HomeLatest NewsBREAKING: ಹರಿಯಾಣದಲ್ಲಿ ನಾಲ್ವರು ಗ್ಯಾಂಗ್ ಸ್ಟರ್ ಗಳ ಎನ್ ಕೌಂಟರ್

BREAKING: ಹರಿಯಾಣದಲ್ಲಿ ನಾಲ್ವರು ಗ್ಯಾಂಗ್ ಸ್ಟರ್ ಗಳ ಎನ್ ಕೌಂಟರ್

ಚಂಡೀಗಢ: ಹರಿಯಾಣಾದಲ್ಲಿ ಪೊಲೀಸರು ನಾಲ್ವರು ಗ್ಯಾಂಗ್ ಸ್ಟರ್ ಗಳನ್ನು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ನಾಲ್ವರು ಶಾರ್ಪ್ ಶೂಟರ್ ಗಳನ್ನು ಹೊಡೆದುರುಳಿಸಿದ್ದಾರೆ.

ಗುರುಗ್ರಾಮ ನಗರದ ಸುಶಾಂತ್ ಲೋಕ್ ಫೇಸ್-2 ರಲ್ಲಿ ಈ ಘಟನೆ ನಡೆದಿದೆ. ಪಾತಕಿ ದೀಪಕ್ ನಂದಲ್ ಜೊತೆ ನಂಟು ಹೊಂದಿದ್ದ ನಾಲ್ವರು ಉದ್ಯಮಿಯೊಬ್ಬರ ಹತ್ಯೆಗೆ ಸಂಚು ರೂಪಿಸಿದ್ದರು. ಪಾತಕಿ ದೀಪಕ್ ನಂದಲ್ ಸದ್ಯ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಾಲ್ವರು ಗ್ಯಾಮ್ಗ್ ಸ್ಟರ್ ಗಳು ಶಾಅರ್ಪ್ ಶೂಟರ್ ಗಳಾಗಿದ್ದು, ಉದ್ಯಮಿಯೊಬ್ಬರ ಮನೆ ಮೇಲೆ ಗುಂಡಿನ ದಾಳಿ ನಡೆಸಿದ್ದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರ ಮೇಲೂ ಫೈರಿಂಗ್ ಮಾಡಿದ್ದರು. ಈ ವೇಳೆ ಪೊಲೀಜ಼ರು ಹಾಗೂ ಗ್ಯಾಂಗ್ ಸ್ಟರ್ ಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ದಾಳಿಯಲ್ಲಿ ಪೊಲೀಸರು ನಾಲ್ವರು ಗ್ಯಾಂಗ್ ಸ್ಟರ್ ಗಳನ್ನು ಹೊಡೆದುರುಳಿಸಿದ್ದಾರೆ.

ಘಟನೆಯಲ್ಲಿ ಗುರುಗ್ರಾಮದ ಮೂವರು ಪೊಲೀಸರಿಗೆ ಗಾಯಗಳಾಗಿವೆ. ಗಾಯಾಳು ಪೊಲೀಸರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular