HomeKarnatakaಅಂದು ಸತ್ಯಶೋಧನಾ ಸಮಿತಿ ರಚಿಸಿದ್ರಲ್ಲಾ; ಯಾರ್ಯಾರಿದ್ದೀರಪ್ಪಾ ಸಮಿತಿಯಲ್ಲಿ, ಮುಖ್ಯಮಂತ್ರಿಗಳೇ? ಬಿಡದಿಗೆ ಹೋಗಿ ವರದಿ ಕೊಟ್ರ‍ಾ? ಕುಮಾರಸ್ವಾಮಿ...

ಅಂದು ಸತ್ಯಶೋಧನಾ ಸಮಿತಿ ರಚಿಸಿದ್ರಲ್ಲಾ; ಯಾರ್ಯಾರಿದ್ದೀರಪ್ಪಾ ಸಮಿತಿಯಲ್ಲಿ, ಮುಖ್ಯಮಂತ್ರಿಗಳೇ? ಬಿಡದಿಗೆ ಹೋಗಿ ವರದಿ ಕೊಟ್ರ‍ಾ? ಕುಮಾರಸ್ವಾಮಿ ಪ್ರಶ್ನೆ

ಬೆಂಗಳೂರು: ಅಂದು ಬಿಡದಿ ಸತ್ಯಶೋಧನಾ ಸಮಿತಿ ರಚನೆ ಮಾಡಿದ್ರಲ್ಲಾ, ಯಾರ್ಯಾಅರಿದ್ದೀರಪ್ಪ ಸಮಿತಿಯಲ್ಲಿ, ಮುಖ್ಯಮಂತ್ರಿಗಳೇ? ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಹೆಚ್.ಡಿ.ಕುಮಾರಸ್ವಾಮಿ, ಬಿಡದಿ ವಿಚಾರವಾಗಿ ಕಾಂಗ್ರೆಸ್‌ ಸತ್ಯ ಸಂಶೋಧನಾ ಸಮಿತಿಯನ್ನು 2006ರಲ್ಲಿ ಮಾಡಿತ್ತು. ಸತ್ಯಶೋಧನಾ ಸಮಿತಿಯಲ್ಲಿ ಕಗೋಡು ತಿಮ್ಮಪ್ಪ ಅಧ್ಯಕ್ಷರು, ಡಿ.ಕೆ.ಶಿವಕುಮಾರ್, ಬಿ.ಎಲ್.ಶಂಕರ್, ಎ.ಕೃಷ್ಣಪ್ಪ, ರಾಮಲಿಂಗಾರೆಡ್ಡಿ, ಹೆಚ್.ಎಂ.ರೇವಣ್ಣ, ಕೆ.ಜೆ.ಜಾರ್ಜ್ 23 ಜನರ ಸಮಿತಿ ಅದು. ಬಿಡದಿಗೆ ಹೋಗಿ ಸತ್ಯಶೋಧನಾ ಸಮಿತಿ ವರದಿ ಕೊಟ್ರಾ? ಅಥವಾ ಇಲ್ಲೇ ವರದಿ ಮಾಡಿದ್ರಾ? ಎಂದು ಪ್ರಶ್ನಿಸಿದ್ದಾರೆ.

ನಮ್ಮ ಸರ್ಕಾರ ಇದ್ದಾಗ ಈ ಸತ್ಯಶೋಧನಾ ಸಮಿತಿಯನ್ನು ರಚನೆ ಮಾಡಿದ್ದೀರಿ. ಸತ್ಯಶೋಧನಾ ಸಮಿತಿಯಲ್ಲಿ ಏನೇನಿದೆ ಎಂದು ಪ್ರಶ್ನಿಸಿದರು. ಪ್ರಸ್ತಾಪಿತ ಬಿಡದಿ ಉಪನಗರ ಯೋಜನೆ ವ್ಯಾಪ್ತಿಯಲ್ಲಿ ಈಗ ನೀವು ಎಐ ಗುಣಮಟ್ಟದ ಉಪನಗರ ಮಾಡಲು ಹೋಗಿದ್ದೀರಲ್ಲ ಅಲ್ಲಿಗೆ ಅಂದು ಸಮಿತಿ ಸದಸ್ಯರಾಗಿ ಹೋಗಿದ್ದಾಗ, ನೀವು ಏನು ಹೇಳಿದ್ದೀರಿ?. ಉಪನಗರದ ವ್ಯಾಪ್ತಿಯಲ್ಲಿ ಖಾಸಗಿ ಜಮೀನು ಸುಮಾರು 6,950 ಎಕರೆ ಇದೆ. ಸರ್ಕಾರಿ ಜಮೀನು 2,725 ಎಕರೆ ಇದೆ. ಈ ಪ್ರದೇಶದಲ್ಲಿ 18,417 ಜನಸಂಖ್ಯೆ ಇದೆ. 3 ಸಾವಿರ ಮನೆಗಳಿವೆ ಎಂದಿದ್ದೀರಿ. 1.56 ಲಕ್ಷ ತೆಂಗಿನ ಮರ, 40 ಸಾವಿರ ಕಂಗು, ಉಳಿದಂತೆ ಇತರ ಮರಗಳು, ಕಬ್ಬು, ಭತ್ತ, ರೇಷ್ಮೆ, ತರಕಾರಿ, ತೋಟಗಾರಿಕೆ ಬೆಳೆಗಳ ಬಗ್ಗೆ ನೀವೇ ವರದಿ ನೀಡಿದ್ದೀರಿ ಸಿಎಂ ಅವರೇ ಎಂದು ಟೀಕಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಲ್ಲಿಗೆ ಹೋಗಿ ಸಾರ್ವಜನಿಕರು, ರೈತರ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ ಎಂದಿದ್ದೀರಿ.‌ ಅದು ಅತ್ಯಂತ ಫಲವತ್ತಾದ ಜಮೀನಾಗಿದೆ. ಅಲ್ಲಿ ಹೈನುಗಾರಿಕೆ, ಕುರಿ ಸಾಗಣೆ ಮಾಡಲಾಗುತ್ತಿದೆ. ತೋಟಗಾರಿಕೆ ಬೆಳೆಗಳು ಸಾಕಷ್ಟು ಇದೆ ಎಂದು ನೀವೇ ಸತ್ಯಶೋದನಾ ಸಮಿತಿ ಸದಸ್ಯರಾಗಿ ಕೊಟ್ಟ ವರದಿಯಲ್ಲಿ ಹೇಳಿದ್ದೀರಿ. ಈಗ ಕುಮಾರಸ್ವಾಮಿ ಅವರ ಕೂಸು ಯೋಜನೆಯನ್ನು ಜಾರಿ ಮಾಡಲು ಹೊರಟಿದ್ದೇನೆ ಅಂತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇತ್ತ ನೈಸ್ ಯೋಜನೆ ದೇವೇಗೌಡರ ಕೂಸು ಅಂದ್ರಿ. ಹೌದಪ್ಪ ಅದು ದೇವೇಗೌಡರು ಕೂಸು. ಅದನ್ನು ಒಳ್ಳೆಯ ರೀತಿ ಬೆಳೆಸಿ ಅಂದಿದ್ದು, ಪಾಪ ಮಾಡಿ ಅಂದಿಲ್ಲ. ನೈಸ್ ಕಂಪನಿ ಮಾಲೀಕನಿಗೆ ಶೂ ಪಾಲಿಶ್ ಮಾಡಿಕೊಂಡು ಇದ್ದೀರಿ ಎಂದು ಗುಡುಗಿದರು.

ನೀವು ಯಾವ ಪುರುಷಾರ್ಥಕ್ಕೆ ಸದನ‌ಸಮಿತಿ ಮಾಡಿದ್ದೀರಿ. ನಿಮಗೆ 136 ಸೀಟು ಕೊಟ್ಟಿದ್ದು?. ದರೋಡೆ ಮಾಡುವುದಕ್ಕಾ ನಿಮಗೆ ಸೀಟು ಕೊಟ್ಟಿದ್ದು?. ನೈಸ್ ಯೋಜನೆಯಲ್ಲಿ ಲೂಟಿ ಆಗಿದೆ. ಫ್ರೇಮ್ ವರ್ಕ್ ಒಪ್ಪಂದ ಉಲ್ಲಂಘನೆಯಾಗಿದೆ ಎಂದು ಸರ್ಕಾರದ ಪರ ವಕೀಲರೇ ಕೋರ್ಟ್​ನಲ್ಲಿ ವಾದ ಮಂಡನೆ ಮಾಡಿದೆ. ನೈಸ್ ರೋಡ್​​ನಲ್ಲಿ ರೈತರ ಭೂಮಿ ಕಿತ್ತು. ನೀವು ಕಟ್ಟಡ ಕಟ್ಟಲು ಹೊರಟಿದ್ದೀರಿ. ಯಾರು ಯಾರಿಗೆ ಭೂಮಿ ಕೊಟ್ರಿ? ಯಾರ ಯಾರ ಹೆಸರಲ್ಲಿ ಭೂಮಿ ತಂಗೊಂಡ್ರಿ ಎಂದು ಪ್ರಶ್ನಿಸಿದ್ದಾರೆ.

ಮಂತ್ರಿ ಮಂಡಲದ ಹೊಡೆದಾಟ, ಯಾರು ಮಂತ್ರಿ ಅಂತ ಗೊತ್ತಿಲ್ಲ.‌ ಇದರಲ್ಲೇ ಕಾಲಹರಣ ಆಗುತ್ತಿದೆ. ಈ ಸರ್ಕಾರ ಎಷ್ಟು ದಿನದಲ್ಲಿ ಹೈಕೋರ್ಟ್ ತೀರ್ಪು ಪಾಲನೆ ಮಾಡುತ್ತದೆ?. ನೈಸ್ ಸಂಸ್ಥೆ ಸ್ವಾಧೀನ ಪಡಿಸಿದ 20 ಸಾವಿರ ಎಕರೆಗೆ ಏನು ಮಾಡುತ್ತೀರಿ?. ಸರ್ಕಾರಕ್ಕೆ ನಾನು ನೈಸ್ ಸಂಬಂಧ ಕ್ರಮ ಕೈಗೊಳ್ಳಲು ಗಡುವು ಕೊಡುತ್ತೇನೆ. ನೈಸ್ ಸಂಸ್ಥೆಯ ಅವಶ್ಯಕತೆ ಇಲ್ಲ. ಸಾರ್ವಜನಿಕರಿಂದ ಮಾಡಲಾಗುತ್ತಿರುವ ಟೋಲ್ ದರೋಡೆಯನ್ನು ಯಾವಾಗ ನಿಲ್ಲಿಸುತ್ತದೆ?. ಒಂದು ವಾರ, 10 ದಿನಗಳ ಗಡುವು ಕೊಡುತ್ತೇವೆ.‌ ಬಿಜೆಪಿ – ಜೆಡಿಎಸ್ ಈ ಬಗ್ಗೆ ಸದನದಲ್ಲಿ ಹೋರಾಟ ಮಾಡಲಿದೆ ಎಂದು ಎಚ್ಚರಿಕೆ ನೀಡಿದರು.

ನೈಸ್ ಸಂಸ್ಥೆಗೆ ಭೂಮಿ ಕೊಡಲು ರೈತರನ್ನು ಹೆದರಿಸಿದ್ದೀರಿ. ಈಗ ಬಿಡದಿಯಲ್ಲಿ ರೈತರನ್ನು ಹೆದರಿಸುತ್ತಿದ್ದೀರಿ. ಕೋರ್ಟ್​ಗೆ ಅರ್ಜಿ ಹಾಕಿದ ಮಹಿಳಾ ರೈತೆ ಮನೆಗೆ ಹೋಗಿ ಬೆದರಿಕೆ ಹಾಕಲಾಗುತ್ತಿದೆ. ನೈಸ್ ಅಕ್ರಮ ಹಾಗೂ ಬಿಡದಿ ಟೌನ್​​ಶಿಪ್ ಎರಡೂ ಒಂದೇ. ನೈಸ್ ಯೋಜನೆ ವ್ಯಾಪ್ತಿಯಲ್ಲಿ ಐದು ಉಪನಗರ ಮಾಡಲು ಲೂಟಿ ಮಾಡಿದಿರಿ, ಬಿಡದಿ ಬಳಿ ಟೌನ್​​ಶಿಪ್ ಮಾಡಲು ಹೊರಟಿದ್ದೀರಿ. ಇದು ಒಂದೇ ನಾಣ್ಯದ ಎರಡು ಮುಖವಾಗಿದೆ ಎಂದು ತಿಳಿಸಿದರು.

ನೈಸ್ ಟೋಲ್ ರದ್ದು ಮಾಡಲು ನಾವೂ ಹೋರಾಟ ಮಾಡಲಿದ್ದೇವೆ. ನೈಸ್ ಸದನ ಸಮಿತಿ ವರದಿಯನ್ನು ಹಾಗೇ ಇಟ್ಟು ಕೊಂಡಿದ್ದೀರಿ. ಜಾತಿ ಗಣತಿ ಸಂಬಂಧ ಕಾಂತರಾಜ ರಿಪೋರ್ಟ್ ನ ಹಾಗೇ ಇಟ್ಟು ಕೊಂಡಿದ್ದೀರಿ? ಅದಕ್ಕೆ ಕೋಟಿ ಕೋಟಿ ಖರ್ಚು ಮಾಡಿದ್ದೀರಿ.‌ ಜಯಪ್ರಕಾಶ್ ನಾರಾಯಣ್ ವರದಿ ಹಾಗೇ ಇಟ್ಟು ಕೊಂಡಿದ್ದೀರಿ. ರಿಡೂ ಕೆಂಪಣ್ಣ ವರದಿ ಏನಾಯಿತು ಎಂದು ಕೇಳಿದರು.

ನೈಸ್ ಸ್ವಾಧೀನ ಮಾಡಿರುವ ಭೂಮಿಯನ್ನು ವಾಪಸ್​ ಪಡೆಯಿರಿ.‌ ರೈತರ ಭೂಮಿಯನ್ನು ವಾಪಸು ಕೊಡಿ. ಜೆಡಿಎಸ್ ಪ್ರಮಾಣಿಕ‌ ಹೋರಾಟ ಮಾಡಿದ್ದೇವೆ.‌ ಜನ‌ ನಮಗೆ ಬಹುಮತ ಕೊಟ್ಡಿಲ್ಲ‌.‌ ಕೊಟ್ಟಿದ್ದರೆ ಇದಕ್ಕೆ ತಡೆ ಹಾಕಬಹುದಿತ್ತು. ಮೈತ್ರಿ ಸರ್ಕಾರದಲ್ಲಿ ಸಹಕಾರ ಕೊಡದೇ ಇದ್ದಾಗ ನಾನು ಏನು ಮಾಡುವುದು?. ನನಗೆ ಸಹಕಾರ ಸಿಕ್ಕಿಲ್ಲ‌. ಅದಕ್ಕೇ ಬಹುಮತ ಕೊಡಿ ಅಂತ ಕೇಳುತ್ತಿದ್ದೇನೆ. ಕೊಟ್ಡಿದ್ದರೆ ಇದಕ್ಕೆ ತೆರೆ ಎಳೆಯುತ್ತಿದ್ದೆ ಎಂದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular