HomeKarnatakaBIG NEWS: ಬೆಳಗಾವಿಯಲ್ಲಿ ಮತ್ತೊಂದು ಅಮಾನವೀಯ ಘಟನೆ; ಸಾಲ ನೀಡಿದ ಮಹಿಳೆ ಮಾಡಿದ ಅವಮಾನಕ್ಕೆ ರೈತ...

BIG NEWS: ಬೆಳಗಾವಿಯಲ್ಲಿ ಮತ್ತೊಂದು ಅಮಾನವೀಯ ಘಟನೆ; ಸಾಲ ನೀಡಿದ ಮಹಿಳೆ ಮಾಡಿದ ಅವಮಾನಕ್ಕೆ ರೈತ ಆತ್ಮಹತ್ಯೆ

ಬೆಳಗಾವಿ: ಬೆಳಗಾವಿಯಲ್ಲಿ ಮತ್ತೊಂದು ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಸಾಲ ನೀಡಿದ್ದ ಮಹಿಳೆ ಮಾಡಿದ ಅವಮಾನ, ತನ್ನ ಹೆಂಡತಿ-ಮಕ್ಕಳಿಗೆ ಕೊಟ್ಟ ಕಿರುಕುಳಕ್ಕೆ ಮನನೊಂದು ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಕ್ಕೇರಿಯಲ್ಲಿ ನಡೆದಿದೆ.

ಸಿದ್ದವ್ವ ಎಂಬುವವರ ಬಳಿ ರೈತ ರಾಜು ಒಂದುವರೆಲಕ್ಷ ಕೈಸಾಲ ಪಡೆದಿದ್ದರು. ಪ್ರತಿ ತಿಂಗಳು ಶೇ.10ರಷ್ಟು ಬಡ್ಡಿಯನ್ನು ರಾಜು ಕಟ್ಟುತ್ತಿದ್ದರು. ಆದರೆ ಬಡ್ಡಿಕಟ್ಟಲು ಸ್ವಲ್ಪ ತಡವಾಗಿದ್ದರಿಂದ ರೈತ ರಾಜು ಪತ್ನಿ ಹಾಗೂ ಪುತ್ರನನ್ನು ಕರೆದೊಯ್ದ ಸಿದ್ದವ್ವ, ಮನೆಯಲ್ಲಿ ಗೃಹ ಬಂಧನದಲ್ಲಿಟ್ಟಿದ್ದಳು.

ಎರಡು ದಿನಗಳ ಕಾಲ ಅನ್ನ, ನೀರು ಕೊಡದೆ ಕೂಡಿ ಹಾಕಿದ್ದಳು. ತಾನು ಸಾಲ ಮಾಡಿದ್ದ ತಪ್ಪಿಗೆ ಪತ್ನಿ ಹಾಗೂ ಮಗನಿಗೆ ಮಾಡುತ್ತಿರುವ ಅವಮಾನ ಕಂಡು ನೊಂದ ರೈತ ರಾಜು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular