HomeKarnatakaಹಜ್ ಯಾತ್ರಿಕರಿಗೆ 2 ಹಂತದ ವೈದ್ಯಕೀಯ ತಪಾಸಣೆ, ಆರೋಗ್ಯ ಪ್ರಮಾಣ ಪತ್ರ ಕಡ್ಡಾಯ

ಹಜ್ ಯಾತ್ರಿಕರಿಗೆ 2 ಹಂತದ ವೈದ್ಯಕೀಯ ತಪಾಸಣೆ, ಆರೋಗ್ಯ ಪ್ರಮಾಣ ಪತ್ರ ಕಡ್ಡಾಯ

ಬೆಂಗಳೂರು: ಮುಂದಿನ ವರ್ಷದ ಹಜ್ ಯಾತ್ರೆಗೆ ತಾತ್ಕಾಲಿಕವಾಗಿ ಆಯ್ಕೆಯಾಗುವ ಯಾತ್ರಿಕರು ವೈದ್ಯಕೀಯವಾಗಿ ಸದೃಢರಾಗಿರುವುದನ್ನು ಖಚಿತಪಡಿಸಿಕೊಳ್ಳಲು ಎರಡು ಹಂತದ ವೈದ್ಯಕೀಯ ತಪಾಸಣೆ ಮತ್ತು ಆರೋಗ್ಯ ಪ್ರಮಾಣ ಪತ್ರ ಪಡೆಯುವ ಪ್ರಕ್ರಿಯೆ ಕಡ್ಡಾಯಗೊಳಿಸಲಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ ಈ ಕುರಿತು ಆದೇಶಿಸಿದೆ. ಮೊದಲ ಹಂತದ ವೈದ್ಯಕೀಯ ತಪಾಸಣೆಯನ್ನು ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿನ ಅಲೋಪತಿ ವೈದ್ಯಾಧಿಕಾರಿಗಳು ನಡೆಸುವರು. ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿಯೂ ತಪಾಸಣೆ ನಡೆಯಲಿದ್ದು, ನಿಗದಿಪಡಿಸಿದ ಅಗತ್ಯ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಬೇಕಿದೆ.

ಬೆಂಗಳೂರಿನಲ್ಲಿ ವಿಕ್ಟೋರಿಯಾ ಆಸ್ಪತ್ರೆ, ಬೌರಿಂಗ್ ಆಸ್ಪತ್ರೆ, ಲೇಡಿ ಕರ್ಜನ್ ಆಸ್ಪತ್ರೆ, ಕೆಸಿ ಜನರಲ್ ಆಸ್ಪತ್ರೆ, ಜಯನಗರ ಜನರಲ್ ಆಸ್ಪತ್ರೆಗಳಲ್ಲಿ ಹಜ್ ಯಾತ್ರಿಕರಿಗೆ ವೈದ್ಯಕೀಯ ತಪಾಸಣೆ ವ್ಯವಸ್ಥೆ ಮಾಡಲಾಗಿದೆ. ತಪಾಸಣೆ ನಂತರ ನಿಗದಿತ ನಮೂನೆಯಲ್ಲಿ ಆರೋಗ್ಯ ಪ್ರಮಾಣ ಪತ್ರ ಪಡೆದುಕೊಳ್ಳಬೇಕಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯಾತ್ರಿಕರು ಪ್ರಾಥಮಿಕ ವೈದ್ಯಕೀಯ ತಪಾಸಣೆ ಮತ್ತು ಆರೋಗ್ಯ ಪ್ರಮಾಣ ಪತ್ರದೊಂದಿಗೆ ಪಾವತಿ ಚೀಟಿ ಅಥವಾ ಆನ್ಲೈನ್ ಪಾವತಿ ರಶೀದಿಯನ್ನು ಹಜ್ ಕಮಿಟಿ ಆಫ್ ಇಂಡಿಯಾ ಪೋರ್ಟಲ್ ನಲ್ಲಿ ಅಪ್ಲೋಡ್ ಮಾಡಬೇಕಿದೆ. ಇದರ ಭೌತಿಕ ಪ್ರತಿಗಳನ್ನು ಸೆಪ್ಟೆಂಬರ್ 15ರೊಳಗೆ ಬೆಂಗಳೂರಿನ ಹಜ್ ಸಮಿತಿ ಕಚೇರಿಗೆ ಸಲ್ಲಿಸಬೇಕಿದೆ.

ಮೂಲ ಆರೋಗ್ಯ ಪ್ರಮಾಣ ಪತ್ರ ಮತ್ತು ಎಲ್ಲಾ ವೈದ್ಯಕೀಯ ಪರೀಕ್ಷೆಗಳ ವರದಿಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವಂತೆ ಯಾತ್ರಿಕರಿಗೆ ಸೂಚಿಸಲಾಗಿದೆ. ಯಾತ್ರೆ ಆರಂಭಿಸುವ ಮೊದಲು ನಡೆಯುವ ಎರಡನೇ ಹಂತದ ವೈದ್ಯಕೀಯ ತಪಾಸಣೆ ಮತ್ತು ಲಸಿಕೆ ನೀಡುವ ಸಂದರ್ಭದಲ್ಲಿ ಇವುಗಳನ್ನು ಸಲ್ಲಿಸಬೇಕಿದೆ.

ವೈದ್ಯಕೀಯ ತಪಾಸಣೆ ನಡೆಸುವ ಸರ್ಕಾರಿ ಅಲೋಪತಿ ವೈದ್ಯಾಧಿಕಾರಿಗಳು ನಿಖರ ವರದಿ ನೀಡುವ ಜೊತೆಗೆ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ತಿಳಿಸಲಾಗಿದೆ. ಜಿಲ್ಲಾವಾರು ಆರ್.ಸಿ.ಹೆಚ್. ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಮೇಲ್ವಿಚಾರಣೆ ಮತ್ತು ಸಮನ್ವಯದಲ್ಲಿ ಜಿಲ್ಲಾ ಸರ್ಜನ್, ವೈದ್ಯಕೀಯ ಕಾಲೇಜು ನಿರ್ದೇಶಕರ ಸಹಕಾರದೊಂದಿಗೆ ಪ್ರಕ್ರಿಯೆ ನಡೆಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ ಸೂಚನೆ ನೀಡಿದೆ.(ಚಿತ್ರಕೃಪೆ: ಎಐ)

ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಂದ ಅರಿವು ನವೀಕರಣ ಸಾಲ ಪಡೆಯಲು ಅರ್ಜಿ ಆಹ್ವಾನ

ಶಿವಮೊಗ್ಗ: ಜಿಲ್ಲಾ ಕರ್ನಾಟಕ ಅಲ್ಪಸಂಖ್ಯಾತರ ಆಭಿವೃದ್ದಿ ನಿಗಮವು 2026-27 ನೇ ಸಾಲಿಗೆ ಅರಿವು ನವೀಕರಣ ಸಾಲ ಯೋಜನೆಯನ್ನು ಅನುಷ್ಠಾನಗೊಳಿಸಲು ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆಯ್ಕೆಯಾಗಿರುವ ಕೆಇಎ/ ಸಿಇಟಿ/ ನೀಟ್/ ಮೂಲಕ ಪದವಿ ಮತ್ತು ಎಂಬಿಬಿಎಸ್, ಬಿಡಿಎಸ್, ಬಿ-ಆಯುಷ್, , ಬಿಇ/ ಬಿ-ಟೆಕ್, ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್, ಅರ್ಗಿಕಲ್ಚರ್ ಸೈನ್ಸ್, ವೆಟರ್ನರಿ ಅಂಡ್ ಫಾರ್ಮ ಸೈನ್ಸ್ ಇಂತಹ ಕೋರ್ಸ್ಗಳಲ್ಲಿ ಆಯ್ಕೆಯಾಗಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದ್ದು, ವಿದ್ಯಾರ್ಥಿಗಳು ಹಿಂದಿನ ವರ್ಷದಲ್ಲಿ ಪಡೆದ ಸಾಲದ ಮೊತ್ತಕ್ಕೆ ಶೇ.12 ರಷ್ಟು ಹಣವನ್ನು ಪಾವತಿಸಿ ಅರ್ಜಿಯನ್ನು ಆನ್‌ಲೈನ್ ಮೂಲಕ ಸಲ್ಲಿಸಬಹುದಾಗಿದೆ.

ಈ ಹಿಂದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆಯ್ಕೆಯಾಗಿದ್ದು ಬೇರೆ ಬೇರೆ ವರ್ಷಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳು (ಕ್ರಿಶ್ಚಿಯನ್ ಸಮುದಾಯದ ಹೊರತುಪಡಿಸಿ) ಅರಿವು ವಿದ್ಯಾಭ್ಯಾಸ ಸಾಲ ಪಡೆಯದಿದ್ದಲ್ಲಿ ಅಂತಹ ವಿದ್ಯಾರ್ಥಿಗಳು ಸಹ ಅರ್ಜಿ ಸಲ್ಲಿಸಬಹುದಾಗಿದ್ದು, ಇಂತಹ ವಿದ್ಯಾರ್ಥಿಗಳಿಗೆ ರಿನ್ಯೂವಲ್ ಮೊತ್ತವನ್ನು ಪಾವತಿಸುವ ಅಗತ್ಯವಿರುವುದಿಲ್ಲ.

ಅರ್ಜಿಯನ್ನು https://kmdconline.karnataka.gov.in ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಸೆ.30 ರೊಳಗಾಗಿ ಸಲ್ಲಿಸುವುದು. ವಿದ್ಯಾರ್ಥಿಗಳು ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಿದ ನಂತರ ಮೂಲ ಇಂಡೆನ್ನಿಟಿ ಬಾಂಡ್ ಮತ್ತು ಸಾಲಕ್ಕೆ ಸಂಬಂಧಿಸಿದ ಅಗತ್ಯ ದಾಖಲಾತಿಗಳನ್ನು ಜಿಲ್ಲಾ ವ್ಯವಸ್ಥಾಪಕ ಕಚೇರಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ, ಅಚ್ಚುತರಾವ್ ಲೇಔಟ್ 4 ನೇ ತಿರುವು ನಂಜಪ್ಪ ಆಸ್ಪತ್ರೆ ಮುಂಭಾಗ ಶಿವಮೊಗ್ಗ ಇವರಿಗೆ ಸಲ್ಲಿಸುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08182-228262 ಗೆ ಸಂಪರ್ಕಿಸುವಂತೆ. ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular