HomeKarnatakaBREAKING NEWS: ಡೆಂಘೀ ಮಹಾಮಾರಿಗೆ ಮತ್ತೋರ್ವ ಯುವತಿ ಬಲಿ; ಹಾಸನ ಜಿಲ್ಲೆಯಲ್ಲಿ 7 ಜನರು ಸೋಂಕಿನಿಂದ...

BREAKING NEWS: ಡೆಂಘೀ ಮಹಾಮಾರಿಗೆ ಮತ್ತೋರ್ವ ಯುವತಿ ಬಲಿ; ಹಾಸನ ಜಿಲ್ಲೆಯಲ್ಲಿ 7 ಜನರು ಸೋಂಕಿನಿಂದ ಸಾವು

ಹಾಸನ: ರಾಜ್ಯದಲ್ಲಿ ಡೆಂಘೀ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅದರಲ್ಲಿಯೂ ಹಾಸನ ಜಿಲ್ಲೆಯಲ್ಲಿ ಮಹಾಮಾರಿ ಅಟ್ಟಹಾಸಕ್ಕೆ ಮತ್ತೋರ್ವ ಯುವತಿ ಬಲಿಯಾಗಿದ್ದಾರೆ.

23 ವರ್ಷದ ಯುವತಿ ಸುಪ್ರಿತಾ ಶಂಕಿತ ಡೆಂಘೀ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಅರಸಿಕೆರೆ ತಾಲೂಕಿನ ಮುದುಡಿ ತಾಂಡಾದ ನಿವಾಸಿ ಸುಪ್ರಿತಾ ತೀವ್ರ ಜ್ವರದಿಂದ ಬಳಲುತ್ತಿದ್ದರು. ಇವರು ಜೂಲುನಾಯ್ಕ್, ಸುಮಿತ್ರಾದೇವಿ ದಂಪತಿಯ ಪುತ್ರಿ. ಸುಮಿತ್ರಾರನ್ನು ನಾಲ್ಕು ದಿನಗಳ ಹಿಂದೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.

ಚಿಕಿತ್ಸೆ ಪಡೆಯುತ್ತಿದ್ದ ಸುಪ್ರಿತಾಗೆ ಬಹು ಅಂಗಾಂಗ ವೈಫಲ್ಯ ಕಾಣಿಸಿಕೊಂಡಿದೆ. ಬಳಿಕ ಅವರನ್ನು ಹಾಸನ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಯುವತಿ ಸಾವನ್ನಪ್ಪಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಾಸನ ಜಿಲ್ಲೆಯಲ್ಲಿ ಶಂಕಿತ ಡೆಂಘೀ ಮಹಾಮಾರಿಗೆ ಈವರೆಗೆ ಮೂವರು ಮಕ್ಕಳು ಸೇರಿ 7 ಜನರು ಸಾವನ್ನಪ್ಪಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular