HomeKarnatakaBIG NEWS: ಸಿಎಂ ಸಿದ್ದರಾಮಯ್ಯ ಆಡೋದೆಲ್ಲ ಅಹಂಕಾರದ ಮಾತುಗಳೇ; HDK ವಾಗ್ದಾಳಿ

BIG NEWS: ಸಿಎಂ ಸಿದ್ದರಾಮಯ್ಯ ಆಡೋದೆಲ್ಲ ಅಹಂಕಾರದ ಮಾತುಗಳೇ; HDK ವಾಗ್ದಾಳಿ

ಮೈಸೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಆಡೋದೆಲ್ಲ ಅಹಂಕಾರದ ಮಾತುಗಳೇ ಎಂದು ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ವಿಧಾನಸಭಾ ಚುನಾವಣೆಯ ವೇಳೆ ಈ ಹಿಂದೆ ಪೈಲ್ವಾನರ ಹಾಗೇ ಭುಜ ಹಾಗೂ ತೊಡೆ ತಟ್ಟಿದ್ದರಲ್ಲ ಅಂತಹ ಕೆಲಸವನ್ನು ನಾವೆಂದೂ ಮಾಡಿಲ್ಲ. ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಹಿನ್ನೆಲೆಯಲ್ಲಿ ಜಾತ್ಯಾತೀತ ಪದ ತೆಗೆದುಹಾಕುವಂತೆ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಜಾತಿ ರಾಜಕಾರಣ ಮಾಡುತ್ತಿರುವವರೇ ಕಾಂಗ್ರೆಸ್ ನವರು ಅವರಿಂದ ನಾವು ಹೇಳಿಸಿಕೊಳ್ಳಬೇಕಿಲ್ಲ ಎಂದರು.

ಎರಡು ದಿನಗಳ ಕಾಲ ಮೈಸೂರು ಹಾಗೂ ಚಾಮರಾಜನಗರ ಪ್ರವಾಸ ಮಾಡುತ್ತೇನೆ. ಚಾಮರಾಜನಗರದಲ್ಲಿ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ವೇಳೆ ದೆವೇಗೌಡರು ಜೊತೆ ಇರಲಿದ್ದಾರೆ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular