HomeKarnatakaBIG NEWS: ಮಗನನ್ನು ನೋಡಲು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ ಹೆಚ್.ಡಿ.ರೇವಣ್ಣ

BIG NEWS: ಮಗನನ್ನು ನೋಡಲು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ ಹೆಚ್.ಡಿ.ರೇವಣ್ಣ

ಬೆಂಗಳೂರು: ಅತ್ಯಾಚಾರ, ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣನನ್ನು ನೋಡಲು ತಂದೆ ಹೆಚ್.ಡಿ.ರೇವಣ್ಣ ಜೈಲಿಗೆ ಭೇಟಿ ನೀಡಿದ್ದಾರೆ.

ಕೇಂದ್ರ ಕಾರಾಗೃಹ ಪರಪನ ಅಗ್ರಹಾರ ಜೈಲಿನ ಕ್ವಾರಂಟೈನ್ ಸೆಲ್ ನಲ್ಲಿರುವ ಪ್ರಜ್ವಲ್ ಭೇಟಿಗಾಗಿ ತಂದೆ ಹೆಚ್.ಡಿ.ರೇವಣ್ಣ ಆಗಮಿಸಿದ್ದಾರೆ. ಜುಲೈ 1ರಂದು ತಾಯಿ ಭವಾನಿ ರೇವಣ್ಣ ಆಗಮಿಸಿ ಪುತ್ರನನ್ನು ಭೇಟಿಯಾಗಿ ತೆರಳಿದ್ದರು. ಇಂದು ತಂದೆ ರೇವಣ್ಣ ಮಗನ ಭೇಟಿಗಾಗಿ ಜೈಲಿಗೆ ಆಗಮಿಸಿದ್ದಾರೆ.

ನಿನ್ನೆಯಷ್ಟೇ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಹೆಚ್.ಡಿ.ರೇವಣ್ಣ, ತಾನು ಸದ್ಯಕ್ಕೆ ಮಗನನ್ನು ಭೇಟಿಯಾಗಲು ಜೈಲು ಬಳಿ ಹೋಗಲ್ಲ. ಭೇಟಿಗೆ ಹೋದರೆ ಏನೋ ಹೇಳಿಕೊಡಲು ಹೋಗಿದ್ದರು ಎನ್ನುತ್ತಾರೆ ಎಂದಿದ್ದರು. ಹೇಳಿಕೆ ನೀಡಿದ ಬೆನ್ನಲ್ಲೇ ಇಂದು ಮಗನ ಭೇಟಿಗೆಂದು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular