HomeEntertainmentವಿಚ್ಛೇದನದ ನಂತ್ರ ಪತ್ನಿ ಬಗ್ಗೆ ನಟನಿಗೆ ಗೊತ್ತಾಯ್ತು ಈ ಸತ್ಯ

ವಿಚ್ಛೇದನದ ನಂತ್ರ ಪತ್ನಿ ಬಗ್ಗೆ ನಟನಿಗೆ ಗೊತ್ತಾಯ್ತು ಈ ಸತ್ಯ

ನಟ ಗುಲ್ಶನ್ ದೇವಯ್ಯ ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮ ಸಂಬಂಧದ ಬಗ್ಗೆ ಬಹಿರಂಗವಾಗಿ ಮಾತನಾಡುವ ಗುಲ್ಶನ್‌ ದೇವಯ್ಯ ಈಗ ಮತ್ತೆ ಮಾಜಿ ಪತ್ನಿ ಬಗ್ಗೆ ಮಾತನಾಡಿದ್ದಾರೆ. ಗುಲ್ಶನ್‌ ದೇವಯ್ಯ ಮೂರು ವರ್ಷಗಳ ಹಿಂದೆ ತಮ್ಮ ಪತ್ನಿ ಕಲ್ಲಿರೊಯ್ ಟಿಜಿಯಾಫೆಟಾಗೆ ವಿಚ್ಛೇದನ ನೀಡಿದ್ದರು.

ವಿಚ್ಛೇದನದ ನಂತ್ರವೂ ಅವರು ಪತ್ನಿ ಕಲ್ಲಿರೊಯ್ ಟಿಜಿಯಾಫೆಟಾ ಜೊತೆ ಒಳ್ಳೆ ಸಂಬಂಧದಲ್ಲಿದ್ದರು. ಅನೇಕ ಸಂದರ್ಭದಲ್ಲಿ ಅವರಿಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ಬಗ್ಗೆ ಗುಲ್ಶನ್‌ ದೇವಯ್ಯ ಕೂಡ ಮಾತನಾಡಿದ್ದರು. ಈ ಮಧ್ಯೆ, ವಿಚ್ಛೇದನದ ನಂತ್ರವೂ ನಿಮ್ಮ ಮಾಜಿ ಪತ್ನಿಯ ಜೊತೆ ನೀವು ಡೇಟ್‌ ಮಾಡ್ತಿರಾ ಎನ್ನುವ ಪ್ರಶ್ನೆಗೆ ಗುಲ್ಶನ್‌ ಉತ್ತರ ನೀಡಿದ್ದಾರೆ. ಹಳೆ ದಿನಗಳನ್ನು ಗುಲ್ಶನ್‌ ನೆನಪು ಮಾಡಿಕೊಂಡಿದ್ದಾರೆ. ಕಲ್ಲಿರೊಯ್ ಟಿಜಿಯಾಫೆಟಾ ಭಾರತಕ್ಕೆ ಬಂದಾಗ ಅವರ ಮೇಲೆ ಪ್ರೀತಿ ಚಿಗುರಿತ್ತು. ಇಬ್ಬರು ಮದುವೆಯಾದ್ವಿ. ಆದ್ರೆ ಮದುವೆ ದೀರ್ಘಕಾಲ ಉಳಿಯಲಿಲ್ಲ. ವಿಚ್ಛೇದನವಾಯ್ತು.

ಮದುವೆಯಾಗಿ ಎಂಟು ವರ್ಷಗಳ ನಂತ್ರ ವಿಚ್ಛೇದನ ಪಡೆದಿದ್ದು, ಡಿವೋರ್ಸ್‌ ನಂತ್ರ ನಮ್ಮಿಬ್ಬರ ಮಧ್ಯೆ ಪ್ರೀತಿ ಇದೆ ಎಂಬುದು ನನ್ನ ಅರಿವಿಗೆ ಬಂತು. ನಾವಿಬ್ಬರು ಒಳ್ಳೆ ಸ್ನೇಹಿತರಾಗಿ ಮುಂದುವರೆದಿದ್ವಿ. ಆ ಸ್ನೇಹ ಈಗ ಮತ್ತೆ ಪ್ರೀತಿಗೆ ತಿರುಗಿದೆ. ಮತ್ತೆ ನಾನು ಅವರನ್ನು ಮದುವೆಯಾಗ್ತೇನೆ ಎನ್ನಲು ಸಾಧ್ಯವಿಲ್ಲ. ಆದರೆ ಪ್ರೀತಿ ಮತ್ತು ಆ ಕ್ಷಣವನ್ನು ಎಂಜಾಯ್‌ ಮಾಡ್ತೇನೆ ಎಂದು ಗುಲ್ಶನ್‌ ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular