HomeKarnatakaBIG NEWS: ಅಂದು ನೀವೇ ಸಿಎಂ ಆಗಿ ಅಂದರೂ ಆಗಲಿಲ್ಲ: ಡಾ.ಜಿ.ಪರಮೇಶ್ವರ್ ಗೆ ಕೇಂದ್ರ ಸಚಿವ...

BIG NEWS: ಅಂದು ನೀವೇ ಸಿಎಂ ಆಗಿ ಅಂದರೂ ಆಗಲಿಲ್ಲ: ಡಾ.ಜಿ.ಪರಮೇಶ್ವರ್ ಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಟಾಂಗ್

ಬೆಂಗಳೂರು: ಡಿಸಿಎಂ ಡಾ.ಜಿ.ಪರಮೇಶ್ವರ್ ಇತ್ತೀಚೆಗೆ ತುಮಕೂರಿನಲ್ಲಿ ಮಾತನಾಡುತ್ತಾ ತನಗೆ ಮೂರು ಬಾರಿ ಮುಖ್ಯಮಂತ್ರಿಯಾಗುವ ಅವಕಾಶ ಕೈತಪ್ಪಿತು ಎಂದು ಅಳಲು ತೋಡಿಕೊಂಡಿದ್ದರು. ಪರಮೇಶ್ವರ್ ಅವರ ಹೇಳಿಕೆಗೆ ಇದೀಗ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

ಪರಮೇಶ್ವರ್ ಅವರ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ರುವ ನಡುವೆಯೇ ಸುದ್ದಿಗಾರರೊಂದಿಗೆ ಮಾತನಾಡಿರುವ ಹೆಚ್.ಡಿ.ಕುಮಾರಸ್ವಾಮಿ, ಡಾ. ಪರಮೇಶ್ವರ್ ಅವರಿಗೆ ಸಿಎಂ ಸ್ಥಾನ ಕೈತಪ್ಪಲು ಅವರದೇ ಪಕ್ಷದವರಾದ ಕಾಂಗ್ರೆಸ್ಸಿಗರೇ ನೇರ ಕಾರಣ, ಈ ಬಗ್ಗೆ ಪರಮೇಶ್ವರ್ ಅವರು ನಮ್ಮನ್ನು ಕೇಳುವ ಬದಲು ಮೊದಲು ತಮ್ಮದೇ ಪಕ್ಷದವರ ಜೊತೆ ಕೂತು ಚರ್ಚೆ ಮಾಡಲಿ ಎಂದು ಟಾಂಗ್ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಂದು ಅವರು ನನ್ನ ಜೊತೆ ಬಂದಾಗ ನಾನು ಸಿಎಂ ಆಗಬೇಡಿ ಅಂತಾ ಹೇಳಿದ್ನಾ? ನೀವೇ ಮುಖ್ಯಮಂತ್ರಿಯಾಗಿ ಎಂದು ನಾನೇ ಖುದ್ದಾಗಿ ಹೇಳಿದ್ದೆ. ನೀವೇ ಸಿಎಂ ಆಗಿ ಎಂದಾಗಲೂ ಅವರು ಆಗಲಿಲ್ಲವಲ್ಲ. ನನ್ನಿಂದಾಅಗಿ ಪರಮೇಶ್ವರ್ ಅವರಿಗೆ ಸಿಎಂ ಸ್ಥಾನ ಕೈತಪ್ಪಿಲ್ಲ. ಅವರ ಪಕ್ಷದ ನಾಯಕರಿಂದಲೇ ಆಗಿದೆ ಎಂದು ಹೇಳಿದರು.

ಇತ್ತೀಚೆಗೆ ತುಮಕೂರಿನಲ್ಲಿ ಮಾತನಾಡಿದ್ದ ಡಿಸಿಎಂ ಪರಮೇಶ್ವರ್, ನನಗೆ ಮೂರು ಬಾರಿ ಈ ರಾಜ್ಯದ ಸಿಎಂ ಆಗುವ ಅವಕಾಶ ಕೈತಪ್ಪಿತು. ಒಮ್ಮೆ ನಾನು ಚುನಾವಣೆಯಲ್ಲಿ ಸೋತಿದ್ದರಿಂದ ಅಂದು ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಬಳಿಕ ಮೈತ್ರಿ ಸರ್ಕಾರದ ಅವಧಿಯಲ್ಲಿ ಕಾರಣಾಂತರಗಳಿಂದ ಸಿಎಂ ಸ್ಥಾನ ಕೈತಪ್ಪಿತು. ಈ ಬಾರಿ ರಾಜಕೀಯ ಕಾರಣಗಳಿಂದಾಗಿ ಸಿಎಂ ಆಗಲು ಸಾಧ್ಯವಗಾಲಿಲ್ಲ ಎಂದು ಹೇಳಿ ಭಾವುಕರಾಗಿದ್ದರು. ಡಿ.ಕೆ.ಶಿವಕುಮಾರ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಸ್ಥಾನ ಸಿಕ್ಕಿದೆ. ಬಹಳ ಜವಾಬ್ದಾರಿಯುತವಾದ ಸ್ಥಾನ. ಯಾವುದೇ ಕುಂದು ಕೊರತೆಯಿಲ್ಲದಂತೆ ನಿಭಾಯಿಸುವುದಾಗಿ ತಿಳಿಸಿದ್ದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular