HomeLatest Newsಆಹಾರ ಸ್ವಾವಲಂಬನೆಯಲ್ಲಿ ಗಯಾನಾ ವಿಶ್ವಕ್ಕೇ ಫಸ್ಟ್: ವಿದೇಶಿ ಆಮದಿಲ್ಲದ ಈ ಪುಟ್ಟ ದೇಶದ ಸಾಧನೆಗೆ ಜಗತ್ತೇ...

ಆಹಾರ ಸ್ವಾವಲಂಬನೆಯಲ್ಲಿ ಗಯಾನಾ ವಿಶ್ವಕ್ಕೇ ಫಸ್ಟ್: ವಿದೇಶಿ ಆಮದಿಲ್ಲದ ಈ ಪುಟ್ಟ ದೇಶದ ಸಾಧನೆಗೆ ಜಗತ್ತೇ ಬೆರಗು

ಇಂದಿನ ದಿನಗಳಲ್ಲಿ ಅನೇಕ ಶ್ರೀಮಂತ ರಾಷ್ಟ್ರಗಳೂ ಕೂಡ ಆಹಾರಕ್ಕಾಗಿ ಇತರ ದೇಶಗಳ ಆಮದಿನ ಮೇಲೆ ಅವಲಂಬಿತವಾಗಿವೆ. ಆದರೆ, ದಕ್ಷಿಣ ಅಮೆರಿಕದ ಒಂದು ಪುಟ್ಟ ದೇಶ ಮಾತ್ರ ಈ ವಿಷಯದಲ್ಲಿ ಇಡೀ ಜಗತ್ತಿಗೇ ಮಾದರಿಯಾಗಿದೆ. ಆ ದೇಶವೇ ಗಯಾನಾ (Guyana).ತನ್ನ ಜನಸಂಖ್ಯೆಗೆ ಬೇಕಾದ ಎಲ್ಲಾ 7 ಅಗತ್ಯ ಆಹಾರ ವಿಭಾಗಗಳನ್ನು ಸ್ವತಃ ಉತ್ಪಾದಿಸುವ ವಿಶ್ವದ ಏಕೈಕ ಆತ್ಮನಿರ್ಭರ ದೇಶ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.

ಗಯಾನಾದ ಒಟ್ಟು ಜನಸಂಖ್ಯೆ ಕೇವಲ 8 ಲಕ್ಷ. ಅಚ್ಚರಿಯೆಂದರೆ, ಇದರಲ್ಲಿ ಸುಮಾರು ಶೇ. 40ರಷ್ಟು (ಅಂದರೆ 3.5 ಲಕ್ಷ) ಜನರು ಭಾರತೀಯ ಮೂಲದವರು 19ನೇ ಶತಮಾನದಲ್ಲಿ ಬ್ರಿಟಿಷರು ಉತ್ತರ ಪ್ರದೇಶ ಮತ್ತು ಬಿಹಾರದಿಂದ ಕಬ್ಬಿನ ತೋಟಗಳಲ್ಲಿ ಕೆಲಸ ಮಾಡಲು ಕರೆದೊಯ್ದ ಕಾರ್ಮಿಕರು ಇಂದು ಆ ದೇಶದ ಶಾಶ್ವತ ನಿವಾಸಿಗಳಾಗಿದ್ದಾರೆ.

ಇಂದಿಗೂ ಅಲ್ಲಿನ ಕೃಷಿ ಸಂಸ್ಕೃತಿಯಲ್ಲಿ ಭಾರತೀಯತೆಯ ಸುವಾಸನೆ ಎದ್ದುಕಾಣುತ್ತದೆ.ಗಯಾನಾ ವಿಸ್ತೀರ್ಣದಲ್ಲಿ ನಮ್ಮ ಭಾರತದ ಗುಜರಾತ್‌ಗೆ ಸಮಾನವಾಗಿದೆ. ಆದರೆ ಜನಸಂಖ್ಯೆ ಮಾತ್ರ ಗುಜರಾತ್‌ಗಿಂತ (6 ಕೋಟಿ) ಸಾವಿರ ಪಟ್ಟು ಕಡಿಮೆ. ದೇಶದ ಶೇ. 85ರಷ್ಟು ಭಾಗ ದಟ್ಟವಾದ ಮಳೆಕಾಡುಗಳಿಂದ ಕೂಡಿದ್ದರೂ ಲಭ್ಯವಿರುವ ಭೂಮಿಯಲ್ಲೇ ಸಮೃದ್ಧ ಬೆಳೆ ತೆಗೆಯುವ ಮೂಲಕ ಈ ದೇಶ ಇತಿಹಾಸ ಸೃಷ್ಟಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯಾವುದು ಆ 7 ಅಗತ್ಯ ಆಹಾರ ವರ್ಗಗಳು?

ನೇಚರ್ ಫುಡ್ ನಿಯತಕಾಲಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ, ವಿಶ್ವದ 186 ದೇಶಗಳಲ್ಲಿ ಗಯಾನಾ ಮಾತ್ರ ಸಂಪೂರ್ಣ ಆಹಾರ ಸ್ವಾವಲಂಬನೆ ಸಾಧಿಸಿದೆ. ಅಮೆರಿಕದಂತಹ ದೇಶಗಳು ಕೇವಲ 4 ವಿಭಾಗಗಳಲ್ಲಿ, ಚೀನಾ 6 ವಿಭಾಗಗಳಲ್ಲಿ ಸ್ವಾವಲಂಬಿಯಾಗಿದ್ದರೆ, ಗಯಾನಾ ಈ ಕೆಳಗಿನ ಎಲ್ಲಾ 7 ವಿಭಾಗಗಳಲ್ಲಿ ನಂ.1 ಆಗಿದೆ

ಪಿಷ್ಟಯುಕ್ತ ಆಹಾರ: ಅಕ್ಕಿ, ಜೋಳ, ಗೆಣಸು (ಅಗತ್ಯಕ್ಕಿಂತ ಹೆಚ್ಚು ಅಕ್ಕಿ ಬೆಳೆಯುವ ದೇಶವಿದು).

ದ್ವಿದಳ ಧಾನ್ಯಗಳು: ಸೋಯಾಬೀನ್, ಕಡಲೆಕಾಯಿ ಮತ್ತು ವಿವಿಧ ಬೇಳೆಕಾಳುಗಳು.

ತರಕಾರಿಗಳು: ಎಲ್ಲಾ ಬಗೆಯ ಸೊಪ್ಪು ಮತ್ತು ತಾಜಾ ತರಕಾರಿಗಳು.

ಹಣ್ಣುಗಳು: ಸ್ಥಳೀಯವಾಗಿ ಬೆಳೆಯುವ ವೈವಿಧ್ಯಮಯ ಹಣ್ಣುಗಳು.

ಡೈರಿ ಉತ್ಪನ್ನಗಳು: ಹಾಲು, ಚೀಸ್ ಮತ್ತು ಇತರ ಹಾಲಿನ ಉತ್ಪನ್ನಗಳು.

ಮಾಂಸ: ಕೋಳಿ, ಹಂದಿ ಮತ್ತು ಗೋಮಾಂಸ.

ಮೀನುಗಾರಿಕೆ: ಸಿಹಿನೀರು ಮತ್ತು ಸಮುದ್ರದ ಮೀನುಗಳ ಅಪಾರ ಲಭ್ಯತೆ

ಸಂಶೋಧನೆಯ ಪ್ರಕಾರ, ಜಗತ್ತಿನ ಕೇವಲ 7 ದೇಶಗಳಲ್ಲಿ ಒಂದು ದೇಶ ಮಾತ್ರ 5 ಅಥವಾ ಅದಕ್ಕಿಂತ ಹೆಚ್ಚು ವಿಭಾಗಗಳಲ್ಲಿ ಸ್ವಾವಲಂಬಿಯಾಗಿದೆ. ಆದರೆ, ಅಫ್ಘಾನಿಸ್ತಾನ, ಯುಎಇ (UAE), ಇರಾಕ್, ಮಕಾವೊ, ಕತಾರ್ ಮತ್ತು ಯೆಮನ್ ದೇಶಗಳು ಒಂದು ವಿಭಾಗದಲ್ಲೂ ಸ್ವಾವಲಂಬನೆ ಹೊಂದಿಲ್ಲ. ಇವು ಆಹಾರಕ್ಕಾಗಿ ಸಂಪೂರ್ಣವಾಗಿ ಬೇರೆ ದೇಶಗಳನ್ನೇ ನಂಬಿವೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular