HomeKarnatakaBIG NEWS: ಹೆಚ್.ಡಿ.ದೇವೇಗೌಡರು ಆಂಬುಲೆನ್ಸ್ ನಲ್ಲಿ ಬಂದು ಪ್ರಚಾರ ಮಾಡಲಿದ್ದಾರೆ ಎಂದು ಡಿ.ಕೆ.ಸುರೇಶ್ ವ್ಯಂಗ್ಯ: ಕುಮಾರಸ್ವಾಮಿ...

BIG NEWS: ಹೆಚ್.ಡಿ.ದೇವೇಗೌಡರು ಆಂಬುಲೆನ್ಸ್ ನಲ್ಲಿ ಬಂದು ಪ್ರಚಾರ ಮಾಡಲಿದ್ದಾರೆ ಎಂದು ಡಿ.ಕೆ.ಸುರೇಶ್ ವ್ಯಂಗ್ಯ: ಕುಮಾರಸ್ವಾಮಿ ತಿರುಗೇಟು

ರಾಮನಗರ: ಚನ್ನಪಟ್ಟಣ ಉಪಚುನಾವಣಾ ಅಖಾಡ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ನಡುವಿನ ವಾಕ್ಸಮರಕ್ಕೆ ವೇದಿಕೆಯಾಗಿದೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಆಂಬುಲೆನ್ಸ್ ನಲ್ಲಿ ಬಂದು ಪ್ರಚಾರ ಮಾಡಲಿದ್ದಾರೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ವ್ಯಂಗ್ಯವಾಡಿದ್ದಾರೆ.

ಇಳಿಯವಯಸ್ಸಿನಲ್ಲಿಯೂ ಮೊಮ್ಮಗನ ಪರ ಚುನಾವಣಾ ಪ್ರಚಾರ ನಡೆಸುತ್ತಿರುವ ಹೆಚ್.ಡಿ.ದೇವೇಗೌಡರ ಬಗ್ಗೆ ವ್ಯಂಗ್ಯವಾಡಿರುವ ಡಿ.ಕೆ.ಸುರೇಶ್ ಹೇಳಿಕೆ ಮಾಜಿ ಸಿಎಂ ಕುಮಾರಸ್ವಾಮಿಯವರನ್ನು ಕೆರಳಿಸಿದ್ದು, ದೇವೇಗೌಡರ ಆರೋಗ್ಯದ ಬಗ್ಗೆ ಅಷ್ಟೊಂದು ವ್ಯಂಗ್ಯವಾಗಿ ಮಾತನಾಡಿದ್ದಾರೆ. ಅದಕ್ಕೆ ಕಾಲವೇ ಉತ್ತರ ನೀಡುತ್ತೆ ಎಂದಿದ್ದಾರೆ.

ಎಂ.ಸಿ.ಅಶ್ವತ್ಥ ಕೊಟ್ಟ ಹೇಳಿಕೆಯನ್ನು ಡಿ.ಕೆ.ಸುರೇಶ್ ಹೇಳಿದ್ದಾರೆ. ಇದೇ ಅಶ್ವತ್ಥ ಪರ ಹಿಂದೆ ದೇವೇಗೌಡರು ಹಳ್ಳಿ ಹಳ್ಳಿಗೆ ಪ್ರಚಾರಕ್ಕೆ ಬಂದಿದ್ದರಲ್ಲಾ? ಇಂದು ಮೊಮ್ಮಗನ ಪಟ್ಟಾಭಿಷೇಕ ಮಾಡಲು ದೇವೇಗೌಡರು ಬರುತ್ತಿದ್ದಾರೆ ಎಂದು ಅಶ್ವತ್ಥ ಹೇಳುತ್ತಿದ್ದಾರೆ. ಅಂದು ಅಶ್ವತ್ಥ್ ಪರ ಪ್ರಚಾರಕ್ಕೆ ದೇವೇಗೌಡರು ಹೋಗಿರಲಿಲ್ಲವೇ? ಅವತ್ತು ಯಾರಿಗೋಸ್ಕರ ಹೋಗಿದ್ದರು? ಅವರ ಸಣ್ಣತನದ ಮಾತಿಗೆ ಕಾಲವೇ ಉತ್ತರ ಕೊಡುತ್ತೆ ಎಂದು ತಿರುಗೇಟು ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular