HomeKarnatakaBIG NEWS: ವಿಡಿಯೋ ಮಾಡಿಟ್ಟು ಗ್ರಾಮ ಪಂಚಾಯಿತಿ ಸದಸ್ಯನಿಂದ ಆತ್ಮಹತ್ಯೆಗೆ ಯತ್ನ

BIG NEWS: ವಿಡಿಯೋ ಮಾಡಿಟ್ಟು ಗ್ರಾಮ ಪಂಚಾಯಿತಿ ಸದಸ್ಯನಿಂದ ಆತ್ಮಹತ್ಯೆಗೆ ಯತ್ನ

ಚಿತ್ರದುರ್ಗ: ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿತ್ರದುರ್ಗ ಜಿಲ್ಲೆಯ ನಾಗರಕಟ್ಟೆಯಲ್ಲಿ ನಡೆದಿದೆ.

ನಾಗರಕಟ್ಟೆ ಗ್ರಾಮ ಪಂಚಾಯಿತಿ ಸದಸ್ಯ ರಾಜು ಆತ್ಮಹತ್ಯೆಗೆ ಯತ್ನಿಸಿದವರು. ಆತ್ಮಹತ್ಯೆ ಯತ್ನಕ್ಕೂ ಮುನ್ನ ವಿಡಿಯೋ ಮಾಡಿದ್ದ ರಾಜು, ಅತ್ತಿಮಗ್ಗೆ ಗ್ರಾಮದ ಕೃಷ್ಣಮೂರ್ತಿ ಎಂಬುವವರ ವಿರುದ್ಧ ಆರೋಪ ಮಾಡಿದ್ದು, ನನ್ನ ಸಾವಿಗೆ ಕೃಷ್ಣಮೂರ್ತಿ ಎಂಬುವವರು ಕಾರಣ. ನಾನು ಸತ್ತ ಮೇಲೆ ಫ್ಲೆಕ್ಸ್ ಹಾಕಿಸಲು 10 ಸಾವಿರ ಹಣ ನೀಡಿದ್ದೇನೆ. ಡಿಸಿ, ಎಸಿಪಿ ಬರುವವರೆಗೂ ಶವ ಎತ್ತಬೇಡಿ ಎಂದು ವಿಡಿಯೋ ಮಾಡಿಟ್ಟಿದ್ದಾರೆ.

ಬಳಿಕ ಕೃಷ್ಣಮೂರ್ತಿ ಅವರ ಜಮೀನಿಗೆ ತೆರಳಿ ಅಲ್ಲಿಯೇ ಕುಡಿದ ಮತ್ತಿನಲ್ಲಿ ವಿಷಸೇವಿಸಿದ್ದು, ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ರಾಜುನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular