HomeKarnatakaಹನೂರು ಎನ್ ಕೌಂಟರ್ ಪ್ರಕರಣ: ಮೃತರು ಬೇಟೆಗಾರರು ಎಂಬುದಕ್ಕೆ ಹೊಸ ಸಾಕ್ಷ್ಯ ಬಿಡುಗಡೆ ಮಾಡಿದ ಅರಣ್ಯ...

ಹನೂರು ಎನ್ ಕೌಂಟರ್ ಪ್ರಕರಣ: ಮೃತರು ಬೇಟೆಗಾರರು ಎಂಬುದಕ್ಕೆ ಹೊಸ ಸಾಕ್ಷ್ಯ ಬಿಡುಗಡೆ ಮಾಡಿದ ಅರಣ್ಯ ಇಲಾಖೆ

ಹನೂರು ಎನ್ ಕೌಂಟರ್ ಪ್ರಕರಣ: ಮೃತರು ಬೇಟೆಗಾರರು ಎಂಬುದಕ್ಕೆ ಮತ್ತಷ್ಟು ಸಾಕ್ಷ್ಯ ಬಿಡುಗಡೆ ಮಾಡಿದ ಅರಣ್ಯ ಇಲಾಖೆ

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಹನೂರು ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಬಲಿ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಹಸು ಹುಡುಕಲು ಹೋಗಿದ್ದವರ ಮೇಲೆ ಅರಣ್ಯ ಇಲಾಖೆಯವರು ಗುಂಡಿನ ದಾಳಿ ನಡೆಸಿ ಕೊಲೆ ಮಾಡಿದ್ದಾರೆ ಎಂಬ ಮೃತರ ಕುಟುಂಬಸ್ಥರ ಆರೋಪಗಳಿಗೆ ಅರಣ್ಯ ಇಲಾಖೆ ಅವರು ಬೇಟೆಗಾರರು ಎಂಬುದಕ್ಕೆ ಮತ್ತಷ್ಟು ಪುಷ್ಠಿ ನೀಡಿವಂತ ಫೋಟೊ ಬಿಡುಗಡೆ ಮಾಡಿದ್ದಾರೆ.

ಅರಣ್ಯ ಇಲಾಖೆ, ಮೃತ ಮೂವರು ಸೇರಿ ನಾಲ್ವರೂ ಬೇಟೆಗೆ ಹೋಗಿದ್ದರು ಎಂಬುದಕ್ಕೆ ಸಾಕ್ಷಿ ಬಿಡುಗಡೆ ಮಾಡಿದೆ. ಸ್ಥಳದಲ್ಲಿ ಸಿಕ್ಕ ಬ್ಯಾಗ್​, ಮಾಂಸ, ಅಡುಗೆ ಸಾಮಗ್ರಿ ಚಿತ್ರ ರಿಲೀಸ್​​ ಮಾಡಲಾಗಿದ್ದು, ವನ್ಯಮೃಗದ ಮಾಂಸದಲ್ಲಿ ಗುಂಡಿನ ಗುರುತು ಪತ್ತೆಯಾಗಿರೋದುಪ್ರಕರಣಕ್ಕೆ ಹೊಸ ತಿರುವು ನೀಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಕರಣ ಸಂಬಂಧ ಅರಣ್ಯ ಅಧಿಕಾರಿಗಳು ಈ ಹಿಂದೆಯೂ ಕೆಲಸ ಸಾಕ್ಷ್ಯಗಳನ್ನು ಬಹಿರಂಗಪಡಿಸಿದ್ದರು. ಆತ್ಮರಕ್ಷಣೆಗಾಗಿ ತಮ್ಮ ಸಿಬ್ಬಂದಿ ಗುಂಡು ಹಾರಿಸಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದ ಇಲಾಖೆ, ಘಟನಾ ಸ್ಥಳದಲ್ಲಿ ಸಿಕ್ಕಿದ್ದ 34 ಕೆ.ಜಿ ಜಿಂಕೆ ಮಾಂಸ ಹಾಗೂ ಬಂದೂಕುಗಳು ಮತ್ತು ಚಪ್ಪಲಿಯ ಫೋಟೋಗಳನ್ನು ಸಾಕ್ಷಿಯಾಗಿ ಪ್ರದರ್ಶಿಸಿತ್ತು. ಆದರೆ ಹೊಸ ಚಪ್ಪಲಿಯ ಮೇಲಿದ್ದ ಸ್ಟಿಕ್ಕರ್​​ ಕೂಡ ಹಾಗೇ ಇದ್ದಿದ್ದು ಕಂಡುಬಂದಿದ್ದ ಕಾರಣ ಸಾಕ್ಷ್ಯಗಳ ಬಗ್ಗೆಯೇ ಅನುಮಾನ ವ್ಯಕ್ತವಾಗಿದ್ದವು. ಇದೇ ವಿಚಾರ ಕರ್ನಾಟಕ ಮಾತ್ರವಲ್ಲ, ತಮಿಳುನಾಡು ವಿಧಾನಸಭೆಯಲ್ಲೂ ಚರ್ಚೆಯಾಗಿತ್ತು.

ಮೂವರ ಸಾವಿನ ಬಳಿಕ ದುಷ್ಕರ್ಮಿಗಳು ಅರಣ್ಯ ಇಲಾಖೆಯನ್ನೇ ಟಾರ್ಗೆಟ್​​ ಮಾಡಿರುವ ಹಿನ್ನೆಲೆ ಹನೂರಿನ ಅರಣ್ಯ ಕಚೇರಿ ಹಾಗೂ ವಸತಿ ಗೃಹಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ದುಷ್ಕರ್ಮಿಗಳು 8 ಕಳ್ಳಬೇಟೆ ತಡೆ ಶಿಬಿರ ಸ್ಫೋಟಿಸಿದ್ದ ಕಾರಣ ಅರಣ್ಯ ಇಲಾಖೆ ಕಚೇರಿ ಬಳಿ ಡಿಎಆರ್ ತುಕಡಿ ನಿಯೋಜಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular