HomeLatest Newsಗೃಹಲಕ್ಷ್ಮಿ ಫಲಾನುಭವಿಗಳಿಗೆ ಬಿಗ್ ಅಲರ್ಟ್ : ಇನ್ಮುಂದೆ ₹2,000 ಹಣ ಬೇಕಿದ್ರೆ ಈ ದಾಖಲೆಗಳು ಇರಲೇಬೇಕು

ಗೃಹಲಕ್ಷ್ಮಿ ಫಲಾನುಭವಿಗಳಿಗೆ ಬಿಗ್ ಅಲರ್ಟ್ : ಇನ್ಮುಂದೆ ₹2,000 ಹಣ ಬೇಕಿದ್ರೆ ಈ ದಾಖಲೆಗಳು ಇರಲೇಬೇಕು

ಬೆಂಗಳೂರು: ರಾಜ್ಯದ ಕೋಟ್ಯಂತರ ಮಹಿಳೆಯರ ಖಾತೆಗೆ ಪ್ರತಿ ತಿಂಗಳು ಜಮೆಯಾಗುವ ಗೃಹಲಕ್ಷ್ಮಿ (Gruhalakshmi Scheme) ಯೋಜನೆಯ ಹಣದ ವಿಚಾರದಲ್ಲಿ ರಾಜ್ಯ ಸರ್ಕಾರ ಭಾರಿ ಮಹತ್ವದ ಹಾಗೂ ಕಠಿಣ ತೀರ್ಮಾನ ಕೈಗೊಂಡಿದೆ ಅನರ್ಹರು ಮತ್ತು ನಕಲಿ ದಾಖಲೆ ಸೃಷ್ಟಿಸಿ ಯೋಜನೆಯ ಲಾಭ ಪಡೆಯುತ್ತಿರುವುದಕ್ಕೆ ಬ್ರೇಕ್ ಹಾಕಲು ಮುಂದಾಗಿರುವ ಸರ್ಕಾರ, ಫಲಾನುಭವಿಗಳಿಗೆ ಇಂದಿನಿಂದಲೇ ಬಯೋಮೆಟ್ರಿಕ್ (Biometrics) ಕಡ್ಡಾಯಗೊಳಿಸಿ ಹೊಸ ಆದೇಶ ಹೊರಡಿಸಿದೆ.

ಇಂದಿನಿಂದ ಸರಿಯಾಗಿ ಒಂದು ತಿಂಗಳ ಒಳಗಾಗಿ ಫಲಾನುಭವಿ ಮಹಿಳೆಯರು ತಮ್ಮ ಬಯೋಮೆಟ್ರಿಕ್ ಪ್ರಕ್ರಿಯೆಯನ್ನು ಪೂರ್ಣಗೊಳಿಸದಿದ್ದರೆ, ಅವರ ಖಾತೆಗೆ ಬರುತ್ತಿದ್ದ ₹2,000 ಮಾಸಿಕ ಧನಸಹಾಯ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ

₹128 ಕೋಟಿ ದುರುಪಯೋಗ ಪರಿಷ್ಕರಣೆಗೆ ಅಸಲಿ ಕಾರಣವೇನು?

ರಾಜ್ಯದಲ್ಲಿ ಸದ್ಯ ಸುಮಾರು 1.30 ಕೋಟಿ ಗೃಹಲಕ್ಷ್ಮಿ ಫಲಾನುಭವಿಗಳಿದ್ದಾರೆ. ಆದರೆ ಗ್ಯಾರಂಟಿ ಅನುಷ್ಠಾನ ಸಮಿತಿ ನಡೆಸಿದ ಆಘಾತಕಾರಿ ಪರಿಶೀಲನೆಯಲ್ಲಿ ಭಾರಿ ಅಕ್ರಮ ಬೆಳಕಿಗೆ ಬಂದಿದೆ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯೋಜನೆಗೆ ಒಳಪಟ್ಟಿದ್ದ ಸುಮಾರು 1 ಲಕ್ಷದ 48 ಸಾವಿರ ಮಹಿಳೆಯರು ಮೃತಪಟ್ಟಿದ್ದಾರೆ.ಆಶ್ಚರ್ಯಕರ ಸಂಗತಿಯೆಂದರೆ, ಮಹಿಳೆಯರು ಮೃತಪಟ್ಟಿದ್ದರೂ ಅವರ ಖಾತೆಗಳಿಗೆ ಕಳೆದ 5 ತಿಂಗಳಿನಿಂದ ನಿರಂತರವಾಗಿ ಹಣ ಜಮಾವಣೆಯಾಗುತ್ತಿದೆ.ಈ ಮೂಲಕ ಸರ್ಕಾರದ ಬರೋಬ್ಬರಿ ₹128 ಕೋಟಿ ರೂಪಾಯಿ ಹಣ ದುರುಪಯೋಗವಾಗಿದೆ ಎಂಬ ದಿಗಿಲುಗೊಳಿಸುವ ಮಾಹಿತಿ ಲಭ್ಯವಾಗಿದೆ.

ಕೆಲವೆಡೆ ಮೃತಪಟ್ಟವರ ಹೆಸರಿನಲ್ಲಿ ಬೇರೆಯವರು ಹಣ ಪಡೆಯುತ್ತಿರುವುದು ಮತ್ತು ತಪ್ಪು ಮೊಬೈಲ್ ಸಂಖ್ಯೆಗಳನ್ನು ನೀಡಿರುವುದು ನಮ್ಮ ಗಮನಕ್ಕೆ ಬಂದಿದೆ. ಬಾಗಲಕೋಟೆ ಸೇರಿದಂತೆ ಹಲವೆಡೆ ನಾವು ಪರಿಶೀಲನೆ ನಡೆಸಿದ್ದು, ಯಾರದೋ ನಂಬರ್‌ಗೆ ಯಾರದೋ ಹಣ ಹೋಗುತ್ತಿದೆ. ಹೀಗಾಗಿ ಫಲಾನುಭವಿಗಳ ಮರುಪರಿಶೀಲನೆ (Recheck) ನಡೆಸುತ್ತಿದ್ದೇವೆ.

ಹಣ ಮುಂದುವರಿಯಲು ಫಲಾನುಭವಿಗಳು ಏನು ಮಾಡಬೇಕು? ಎಲ್ಲಿಗೆ ಹೋಗಬೇಕು?

ನಿಮ್ಮ ಮನೆಗೆ ಬರುತ್ತಿರುವ ಗೃಹಲಕ್ಷ್ಮಿ ಹಣ ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯಬೇಕಾದರೆ ತಕ್ಷಣವೇ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಿ:

ಬಯೋಮೆಟ್ರಿಕ್ ಕಡ್ಡಾಯ: ಒಂದು ತಿಂಗಳ ಒಳಗಾಗಿ ಹೆಬ್ಬೆಟ್ಟು (Fingerprint), ಕಣ್ಣಿನ ಐರಿಸ್ (Iris) ಅಥವಾ ಫೇಸ್ ಸ್ಕ್ಯಾನ್ (Face Scan) ಮೂಲಕ ಬಯೋಮೆಟ್ರಿಕ್ ವೆರಿಫಿಕೇಶನ್ ಮಾಡಿಸಬೇಕು.

ಇಲ್ಲಿಗೆ ಭೇಟಿ ನೀಡಿ: ನಿಮ್ಮ ಹತ್ತಿರದ ಬೆಂಗಳೂರು ಒನ್ (Bengaluru One), ಗ್ರಾಮ ಒನ್ (Gram One) ಅಥವಾ ಬಾಪೂಜಿ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಈ ಪ್ರಕ್ರಿಯೆಯನ್ನು ಸುಲಭವಾಗಿ ಮುಗಿಸಬಹುದು.

ಕಡ್ಡಾಯವಾಗಿ ಬೇಕಾಗುವ ದಾಖಲೆಗಳು: ಬಯೋಮೆಟ್ರಿಕ್ ಮಾಡಲು ಹೋಗುವಾಗ ಆಧಾರ್ ಕಾರ್ಡ್, ರೇಷನ್ ಕಾರ್ಡ್ (Ration Card) ಮತ್ತು ಯೋಜನೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ತಪ್ಪದೇ ತೆಗೆದುಕೊಂಡು ಹೋಗಿ.

ಇ-ಕೆವೈಸಿ (e-KYC): ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರುವುದನ್ನು (e-KYC) ಮತ್ತೊಮ್ಮೆ ಖಚಿತಪಡಿಸಿಕೊಳ್ಳಿ.

SC/ST ಸಮುದಾಯದವರಿಗೆ ಸೂಚನೆ: ಫಲಾನುಭವಿಗಳು ಎಸ್‌ಸಿ (SC) ಅಥವಾ ಎಸ್‌ಟಿ (ST) ಸಮುದಾಯಕ್ಕೆ ಸೇರಿದವರಾಗಿದ್ದರೆ ತಮ್ಮ ಆರ್.ಡಿ (RD) ನಂಬರ್ ನೀಡುವುದು ಕಡ್ಡಾಯವಾಗಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular