ಡಿಜಿಟಲ್ ಯುಗದಲ್ಲಿ ವಂಚಕರು ನಿಮ್ಮ ಪಾನ್ (PAN) ಕಾರ್ಡ್ ವಿವರಗಳನ್ನು ಬಳಸಿ ನಿಮ್ಮ ಅರಿವಿಲ್ಲದೆಯೇ ಸಾಲ ಪಡೆಯುವ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿವೆ. ನಿಮ್ಮ ಸಿಬಿಲ್ (CIBIL) ಸ್ಕೋರ್ ಹಾಳುಮಾಡುವ ಮತ್ತು ನಿಮ್ಮನ್ನು ಸಾಲಗಾರನನ್ನಾಗಿ ಮಾಡುವ ಇಂತಹ ವಂಚನೆಗಳಿಂದ ಪಾರಾಗಲು ಸಮಯಕ್ಕೆ ಸರಿಯಾಗಿ ಕ್ರೆಡಿಟ್ ರಿಪೋರ್ಟ್ ಪರಿಶೀಲಿಸುವುದು ಅತ್ಯಗತ್ಯ.
ಹೌದು.ಡಿಜಿಟಲ್ ವಹಿವಾಟುಗಳು ಹೆಚ್ಚಾದಂತೆ ಪಾನ್ ಕಾರ್ಡ್ (PAN) ದುರುಪಯೋಗದ ಪ್ರಕರಣಗಳೂ ಹೆಚ್ಚುತ್ತಿವೆ. ನಿಮ್ಮ ಅನುಮತಿಯಿಲ್ಲದೆಯೇ ನಿಮ್ಮ ಪಾನ್ ವಿವರಗಳನ್ನು ಬಳಸಿ ಬೇರೆಯವರು ಸಾಲ ಪಡೆಯುವ ಆಘಾತಕಾರಿ ಘಟನೆಗಳು ನಡೆಯುತ್ತಿವೆ. ಈ ಬಗ್ಗೆ ಜಾಗೃತರಾಗಿರಲು ಆರ್ಥಿಕ ತಜ್ಞರು ಕೆಲವು ಸುಲಭ ಮಾರ್ಗಗಳನ್ನು ಸೂಚಿಸಿದ್ದಾರೆ.
ನಿಮ್ಮ ಹೆಸರಲ್ಲಿ ಯಾರಾದರೂ ಸಾಲಪಡೆದಿದ್ದಾರೆಯೇ? ಹೀಗೆ ಪರಿಶೀಲಿಸಿ
1. ಕ್ರೆಡಿಟ್ ರಿಪೋರ್ಟ್ (Credit Report) ಪರಿಶೀಲಿಸಿ: ನಿಮ್ಮ ಪಾನ್ ಕಾರ್ಡ್‌ಗೆ ಲಿಂಕ್ ಆಗಿರುವ ಎಲ್ಲಾ ಸಾಲದ ವಿವರಗಳು ಕ್ರೆಡಿಟ್ ಬ್ಯೂರೋಗಳಲ್ಲಿ ದಾಖಲಾಗಿರುತ್ತವೆ. CIBIL, Experian, Equifax ಅಥವಾ CRIF High Mark ನಂತಹ ಸಂಸ್ಥೆಗಳ ವೆಬ್‌ಸೈಟ್‌ಗಳಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಮತ್ತು ರಿಪೋರ್ಟ್ ಅನ್ನು ಉಚಿತವಾಗಿ ಪಡೆಯಬಹುದು. ಅದರಲ್ಲಿ ನಿಮಗೆ ತಿಳಿಯದ ಯಾವುದೇ ಸಾಲದ ಎಂಟ್ರಿ ಕಂಡುಬಂದರೆ ತಕ್ಷಣ ಎಚ್ಚೆತ್ತುಕೊಳ್ಳಿ.
2. ಬ್ಯಾಂಕ್ SMS ಮತ್ತುಇಮೇಲ್’ಗಳನ್ನುಗಮನಿಸಿ: ನಿಮಗೆ ತಿಳಿಯದ ಸಾಲದ EMI ಕಡಿತದ ಬಗ್ಗೆ ಸಂದೇಶಗಳು ಅಥವಾ ಇಮೇಲ್‌ಗಳು ಬರುತ್ತಿದ್ದರೆ ಅದನ್ನು ನಿರ್ಲಕ್ಷಿಸಬೇಡಿ. ಅನೇಕ ಬಾರಿ ಸಂತ್ರಸ್ತರು ಇಂತಹ ಸಂದೇಶಗಳ ಮೂಲಕವೇ ವಂಚನೆಯನ್ನು ಮೊದಲು ಗುರುತಿಸುತ್ತಾರೆ.
3. ಆದಾಯ ತೆರಿಗೆ ಖಾತೆಯ(AIS) ತಪಾಸಣೆ: ಇನ್‌ಕಮ್ ಟ್ಯಾಕ್ಸ್ ಪೋರ್ಟಲ್‌ನಲ್ಲಿರುವ Annual Information Statement (AIS) ಅನ್ನು ಪರಿಶೀಲಿಸಿ. ಇಲ್ಲಿಯೂ ಕೆಲವು ಸಾಲಕ್ಕೆ ಸಂಬಂಧಿಸಿದ ಮಾಹಿತಿ ಕಾಣಿಸಬಹುದು. ಅಲ್ಲಿ ನಿಮ್ಮ ಗಮನಕ್ಕೆ ಬಾರದ ಹಣಕಾಸಿನ ವಹಿವಾಟುಗಳಿವೆಯೇ ಎಂದು ನೋಡಿ.
ಸಂದೇಹವಿದ್ದರೆ ತಕ್ಷಣ ಈಕ್ರಮ ಕೈಗೊಳ್ಳಿ:
ಅಗತ್ಯವಿದ್ದರೆ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ. ನಿಮಗೆ ತಿಳಿಯದ ಸಾಲದ ಮಾಹಿತಿ ಸಿಕ್ಕರೆ, ತಕ್ಷಣ ಸಂಬಂಧಪಟ್ಟ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗೆ (NBFC) ಲಿಖಿತ ದೂರು ನೀಡಿ.
ಕ್ರೆಡಿಟ್ ಬ್ಯೂರೋಗೆ ಹೋಗಿ ಈ ಸಾಲದ ಬಗ್ಗೆ ‘ಡಿಸ್ಪ್ಯೂಟ್’ (Dispute) ರೈಸ್ ಮಾಡಿ.
- ನಿಮಗೆ ತಿಳಿಯದ ಸಾಲದ ಮಾಹಿತಿ ಸಿಕ್ಕರೆ, ತಕ್ಷಣ ಸಂಬಂಧಪಟ್ಟ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗೆ (NBFC) ಲಿಖಿತ ದೂರು ನೀಡಿ.
- ಕ್ರೆಡಿಟ್ ಬ್ಯೂರೋಗೆ ಹೋಗಿ ಈ ಸಾಲದ ಬಗ್ಗೆ ‘ಡಿಸ್ಪ್ಯೂಟ್’ (Dispute) ರೈಸ್ ಮಾಡಿ.
- ಅಗತ್ಯವಿದ್ದರೆ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ.
ಸಮಯಕ್ಕೆ ಸರಿಯಾಗಿ ಇವುಗಳನ್ನು ಪರಿಶೀಲಿಸುವ ಮೂಲಕ ಪಾನ್ ದುರುಪಯೋಗದಿಂದಾಗುವ ಆರ್ಥಿಕ ನಷ್ಟ ಮತ್ತು ಸಿಬಿಲ್ ಸ್ಕೋರ್ ಕುಸಿತವನ್ನು ತಡೆಯಬಹುದು.

