
ಅಪಘಾತದ ನಂತರ, ವಾಹನದ ಬಾನೆಟ್ ಸಂಪೂರ್ಣವಾಗಿ ಹಾನಿಗೊಳಗಾಗಿದೆ. ಆದರೆ, ಅಚ್ಚರಿಯ ಸಂಗತಿಯೆಂದರೆ ಕಂಬವು ಕಾರಿನ ಮಧ್ಯದಲ್ಲಿ ಸಿಲುಕಿಕೊಂಡಿರುವುದು. ಕಾರು ಕಂಬಕ್ಕೆ ಡಿಕ್ಕಿ ಹೊಡೆದರೆ, ಅಪಘಾತವು ಮುಂಭಾಗದ ಬಾನೆಟ್‌ಗೆ ಹಾನಿಯಾಗಬೇಕಿತ್ತು. ಆದರೆ ವಿಂಡ್‌ಶೀಲ್ಡ್‌ನ ಮಧ್ಯಭಾಗದಲ್ಲಿ ಕಂಬ ಹೇಗೆ ಇಳಿಯಿತು ಎಂಬುದು ಇನ್ನೂ ನಿಗೂಢವಾಗಿದೆ. ವಾಹನವು ಸಂಪೂರ್ಣವಾಗಿ ಹಾನಿಗೊಳಗಾಗಿದ್ದರೂ, ವೈಪರ್ ಗಳು ಕಾರ್ಯನಿರ್ವಹಿಸುತ್ತವೆ. ಇಬ್ಬರು ವೀಕ್ಷಕರು ವಾಹನದ ಬಳಿ ನಿಂತಿರುವುದನ್ನು ಸಹ ಸೆರೆಹಿಡಿಯಲಾಗಿದೆ.
ಟ್ವಿಟ್ಟರ್ ಬಳಕೆದಾರರು ಅಪಘಾತವು ಹೇಗೆ ಸಂಭವಿಸಿರಬಹುದು ಎಂದು ಊಹಿಸಿದ್ದಾರೆ. ಅನೇಕರು ಕಂಬವು ಅರ್ಧದಷ್ಟು ಮುರಿದು ವಾಹನದೊಳಗೆ ಬಿದ್ದು, ಹಾಗೆಯೇ ನಿಂತುಕೊಂಡಿರಬಹುದು ಎಂದು ಕಾಮೆಂಟ್ ಮಾಡಿದ್ದಾರೆ. ಕಾರು ಕಂಬಕ್ಕೆ ಡಿಕ್ಕಿಯಾಗಿ, ಅರ್ಧಕ್ಕೆ ಛಿದ್ರಗೊಳಿಸಿರಬಹುದು. ತಂತಿಗಳ ಒತ್ತಡದಿಂದ ಕನಿಷ್ಠ ಒಂದು ಅಥವಾ ಎರಡು ಸೆಕೆಂಡುಗಳ ಕಾಲ ಕಂಬವನ್ನು ನೇತಾಡುವಂತೆ ಮಾಡಿ ಬಳಿಕ ಅದು ವಿಂಡ್‌ಶೀಲ್ಡ್‌ನ ಮೇಲೆ ಬಿದ್ದಿರಬಹುದು ಎಂದು ಊಹಿಸಿದ್ದಾರೆ.
ಸದ್ಯ, ಈ ವಿಡಿಯೋ ಟ್ವಿಟರ್ ನಲ್ಲಿ 5.2 ಮಿಲಿಯನ್ ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ.

