HomeLatest NewsBIG NEWS: ರಸ್ತೆಬದಿ ನಿಂತಿದ್ದ ಕಾರಿನಿಂದ 6.30 ಲಕ್ಷ ಹಣ ಕದ್ದು ಪರಾರಿಯಾದ ಕಳ್ಳ!

BIG NEWS: ರಸ್ತೆಬದಿ ನಿಂತಿದ್ದ ಕಾರಿನಿಂದ 6.30 ಲಕ್ಷ ಹಣ ಕದ್ದು ಪರಾರಿಯಾದ ಕಳ್ಳ!

ಹಾಸನ: ರಸ್ತೆಬದಿ ನಿಲ್ಲಿಸಿದ್ದ ಕಾರಿನ ಡೋರ್ ತೆಗೆದು ಕಳ್ಳನೊಬ್ಬ 6.30 ಲಕ್ಷ ರೂಪಾಯಿ ಹಣ ಕದ್ದು ಪರಾರಿಯಾಗಿರುವ ಘಟನೆ ಹಾಸನದಲ್ಲಿ ನಡೆದಿದೆ.

ಅರಸೀಕೆರೆ ಪಟ್ಟಣದ ಸುಭಾಷ್ ನಗರದಲ್ಲಿ ಈ ಘಟನೆ ನಡೆದಿದೆ. ತಮಿಳುನಾಡು ಮೂಲದ ಸುರೇಶ್ ಎಂಬುವವರ ಕಾರಿನಿಂದ ಹಣ ಕದ್ದು ಕಳ್ಳ ಪರಾರಿಯಾಗಿದ್ದಾನೆ. ಅರಸೀಕೆರೆ ಫೆಡರಲ್ ಬ್ಯಾಂಕ್ ನಿಂದ ಸುಭಾಷ್ 6 ಲಕ್ಷ ಹಣ ಡ್ರಾಮಾಡಿಕೊಂಡು ಬಂದಿದ್ದರು. ಇದರ ಜೊತೆಗೆ ತಮ್ಮ ಬಳಿ ಇದ್ದ 30 ಸಾವಿರ ಸೇರಿಸಿ ಕಾರಿನಲ್ಲಿ ಇಟ್ಟಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎಪಿಎಂಸಿ ಮುಂಭಾಗ ಇರುವ ತಮ್ಮ ಅಂಗಡಿ ಮುಂದೆ ಕಾರು ನಿಲ್ಲಿಸಿದ್ದರು. ತಮ್ಮದೇ ಅಂಗಡಿಗೆ ಹೋಗಿ ಬರುವಷ್ಟರಲ್ಲ್ಲಿ ಕಾರಿನಲ್ಲಿದ್ದ ಹಣ ಕಳುವಾಗಿದೆ. ಸಿಸಿಟಿವಿ ಪರಿಶೀಲಿಸಿದಾಗ ಕಳ್ಳ ಹಣ ಕದ್ದು ಪರಾರಿಯಾಗಿರುವುದು ಬೆಳಕಿಗೆ ಬಂದಿದೆ.

ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular