನತೆ : ನಿಮಗೆ ರಾತ್ರಿ ಸರಿಯಾಗಿ ನಿದ್ರೆ ಬರ್ತಿಲ್ಲ ಎಂದಾದ್ರೆ ನಿಮಗೆ ಪದೇ ಪದೇ ಹಸಿವಾಗೋದು ಹೆಚ್ಚು. ಪ್ರತಿ ದಿನ ಆರರಿಂದ ಏಳು ಗಂಟೆ ಸರಿಯಾಗಿ ನಿದ್ರೆ ಮಾಡಿದ್ರೆ ಈ ಹಸಿವಿನ ಸಮಸ್ಯೆ ಕಡಿಮೆ ಆಗುತ್ತದೆ.
ಫೈಬರ್ ಸಮಸ್ಯೆ : ನಿಮ್ಮ ದೇಹದಲ್ಲಿ ಸಾಕಷ್ಟು ಫೈಬರ್ ಇಲ್ಲದಿದ್ದಾಗ ಹಸಿವು ಕಾಡುತ್ತದೆ. ಫೈಬರ್ ನಿಂದ ಕೂಡಿರುವ ಆಹಾರ ಹಸಿವನ್ನು ನಿಯಂತ್ರಿಸುವ ಕೆಲಸ ಮಾಡುತ್ತದೆ. ಆಗ ನಿಮಗೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ.
ಒತ್ತಡ : ಅತಿಯಾದ ಒತ್ತಡ ಕೂಡ ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ಹಸಿವನ್ನು ಹೆಚ್ಚಿಸುತ್ತದೆ. ಒತ್ತಡ ಹೆಚ್ಚಾದಾಗ ಕಾರ್ಟಿಸೋಲ್ ಎಂಬ ಹಾರ್ಮೋನ್ ದೇಹದಲ್ಲಿ ಹೆಚ್ಚಾಗುತ್ತದೆ. ಇದು ಆಗಾಗ್ಗೆ ಹಸಿವನ್ನು ಉಂಟುಮಾಡುತ್ತದೆ.

