HomeLatest Newsಸೌತೆಕಾಯಿ ತಿಂದು ದುಡ್ಡು ಕೊಡದೆ ವ್ಯಾಪಾರಿಯೊಂದಿಗೆ ಜಗಳವಾಡಿದ ಹರಿಯಾಣ ಪೊಲೀಸಪ್ಪ: ವಿಡಿಯೋ ವೈರಲ್

ಸೌತೆಕಾಯಿ ತಿಂದು ದುಡ್ಡು ಕೊಡದೆ ವ್ಯಾಪಾರಿಯೊಂದಿಗೆ ಜಗಳವಾಡಿದ ಹರಿಯಾಣ ಪೊಲೀಸಪ್ಪ: ವಿಡಿಯೋ ವೈರಲ್

ಚಂಡೀಗಢ: ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಬೇಕಾದ, ಜನಸಾಮಾನ್ಯರ ರಕ್ಷಣೆಗೆ ನಿಲ್ಲಬೇಕಾದ ಪೊಲೀಸರೇ ಕೆಲವೊಮ್ಮೆ ಅಧಿಕಾರದ ದರ್ಪ ತೋರಿಸಿ ಸುದ್ದಿಯಾಗುತ್ತಾರೆ. ಸಣ್ಣಪುಟ್ಟ ವಿಷಯಗಳಿಗೆ ಬಡ ವ್ಯಾಪಾರಿಗಳೊಂದಿಗೆ ಕಿರಿಕ್ ಮಾಡುವ ಘಟನೆಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಸದ್ಯ ಅಂತಹದ್ದೇ ಒಂದು ನಾಚಿಕೆಗೇಡಿನ ಘಟನೆ ಹರಿಯಾಣದಲ್ಲಿ ನಡೆದಿದ್ದು, ಪೊಲೀಸಪ್ಪನೊಬ್ಬ ಸೌತೆಕಾಯಿ ಮತ್ತು ಹಣ್ಣುಗಳನ್ನು ತಿಂದು ಹಣ ನೀಡದೆ ವ್ಯಾಪಾರಿಯೊಂದಿಗೆ ಜಗಳವಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ಘಟನೆ ಖಾಕಿ ಪಡೆಯ ಘನತೆಗೆ ಮಸಿ ಬಳಿದಂತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ ಕಂಡುಬರುವಂತೆ, ಘಟನೆ ರಸ್ತೆ ಬದಿಯ ಗಾಡಿಯೊಂದರ ಬಳಿ ನಡೆದಿದೆ. ಪೊಲೀಸ್ ಪೇದೆಯೊಬ್ಬರು ಗಾಡಿಯಲ್ಲಿ ಇಟ್ಟಿದ್ದ ಸೌತೆಕಾಯಿ ಮತ್ತು ಇತರ ಹಣ್ಣುಗಳನ್ನು ತಿಂದು ತೇಗಿದ್ದಾರೆ. ತಿನ್ನೋದೆಲ್ಲಾ ತಿಂದ ಮೇಲೆ, ಆ ಬಡ ವ್ಯಾಪಾರಿ ಹಣ ಕೇಳಿದಾಗ ಪೊಲೀಸಪ್ಪನ ಅಸಲಿ ಗುಣ ಹೊರಬಿದ್ದಿದೆ. ಆತ ಹಣ ನೀಡಲು ನಿರಾಕರಿಸಿದ್ದಲ್ಲದೆ, ವ್ಯಾಪಾರಿಯ ಮೇಲೆಯೇ ರೇಗಾಡಿದ್ದಾನೆ. ವ್ಯಾಪಾರಿ ತಾನು ದಿನವಿಡೀ ಕಷ್ಟಪಟ್ಟು ದುಡಿಯುವವನು, ದಯವಿಟ್ಟು ಹಣ ನೀಡಿ ಎಂದು ಬೇಡಿಕೊಂಡರೂ, ಪೊಲೀಸಪ್ಪ ತನ್ನ ದೌಲತ್ತು ತೋರಿಸುವುದನ್ನು ಮುಂದುವರಿಸಿದ್ದಾನೆ.

https://www.instagram.com/reel/DWiHAg2E3Qi/?utm_source=ig_web_copy_link&igsh=MzRlODBiNWFlZA==

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಕಿರಿಕ್ ನಡೆಯುತ್ತಿರುವಾಗಲೇ ಅಲ್ಲಿದ್ದ ಸಾರ್ವಜನಿಕರು ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿದ್ದಾರೆ. ವಿಡಿಯೋದಲ್ಲಿ ಪೊಲೀಸಪ್ಪ ತನ್ನ ಅಧಿಕಾರದ ದರ್ಪ ತೋರಿಸುತ್ತಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಈ ದೃಶ್ಯ ಇನ್‌ಸ್ಟಾಗ್ರಾಮ್ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನೆಟ್ಟಿಗರ ಆಕ್ರೋಶ:

ಬಡ ವ್ಯಾಪಾರಿಗಳು ದಿನವಿಡೀ ಬಿಸಿಲಿನಲ್ಲಿ ನಿಂತು ದುಡಿಯುತ್ತಾರೆ. ಅಂತಹವರಿಂದ ಉಚಿತವಾಗಿ ವಸ್ತುಗಳನ್ನು ಪಡೆಯುವುದು ಮತ್ತು ದರ್ಪ ತೋರಿಸುವುದು ಖಾಕಿ ಇಲಾಖೆಗೆ ಶೋಭೆ ತರುವುದಿಲ್ಲ” ಎಂದು ಅನೇಕರು ಕಮೆಂಟ್ ಮಾಡುತ್ತಿದ್ದಾರೆ. ಸದ್ಯ ಈ ವಿಡಿಯೋ ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಪೇದೆಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular