HomeKarnatakaBIG NEWS: ಹಾಸನ ಜೈಲಿನ ಮೇಲೆ ತಡರಾತ್ರಿ ಪೊಲೀಸರ ದಿಢೀರ್ ದಾಳಿ

BIG NEWS: ಹಾಸನ ಜೈಲಿನ ಮೇಲೆ ತಡರಾತ್ರಿ ಪೊಲೀಸರ ದಿಢೀರ್ ದಾಳಿ

ಹಾಸನ: ತಡರಾತ್ರಿ ಪೊಲೀಸರು ಹಾಸನದ ಜೈಲಿನ ಮೇಲೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಹಾಸನ ಎಸ್ಪಿ ತಮ್ಮಯ್ಯ ನೇತೃತ್ವದ ತಂಡ ಈ ದಾಳಿ ನಡೆಸಿದೆ.

ಸುಮಾರು 60 ಜನ ಪೊಲೀಸ್ ಸಿಬ್ಬಂದಿಗಳು ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಜೈಲಿನ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ 17 ಮೊಬೈಲ್ ಜಪ್ತಿ ಮಾಡಲಾಗಿದೆ. ಗಾಂಜಾ, ಬೀಡಿ, ಸಿಗರೇಟ್ ಸೇರಿದಂತೆ ಇನ್ನಿತರ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಿಂಡಲಗಾ ಹಾಗೂ ಶಿವಮೊಗ್ಗ ಜೈಲಿನಲ್ಲಿ ಹಣಕೊಟ್ಟ ಕೈದಿಗಳಿಗೆ ರಾಜಾತಿಥ್ಯ, ಮಾದಕ ವಸ್ತುಗಳ ಪೂರೈಕೆ, ಇತರ ಕೈದಿಗಳ ಮೇಲೆ ಸಿಬ್ಬಂದಿಗಳಿಂದ ಹಲ್ಲೆ ಆರೋಪಗಳು ಕೇಳಿಬಂದಿರುವ ಬೆನ್ನಲ್ಲೇ ಇದೀಗ ಪೊಲೀಸರು ಹಾಸನ ಜೈಲಿನ ಮೇಲೆ ಮಧ್ಯರಾತ್ರಿ ದಾಳಿ ನಡೆಸಿ ಪರಿಶೀಲಿಸಿದ್ದಾರೆ ಎನ್ನಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular