ಬೆಂಗಳೂರು : ರಾಜ್ಯ ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿಗಳ ಒಟ್ಟು 890 ಹುದ್ದೆಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅಧಿಸೂಚನೆ ಹೊರಡಿಸಿದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ರಾಜ್ಯ ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಅಧಿಸೂಚನೆ ಹೊರಡಿಸಿದೆ. ಒಟ್ಟು 890 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ಅರ್ಹ ಅಭ್ಯರ್ಥಿಗಳು ಮೇ 10ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಜೂನ್ ತಿಂಗಳಲ್ಲಿ ಲಿಖಿತ ಪರೀಕ್ಷೆಗಳು ನಡೆಯಲಿದ್ದು, ಕಲ್ಯಾಣ ಕರ್ನಾಟಕ ಮತ್ತು ಉಳಿಕೆ ಮೂಲ ವೃಂದದ ಅಭ್ಯರ್ಥಿಗಳಿಗೆ ಪ್ರತ್ಯೇಕ ದಿನಾಂಕಗಳನ್ನು ನಿಗದಿಪಡಿಸಲಾಗಿದೆ.
ಹುದ್ದೆಗಳ ವಿವರ
ಒಟ್ಟು 890 ಹುದ್ದೆಗಳನ್ನು ಎರಡು ವೃಂದಗಳಲ್ಲಿ ವಿಂಗಡಿಸಲಾಗಿದೆ:
- ಉಳಿಕೆ ಮೂಲ ವೃಂದ(RPC) – ಒಟ್ಟು632 ಹುದ್ದೆಗಳು:
- ಕೃಷಿ ಅಧಿಕಾರಿ (ಗ್ರೂಪ್- ಬಿ): 81
- ಸಹಾಯಕ ಕೃಷಿ ಅಧಿಕಾರಿ: 551
- ಕಲ್ಯಾಣ ಕರ್ನಾಟಕ ವೃಂದ (HK) – ಒಟ್ಟು 258 ಹುದ್ದೆಗಳು:
- ಕೃಷಿ ಅಧಿಕಾರಿ: 40
- ಸಹಾಯಕ ಕೃಷಿ ಅಧಿಕಾರಿ: 218
ಪ್ರಮುಖ ದಿನಾಂಕಗಳು:
- ಅರ್ಜಿಸ ಲ್ಲಿಸಲುಕೊನೆಯದಿನಾಂಕ: ಮೇ 10, 2026
- ಶುಲ್ಕ ಪಾವತಿಸಲು ಕೊನೆಯದಿನಾಂಕ: ಮೇ 12, 2026
- ಕನ್ನಡ ಭಾಷಾ ಪರೀಕ್ಷೆ(ಎಲ್ಲರಿಗೂ): ಜೂನ್ 6, 2026
- RPC ವೃಂದದ ಲಿಖಿತ ಪರೀಕ್ಷೆ: ಜೂನ್ 7, 2026
- ಕಲ್ಯಾಣ ಕರ್ನಾಟಕ ವೃಂದದ ಲಿಖಿತ ಪರೀಕ್ಷೆ: ಜೂನ್ 14, 2026
ಹೆಚ್ಚಿನ ಮಾಹಿತಿ:
ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾದ ಹೆಚ್. ಪ್ರಸನ್ನ (IAS) ಅವರು ತಿಳಿಸಿರುವಂತೆ, ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗಾಗಿ ಕೆಇಎ ಅಧಿಕೃತ ವೆಬ್‌ಸೈಟ್ ಅಥವಾ ಪ್ರಾಧಿಕಾರ ನೀಡಿರುವ ಅಧಿಸೂಚನೆಯ ಲಿಂಕ್‌ಗಳನ್ನು ಪರಿಶೀಲಿಸಬಹುದು. ಲಿಖಿತ ಪರೀಕ್ಷೆಯು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಕೇಂದ್ರಗಳಲ್ಲಿ ನಡೆಯಲಿದ್ದು, ಅಭ್ಯರ್ಥಿಗಳು ನಿಗದಿತ ಸಮಯದೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

