HomeLatest NewsBIG NEWS: ಮಗುವಿನ ಮೇಲೆ ಕಾದ ಕಬ್ಬಿಣದ ಸಲಾಕೆಯಿಂದ ಬರೆ ಹಾಕಿದ ಹೆತ್ತ ತಾಯಿ: ಸುಟ್ಟ...

BIG NEWS: ಮಗುವಿನ ಮೇಲೆ ಕಾದ ಕಬ್ಬಿಣದ ಸಲಾಕೆಯಿಂದ ಬರೆ ಹಾಕಿದ ಹೆತ್ತ ತಾಯಿ: ಸುಟ್ಟ ಗಾಯಗಳಿಂದ ಬಾಲಕನ ನರಳಾಟ

ಹುಬ್ಬಳ್ಳಿ: ಹೆತ್ತ ಮಗುವಿನ ಮೇಲೆಯೇ ತಾಯಿಯೊಬ್ಬಳು ರಾಕ್ಷಸೀಕೃತ್ಯವೆಸಗಿದ್ದಾಳೆ. ಮೂರು ವರ್ಷದ ಮಗನ ಮೇಲೆ ಮನಸೋ ಇಚ್ಛೆ ಕಬ್ಬಿಣದ ಸಲಾಕೆಯಿಂದ ಬರೆ ಎಳೆದು ಅಮಾನುಷವಗಾಇ ನಡೆದುಕೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಮಗ ಹಠ ಮಾಡುತ್ತಾನೆ. ಮಾತು ಕೇಳಲ್ಲ ಎಂಬ ಕಾರಣಕ್ಕೆ ಮಗುವಿನ ಪಾದ, ಕೈ-ಕಾಲುಗಳು, ಮುಖ, ಕುತ್ತಿಗೆಗೆ ಕಾದ ಕಬ್ಬಿಣದ ಸಲಾಕೆಯಿಂದ ಬರೆ ಎಳೆದಿದ್ದಾಳೆ. ಸುಟ್ಟ ಗಾಯಗಳಿಂದ ಮಗುವಿನ ಸ್ಥಿತಿ ಗಂಭೀರವಾಗಿದ್ದು, ನೋವಿನಿಂದ ಬಾಲಕ ನರಳಾಡುತ್ತಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅನುಷಾ ಎಂಬ ಮಹಿಳೆ ಮಗನ ಮೇಲೆ ಈ ರೀತಿ ಕ್ರೌರ್ಯ ಮೆರೆದು ಚಿತ್ರ ಹಿಂಸೆ ನೀಡಿದ್ದಾಳೆ. ಇದನ್ನು ಕಂಡ ಸ್ಥಳೀಯರು ಹಳೇ ಹುಬ್ಬಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಅಲ್ಲದೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮೀತಿಯವರಿಗೂ ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಆಗಮಿಸಿರುವ ಮಕ್ಕಳ ಕಲ್ಯಾಣ ಇಲಖೆ ಸಿಬ್ಬಂದಿ ಮಗುವನ್ನು ರಕ್ಷಿಸಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆ ಅನುಷಾ ತನ್ನ ಪೋಷಕರಿಂದ ಹಾಗೂ ಪತಿಯಿಂದಲೂ ದೂರವಿದ್ದು, ಮಗುವಿನೊಂದಿಗೆ ವಾಸವಾಗಿದ್ದಳು. ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular