HomeKarnatakaಹಲವೆಡೆ ಶಿಕ್ಷಕರೇ ಇಲ್ಲ; ಆದರೂ ಎಸ್.ಎಸ್.ಎಲ್.ಸಿಯಲ್ಲಿ 94.1% ಫಲಿತಾಂಶ ಬಂದಿದ್ದು ಹೇಗೆ? ಪರೀಕ್ಷೆ ಹಾಗೂ ಮೌಲ್ಯಮಾಪನದ...

ಹಲವೆಡೆ ಶಿಕ್ಷಕರೇ ಇಲ್ಲ; ಆದರೂ ಎಸ್.ಎಸ್.ಎಲ್.ಸಿಯಲ್ಲಿ 94.1% ಫಲಿತಾಂಶ ಬಂದಿದ್ದು ಹೇಗೆ? ಪರೀಕ್ಷೆ ಹಾಗೂ ಮೌಲ್ಯಮಾಪನದ ಬಗ್ಗೆಯೇ ಅನುಮಾನವಿದೆ ಎಂದ ಹೆಚ್.ವಿಶ್ವನಾಥ್

ಮೈಸೂರು: 2025-26ನೇ ಸಾಲಿನಲ್ಲಿ ಎಸ್.ಎಸ್.ಫಲಿತಾಂಶ ಶೇ.94.1ರಷ್ಟು ದಾಖಲೆಯ ಫಲಿತಾಂಶ ಬಂದಿರುವ ಬಗ್ಗೆ ಪರಿಷತ್ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ಅನುಮಾನ ವ್ಯಕ್ತಪಡಿಸಿದ್ದಾರೆ. ಪರೀಕ್ಷೆ ವಿಧಾನ ಹಾಗೂ ಮೌಲ್ಯಮಾಪನದಲ್ಲಿ ಗೋಲ್ ಮಾಲ್ ನಡೆದಿದೆ ಎಂದು ಆರೋಪಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಹೆಚ್.ವಿಶ್ವನಾಥ್, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನಕಲು ಮಾಡಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿನ ಸಿಸಿಟಿವಿ ಕ್ಯಾಮರಾ ತೆಗೆಸಿ ಅವ್ಯವಹಾರ ನಡೆಸಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಳೆದ ವರ್ಷ ಎಸ್.ಎಸ್.ಎಲ್.ಸಿಯಲ್ಲಿ ಶೇ.80.4ರಷ್ಟು ಫಲಿತಾಂಶ ಬಂದಿದ್ದು, ಈಬಾರಿ ಒಮ್ಮೆಲೇ ಶೇ.94.1ರಷ್ಟು ಬರಲು ಹೇಗೆ ಸಾಧ್ಯವಾಯಿತು? ಪರೀಕ್ಷಾ ವಿಧಾನ, ಮೌಲ್ಯಮಾಪನದ ಬಗ್ಗೆ ಅನುಮಾನವಿದೆ. ಇಂತಹ ಫಲಿತಾಂಶವನ್ನು ಸೋಮಾರಿ ಶಿಕ್ಷಕರು ಸ್ವಾಗತಿಸುತ್ತಾರಷ್ಟೇ ಎಂದಿದ್ದಾರೆ.

ಇಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುತ್ತಿಲ್ಲ. ಎಲ್ಲರೂ ಪಾಸಾಗಬೇಕು ಎಂಬ ಕಸರತ್ತು ನಡೆಸಲಾಗಿದೆ. ಹೀಗಾದರೆ ಮುಂದಿನ ದಿನಗಳಲ್ಲಿ ಅವರ ಕಥೆ ಏನು? ಪಿಯು ಹಂತದಲ್ಲಿ ಶಿಕ್ಷಣ ಮುಂದುವರೆಸುವವರ ಪ್ರಮಾಣ ಕಡಿಮೆಯಾಗಲಿದೆ. ಇದರಿಂದ ಸಮಸ್ಯೆಗಳಾಗಬಹುದು ಎಂದು ತಿಳಿಸಿದ್ದಾರೆ.

20ಕ್ಕೆ 20 ಆಂತರಿಕ ಅಂಕ ಎಲ್ಲರಿಗೂ ಕೊಡಲಾಗಿದೆ. ಇನ್ನು ಪಾಸಾಗಲು ಬೇಕಿರುವುದು ಕೇವಲ 13 ಅಂಕ ಮಾತ್ರ. ಅದನ್ನೂ ಕಾಪಿ ಮಾಡಿದ್ದಾರೆ. ಇದು ನೋವಿನ ಸಂಗತಿ. ಸಿಎಂ ಸಿದ್ದರಾಮಯ್ಯ ಸರ್ಕಾರ ಇಡೀ ಶಿಕ್ಷಣ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿದೆ ಎಂದು ಕಿಡಿಕಾರಿದರು.

ಹಲವಾರು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ. ಆದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಶಿಕ್ಷಕರ ಕೊರತೆ ಸಾಕಷ್ಟಿದೆ. ಆದರೂ ಶೇ.94.1ರಷ್ಟು ಫಲಿತಾಂಶ ಬಂದಿದ್ದು ಹೇಗೆ? ಮಾತೃ ಭಾಷೆ ಕನ್ನಡದಲ್ಲಿಯೇ ಬಹಳಷ್ಟು ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ ಯಾಕೆ? ಇದ್ಯಾವ ರೀತಿ ಸಾಧನೆ? ಹಠಕ್ಕೆ ಬಿದ್ದು ಪಾಸ್ ಮಾಡಿದಂತಿದೆ ಎಂದು ಆರೋಪಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular