HomeKarnatakaBIG NEWS: 20 ದಿನಗಳ ಬಳಿಕ ತವರು ಜಿಲ್ಲೆ ಹಾಸನಕ್ಕೆ ಭೇಟಿ ನೀಡಲಿರುವ ಹೆಚ್.ಡಿ.ರೇವಣ್ಣ

BIG NEWS: 20 ದಿನಗಳ ಬಳಿಕ ತವರು ಜಿಲ್ಲೆ ಹಾಸನಕ್ಕೆ ಭೇಟಿ ನೀಡಲಿರುವ ಹೆಚ್.ಡಿ.ರೇವಣ್ಣ

ಹಾಸನ: 20 ದಿನಗಳ ಬಳಿಕ ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ಇಂದು ತವರು ಜಿಲ್ಲೆ ಹಾಸನಕ್ಕೆ ಭೇಟಿ ನೀಡಲಿದ್ದಾರೆ. ಕಿಡ್ನ್ಯಾಪ್ ಹಾಗೂ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಜಾಮೀನು ಸಿಕ್ಕಿರುವ ಹಿನ್ನೆಲೆಯಲ್ಲಿ ಇಂದು ಹಾಸನ ಜಿಲ್ಲೆ ಹೊಳೆನರಸೀಪುರಕ್ಕೆ ರೇವಣ್ಣ ಭೇಟಿ ನೀಡಲಿದ್ದಾರೆ.

ಹುಟ್ಟೂರು ಹರದನಹಳ್ಳಿಗೂ ಭೇಟಿ ನೀಡಲಿರುವ ಹೆಚ್.ಡಿ.ರೇವಣ್ಣ, ಮನೆದೇವರಿಗೆ ಪೂಜೆ ನೆರವೇರಿಸಲಿದ್ದಾರೆ. ದೇವೇಶ್ವರ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ಮಾವಿನಕೆರೆ ರಂಗನಾಥಸ್ವಾಮಿ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ.

ಹೆಚ್.ಡಿ.ರೇವಣ್ಣ ವಿರುದ್ಧ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ರೇವಣ್ಣಗೆ ಹೊಳೆನರಸೀಪುರಕ್ಕೆ ಹೋಗದಂತೆ ದೇವೇಗೌಡರು ಸೂಚಿಸಿದ್ದರು. ಇದೀಗ ಜಾಮೀನು ಸಿಕ್ಕ ಹಿನ್ನೆಲೆಯಲ್ಲಿ ದೇವೇಗೌಡರ ಅನುಮತಿ ಪಡೆದು ರೇವಣ್ಣ ಹೊಳೆನರಸೀಪುರಕ್ಕೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular