
ಐಪಿಎಲ್ ಪಂದ್ಯಗಳನ್ನು 3 ಗಂಟೆ 20 ನಿಮಿಷಗಳ ಅವಧಿ ಒಳಗೆ ಮುಗಿಸುವ ಗುರಿ ಹಾಕಿಕೊಳ್ಳಲಾಗಿದ್ದು, ಆದರೆ ನಿಧಾನ ಗತಿ ಬೌಲಿಂಗ್ ಸೇರಿದಂತೆ ವಿವಿಧ ಕಾರಣಗಳಿಗಾಗಿ ಇದು ನಾಲ್ಕು ಗಂಟೆಗಳ ಗಡಿಯನ್ನು ಮೀರುತ್ತಿದೆ.
ಇದೇ ರೀತಿ ನಿಧಾನ ಗತಿಯ ಬೌಲಿಂಗ್ ಸಂಘಟಿಸಿ ಪಂದ್ಯ ವಿಳಂಬವಾಗಲು ಕಾರಣವಾಗಿದ್ದಕ್ಕೆ ಗುಜರಾತ್ ಟೈಟನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರಿಗೆ 12 ಲಕ್ಷ ರೂಪಾಯಿಗಳ ದಂಡ ವಿಧಿಸಲಾಗಿದೆ.

