HomeKarnatakaದೇವೇಗೌಡರ ಕುಟುಂಬವಾಯ್ತು ಈಗ ಯಡಿಯೂರಪ್ಪ ಕುಟುಂಬದ ವಿರುದ್ಧ ಷಡ್ಯಂತ್ರ: ಕಾಂಗ್ರೆಸ್ ಸರ್ವನಾಶವಾಗಲಿದೆ: ಹೆಚ್.ಡಿ.ಕೆ ವಾಗ್ದಾಳಿ

ದೇವೇಗೌಡರ ಕುಟುಂಬವಾಯ್ತು ಈಗ ಯಡಿಯೂರಪ್ಪ ಕುಟುಂಬದ ವಿರುದ್ಧ ಷಡ್ಯಂತ್ರ: ಕಾಂಗ್ರೆಸ್ ಸರ್ವನಾಶವಾಗಲಿದೆ: ಹೆಚ್.ಡಿ.ಕೆ ವಾಗ್ದಾಳಿ

ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಪೋಕ್ಸೋ ಕೇಸ್ ಗೆ ಸಂಬಂಧಿಸಿದಂತೆ ವಾರಂಟ್ ಜಾರಿ ವಿಚಾರವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, 82 ವರ್ಷದ ಯಡಿಯೂರಪ್ಪ ವಿರುದ್ಧ ಇಂದೆಂತಹ ಷಡ್ಯಂತ್ರ ಮಾಡಲು ಹೊರಟಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ, ದೇವೇಗೌಡರ ಕುಟುಂಬವನ್ನು ಮುಗಿಸಿದ್ದಾಯ್ತು, ಅದಕ್ಕಾಗಿ ಏನೆಲ್ಲ ಕುತಂತ್ರ ಮಾಡಿದಿರಿ ಎಂಬುದನ್ನು ನೋಡಿದ್ದಾಯ್ತು. ಈ ಬಗ್ಗೆ ಕಾನೂನು ಹೋರಾಟ ನಡೆಯುತ್ತಿದೆ ಅದು ಅತ್ತ ಇರಲಿ. ಈಗ ಕಾಂಗ್ರೆಸ್, ಯಡಿಯೂರಪ್ಪ ಕುಟುಂಬವನ್ನು ಮುಗಿಸಲು ಹೊರಟಿದೆ. ಅದಕ್ಕಾಗಿ ಪೋಕ್ಸೋ ಕೇಸ್ ನಂತಹ ಷಡ್ಯಂತ್ರ ಮಾಡಿ ಯಡಿಯೂರಪ್ಪ ಅವರನ್ನು ಬಂಧಿಸಲು ಯತ್ನಿಸುತ್ತಿದೆ. ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿರುವ 82 ವರ್ಷದ ಯಡಿಯೂರಪ್ಪರನ್ನು ಬಂಧಿಸಬೇಕು ಎಂಬ ಹುನ್ನಾರ ನಡೆಸುತ್ತಿರುವ ಕಾಂಗ್ರೆಸ್ ಮುಂದೊಂದು ದಿನ ಸರ್ವನಾಶವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಕರಣ ದಾಖಲಾಗಿ 4 ತಿಂಗಳು ಕಳೆದರೂ ಟಚ್ ಮಾಡಲಿಲ್ಲ. ಸಿಐಡಿ ಮುಂದೆ ಹಾಜರಾಗಿ ಯಡಿಯೂರಪ್ಪ ಹೇಳಿಕೆಗಳನ್ನು ನೀಡಿದರೂ ದುರುದ್ದೇಶಪೂರ್ವಕವಾಗಿ ಜಾಮೀನುರಹಿತ ವಾರಂಟ್ ಜಾರಿ ಮಾಡಲಾಗಿದೆ. ಇದು ರಾಜಕೀಯ ದುರುದ್ದೇಶ ಹಾಗೂ ಷಡ್ಯಂತ್ರ ಎಂಬುದು ಸ್ಪಷ್ಟವಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular