ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಗೃಹಲಕ್ಷ್ಮಿ ಯೋಜನೆಗೆ ಮೂರು ವರ್ಷ ಪೂರ್ಣಗೊಂಡಿದೆ. ಈ ಯೋಜನೆ ಮಹಿಳೆಯರನ್ನು ಸಬಲೀಕರಣಗೊಳಿಸುವ ಶಕ್ತಿಯಾಗಿದೆ.
ಕಳೆದ ಮೂರು ವರ್ಷಗಳಲ್ಲಿ 1.24 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ, ಇದುವರೆಗೆ ₹76,500 ಕೋಟಿಗೂ ಹೆಚ್ಚು ವೆಚ್ಚ ಮಾಡಲಾಗಿದೆ. ಇದರಿಂದ ಕರ್ನಾಟಕದ ಪ್ರತಿ ಕುಟುಂಬಕ್ಕೂ ಆರ್ಥಿಕ ನೆರವು ಒದಗಿಸಲಾಗಿದೆ.
ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ₹2,000 ಜಮೆಯಾಗುವುದರಿಂದ, ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ, ಪದೇಪದೇ ಕಚೇರಿಗಳಿಗೆ ಅಲೆದಾಡುವ ಅಗತ್ಯವಿಲ್ಲದೆ ಹಾಗೂ ಅನಗತ್ಯ ವಿಳಂಬವಿಲ್ಲದೆ ಸರಿಯಾದ ಸಮಯಕ್ಕೆ ಆರ್ಥಿಕ ನೆರವು ದೊರೆಯುತ್ತಿದೆ.
₹76,500 ಕೋಟಿಗೂ ಹೆಚ್ಚು ಮೊತ್ತವನ್ನು ಮಹಿಳೆಯರ ಖಾತೆಗಳಿಗೆ ನೇರವಾಗಿ ವರ್ಗಾಯಿಸುವ ಮೂಲಕ, ಕರ್ನಾಟಕದಾದ್ಯಂತ ಮಹಿಳೆಯರ ಆತ್ಮವಿಶ್ವಾಸ, ಘನತೆ ಹಾಗೂ ಕುಟುಂಬಗಳ ಆರ್ಥಿಕ ಭದ್ರತೆಯನ್ನು ಮತ್ತಷ್ಟು ಬಲಪಡಿಸಲಾಗಿದೆ.
ಯಶಸ್ವಿ ಮೂರು ವರ್ಷಗಳನ್ನು ಪೂರೈಸಿರುವ ‘ಗೃಹಲಕ್ಷ್ಮಿ’ ಯೋಜನೆಯು ನಾಡಿನ ಪ್ರತಿ ಮನೆಯ ನಿರ್ವಹಣೆಗೆ ದೊಡ್ಡ ಬೆಂಬಲವಾಗಿದೆ. ಪತಿಯ ಆರೋಗ್ಯಕ್ಕೆ ಬೇಕಾದ ಔಷಧಿ, ಮನೆಗೊಂದು ಟಿವಿ ಹಾಗೂ ದಿನನಿತ್ಯದ ಕೆಲ ಅಗತ್ಯಗಳನ್ನು ಗೃಹಲಕ್ಷ್ಮಿ ಹಣದಿಂದಲೇ ನಿಭಾಯಿಸುತ್ತಿದ್ದಾರೆ. ಮಹಿಳೆಯರ ಕೈಗೆ ಸಿಗುವ ಆರ್ಥಿಕ ಬಲವು ಇಡೀ ಕುಟುಂಬದ ನೆಮ್ಮದಿಯನ್ನು ಹೇಗೆ ಹೆಚ್ಚಿಸುತ್ತದೆ ಎನ್ನುವುದಕ್ಕೆ ಈ ಯಶೋಗಾಥೆಯೇ ಒಂದು ಉತ್ತಮ ನಿದರ್ಶನ.
ಯಶಸ್ವಿ ಮೂರು ವರ್ಷಗಳನ್ನು ಪೂರೈಸಿರುವ 'ಗೃಹಲಕ್ಷ್ಮಿ' ಯೋಜನೆಯು ನಾಡಿನ ಪ್ರತಿ ಮನೆಯ ನಿರ್ವಹಣೆಗೆ ದೊಡ್ಡ ಬೆಂಬಲವಾಗಿದೆ. ಪತಿಯ ಆರೋಗ್ಯಕ್ಕೆ ಬೇಕಾದ ಔಷಧಿ, ಮನೆಗೊಂದು ಟಿವಿ ಹಾಗೂ ದಿನನಿತ್ಯದ ಕೆಲ ಅಗತ್ಯಗಳನ್ನು ಗೃಹಲಕ್ಷ್ಮಿ ಹಣದಿಂದಲೇ ನಿಭಾಯಿಸುತ್ತಿರುವ ಈ ತಾಯಿಯ ಕಥೆ ಈ ವಿಡಿಯೋದಲ್ಲಿದೆ. ಮಹಿಳೆಯರ ಕೈಗೆ ಸಿಗುವ ಆರ್ಥಿಕ ಬಲವು ಇಡೀ… pic.twitter.com/92b9R0UjLX
— DIPR Karnataka (@KarnatakaVarthe) August 31, 2026
ಮನೆಯಂಗಳದಲ್ಲಿಯೇ ಸ್ವಾವಲಂಬನೆಯ ಹೆಜ್ಜೆ – ಗೃಹಲಕ್ಷ್ಮಿಯ ಆಸರೆ
ಕೂಲಿ ಕೆಲಸಕ್ಕೆ ಹೋದರೆ ಮನೆಯ ವಯಸ್ಸಾದವರು ಹಾಗೂ ಮಕ್ಕಳ ನಿರ್ವಹಣೆ ಕಷ್ಟವಾಗುತ್ತಿತ್ತು. ಆದರೆ ಯಶಸ್ವಿ ಮೂರು ವರ್ಷಗಳನ್ನು ಪೂರೈಸಿರುವ 'ಗೃಹಲಕ್ಷ್ಮಿ' ಯೋಜನೆಯು ಈ ತಾಯಿಯ ಬದುಕಿಗೆ ನೆಮ್ಮದಿ ತಂದಿದೆ. ಯೋಜನೆಯಿಂದ ಬರುವ ಹಣದಲ್ಲಿಯೇ ಸಣ್ಣದಾಗಿ ಪಾತ್ರೆ ವ್ಯಾಪಾರ ಹಾಗೂ… pic.twitter.com/iXxsn24jcQ
— DIPR Karnataka (@KarnatakaVarthe) August 31, 2026

