HomeLatest NewsBIG NEWS : ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್..! ಪಿಯುಸಿ ನಿಯಮಗಳಲ್ಲಿ ಮಹತ್ವದ ಬದಲಾವಣೆ...

BIG NEWS : ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್..! ಪಿಯುಸಿ ನಿಯಮಗಳಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ.!

ದೇಶದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅದರೊಂದಿಗೆ ವಾಯು ಮಾಲಿನ್ಯವೂ ಏರಿಕೆಯಾಗುತ್ತಿದೆ. ಗಡುವು ಮೀರಿದ ವಾಹನಗಳು ಹಾಗೂ ಮಾಲಿನ್ಯ ಪ್ರಮಾಣಪತ್ರ (PUC) ಪಡೆಯದೇ ಸಂಚರಿಸುವ ವಾಹನಗಳು ಮಾಲಿನ್ಯ ಹೆಚ್ಚಲು ಪ್ರಮುಖ ಕಾರಣಗಳಾಗಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ವಾಹನಗಳ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (PUCC) ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲು ಸಿದ್ಧತೆ ನಡೆಸುತ್ತಿದೆ ಎನ್ನಲಾಗಿದೆ.

‘ಪಿಯುಸಿಸಿ 3.0’ (PUCC 3.0) ಎಂಬ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ಸಾರಿಗೆ ಇಲಾಖೆ ಚಿಂತನೆ ನಡೆಸಿದ್ದು, ಇದರಿಂದ BS-6 ವಾಹನ ಮಾಲೀಕರಿಗೆ ದೊಡ್ಡ ಮಟ್ಟದ ರಿಯಾಯಿತಿ ಸಿಗುವ ಸಾಧ್ಯತೆ ಇದ್ದರೆ, BS-4 ವಾಹನ ಮಾಲೀಕರಿಗೆ ಹೊಸ ನಿಯಮಗಳು ಶಾಕ್ ನೀಡುವ ಸಾಧ್ಯತೆ ಇದೆ.

ಇನ್ನುಮುಂದೆ 3 ವರ್ಷಕ್ಕೊಮ್ಮೆ ನವೀಕರಣ!

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಸ್ತುತ ರಸ್ತೆಯಲ್ಲಿ ವಾಹನ ಚಲಾಯಿಸಲು ಪಿಯುಸಿ (Pollution Under Control) ಪ್ರಮಾಣಪತ್ರ ಕಡ್ಡಾಯವಾಗಿದೆ. ಈಗಿರುವ ನಿಯಮದ ಪ್ರಕಾರ ಅದನ್ನು ವರ್ಷಕ್ಕೊಮ್ಮೆ ನವೀಕರಿಸಬೇಕು. ಆದರೆ ಹೊಸ ಪ್ರಸ್ತಾವನೆಯಂತೆ, 6 ವರ್ಷಕ್ಕಿಂತ ಕಡಿಮೆ ವಯಸ್ಸಿನ BS-6 ಖಾಸಗಿ ವಾಹನಗಳಿಗೆ ಪಿಯುಸಿಸಿ ಪ್ರಮಾಣಪತ್ರದ ಮಾನ್ಯತೆಯನ್ನು 3 ವರ್ಷಗಳವರೆಗೆ ವಿಸ್ತರಿಸುವ ಸಾಧ್ಯತೆ ಇದೆ.

BS-6 ವಾಹನಗಳು ಪರಿಸರಕ್ಕೆ ಕಡಿಮೆ ಹಾನಿ ಉಂಟುಮಾಡುತ್ತವೆ. BS-4 ವಾಹನಗಳೊಂದಿಗೆ ಹೋಲಿಸಿದರೆ, ಇವು 82% ಕಡಿಮೆ ಪಾರ್ಟಿಕ್ಯುಲೇಟ್ ಮ್ಯಾಟರ್ (PM) ಹಾಗೂ 25% ಕಡಿಮೆ ನೈಟ್ರೋಜನ್ ಆಕ್ಸೈಡ್ (NOx) ಹೊರಸೂಸುತ್ತವೆ. ಈ ಕಾರಣದಿಂದ 6 ವರ್ಷಕ್ಕಿಂತ ಕಡಿಮೆ ವಯಸ್ಸಿನ BS-6 ವಾಹನಗಳಿಗೆ ಮೂರು ವರ್ಷಗಳಿಗೊಮ್ಮೆ ನವೀಕರಣ ಮಾಡುವ ಅವಕಾಶ ನೀಡುವ ಬಗ್ಗೆ ಚಿಂತನೆ ನಡೆದಿದೆ. ಆದರೆ 6 ವರ್ಷಕ್ಕಿಂತ ಹೆಚ್ಚು ವಯಸ್ಸಿನ ವಾಹನಗಳಿಗೆ ವರ್ಷಕ್ಕೊಮ್ಮೆ ನವೀಕರಣ ಕಡ್ಡಾಯವಾಗಿರಲಿದೆ.

BS-4 ವಾಹನ ಮಾಲೀಕರಿಗೆ ಬಿಗ್ ಶಾಕ್

ಮಾರ್ಚ್ 2020ಕ್ಕೂ ಮೊದಲು ತಯಾರಾದ BS-4 ವಾಹನಗಳಿಗೆ ಪ್ರಸ್ತುತ ವರ್ಷಕ್ಕೊಮ್ಮೆ ಪಿಯುಸಿ ನವೀಕರಣ ಮಾಡುವ ನಿಯಮವಿದೆ. ಹೊಸ ಪ್ರಸ್ತಾವನೆಯಂತೆ, ಇಂತಹ ವಾಹನಗಳು ಪ್ರತಿ 6 ತಿಂಗಳಿಗೊಮ್ಮೆ ಪಿಯುಸಿ ಪ್ರಮಾಣಪತ್ರವನ್ನು ನವೀಕರಿಸಬೇಕಾಗಬಹುದು.

ಇನ್ನು BS-I ರಿಂದ BS-III ವರ್ಗದ ಹಳೆಯ ವಾಹನಗಳಿಗೆ ಈಗಿರುವ 6 ತಿಂಗಳ ಅವಧಿಯನ್ನು ಕಡಿತಗೊಳಿಸಿ, ಪ್ರತಿ 3 ತಿಂಗಳಿಗೊಮ್ಮೆ ಪಿಯುಸಿ ಪ್ರಮಾಣಪತ್ರ ಪಡೆಯುವುದನ್ನು ಕಡ್ಡಾಯಗೊಳಿಸುವ ಸಾಧ್ಯತೆಯೂ ಇದೆ.

ಹಳೆಯ ವಾಹನಗಳಿಗೆ ಕಡಿವಾಣ

ವಾಹನಗಳಿಂದ ಉಂಟಾಗುವ ವಾಯು ಮಾಲಿನ್ಯವನ್ನು ಕಡಿಮೆ ಮಾಡಲು ಹಾಗೂ ಜನರು ಹಳೆಯ ವಾಹನಗಳನ್ನು ಬಳಸುವುದನ್ನು ನಿರುತ್ಸಾಹಗೊಳಿಸಲು ಈ ಬದಲಾವಣೆಗಳನ್ನು ಪ್ರಸ್ತಾಪಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಜೊತೆಗೆ, ಪಿಯುಸಿ ಪರೀಕ್ಷೆಯ ಫಲಿತಾಂಶಗಳಲ್ಲಿ ಯಾವುದೇ ಅಕ್ರಮ ಅಥವಾ ತಿದ್ದುಪಡಿ ನಡೆಯದಂತೆ ವ್ಯವಸ್ಥೆಯನ್ನು ಇನ್ನಷ್ಟು ಪಾರದರ್ಶಕ ಮತ್ತು ತಾಂತ್ರಿಕವಾಗಿ ಬಲಪಡಿಸುವ ಯೋಜನೆಯೂ ಸರ್ಕಾರದ ಮುಂದಿದೆ.

ಗಮನಿಸಿ: ಈ ಬದಲಾವಣೆಗಳು ಇನ್ನೂ ಪ್ರಸ್ತಾವನೆ ಹಂತದಲ್ಲಿದ್ದು, ಕೇಂದ್ರ ಸರ್ಕಾರದಿಂದ ಅಧಿಕೃತ ಅಧಿಸೂಚನೆ ಹೊರಬಿದ್ದ ಬಳಿಕವೇ ಅಂತಿಮ ನಿಯಮಗಳು ಜಾರಿಗೆ ಬರಲಿವೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular