HomeEntertainmentಮೇ 2ಕ್ಕೆ ಬಿಡುಗಡೆಯಾಗಲಿದೆ ಪವನ್ ಕಲ್ಯಾಣ್ ಅಭಿನಯದ 'ಹರಿಹರ ವೀರ ಮಲ್ಲು' ಟೀಸರ್

ಮೇ 2ಕ್ಕೆ ಬಿಡುಗಡೆಯಾಗಲಿದೆ ಪವನ್ ಕಲ್ಯಾಣ್ ಅಭಿನಯದ ‘ಹರಿಹರ ವೀರ ಮಲ್ಲು’ ಟೀಸರ್

ಪವರ್ ಸ್ಟಾರ್ ಪವನ್ ಕಲ್ಯಾಣ್ ಪ್ಯಾನ್ ಇಂಡಿಯಾ ಚಿತ್ರ ‘ಹರಿಹರ ವೀರ ಮಲ್ಲು’ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಇದರ ಟೀಸರ್ ಇದೆ ಮೇ 2ಕ್ಕೆ ಬೆಳಿಗ್ಗೆ 9:00 ಗಂಟೆಗೆ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರ ತಂಡ ಇಂದು ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದೆ.

ಕ್ರಿಶ್ ಜಗರ್ಲಾಮುಡಿ ರಚಿಸಿ ನಿರ್ದೇಶಿಸಿರುವ ಈ ಚಿತ್ರದಲ್ಲಿ ಪವನ್ ಕಲ್ಯಾಣ್ ಸೇರಿದಂತೆ ಭಾಭಿ ಡಿಯೋಲ್, ನಿಧಿ ಅಗರ್ವಾಲ್, ವಿಕ್ರಂ ಜಿತ್, ನೂರಾಫಾತೆಹಿ, ಜಿಶು ಸೆನ್ಗುಪ್ತ, ಮತ್ತು ಪೂಜಿತ ಪೊನ್ನಡ ತೆರೆ ಹಂಚಿಕೊಂಡಿದ್ದಾರೆ.

ಮೇಘ ಸೂರ್ಯ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಎ ದಯಾಕರ್ ರಾವ್ ಮತ್ತು ಏ ಎಂ ರತ್ನಂ ಬಂಡವಾಳ ಹೂಡಿದ್ದಾರೆ. ಎಂಎಂ ಕಿರಾವಾಣಿ ಸಂಗೀತ ಸಂಯೋಜನೆ ನೀಡಿದ್ದು, ಪ್ರವೀಣ್ ಕೆಎಲ್, ಸಂಕಲನವಿದೆ. ತೆಲುಗು ಸೇರಿದಂತೆ ಕನ್ನಡ ತಮಿಳು ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಈ ಸಿನಿಮಾ ತೆರೆ ಮೇಲೆ ಬರಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular