ಇಂದಿನ ಕಾಲವೇ ಅಂತ್ಯವಿಲ್ಲದ ಸ್ಕ್ರೋಲಿಂಗ್ ಯುಗ. ಮೊಬೈಲ್ ಹಿಡಿದು ಹೆಬ್ಬೆರಳಿನಿಂದ ಸ್ಕ್ರೀನ್ ತೀಡ್ತಾ ಹೋದ್ರೆ ಸಾಕು- ಸುದ್ದಿ, ಡ್ಯಾನ್ಸ್, ಜಗಳ, ಜಾಹೀರಾತು ಎಲ್ಲವೂ ಕಣ್ಣೆದುರು ಬಂದು ಹೋಗುತ್ತವೆ. ಈ ಡಿಜಿಟಲ್ ಗದ್ದಲದ ನಡುವೆ ಯಾವುದನ್ನ ನೋಡಬೇಕು, ಯಾವುದನ್ನ ಬಿಡಬೇಕು ಅಂತ ತೀರ್ಮಾನ ಮಾಡೋದು ಯಾರು ಗೊತ್ತಾ? ಅದುವೇ ಜನರೇಶನ್ ಝೀ (Gen Z).ಅವರ ಮೆಸೇಜ್ ಸಿಂಪಲ್ ಆಗಿದೆ, ನನ್ನ ಗಮನ ಸೆಳೆಯೋಕೆ ನಿನಗೆ ಇರೋದು ಕೇವಲ 5 ಸೆಕೆಂಡ್ ಅಷ್ಟೇ
1. ಯಾಕೆ ಈ ಐದು ಸೆಕೆಂಡುಗಳ ಆತುರ?
ಹಳೆಯ ಕಾಲದ ಜಾಹೀರಾತುಗಳ ತರಹ ನಿಧಾನವಾಗಿ ಕಥೆ ಕಟ್ಟಿ ಇಂಪ್ರೆಸ್ ಮಾಡೋಕೆ ಈಗ ಟೈಮ್ ಇಲ್ಲ. ಮೊದಲ ಐದು ಸೆಕೆಂಡ್‌ನಲ್ಲಿ ನೀವು ನಗಿಸಬೇಕು ಅಥವಾ ಅಚ್ಚರಿ ಮೂಡಿಸಬೇಕು. ಇಲ್ಲ ಅಂದ್ರೆ ನಿಮ್ಮ ಕಂಟೆಂಟ್ ನೇರವಾಗಿ ಡಿಜಿಟಲ್ ಸಮಾಧಿಗೆ, ಜೆನ್-ಝೀ ಮಕ್ಕಳಿಗೆ ಅಟೆನ್ಷನ್ ಕಡಿಮೆ ಅನ್ನೋದು ಸುಳ್ಳು, ಅವರ ಸ್ಟ್ಯಾಂಡರ್ಡ್ಸ್ ತುಂಬಾ ಹೈ ಅಷ್ಟೇ. ಹತ್ತು ಆ್ಯಪ್‌ಗಳ ನಡುವೆ ಬೆಳೆದಿರೋ ಅವರಿಗೆ ‘ಎಕ್ಸ್ಟ್ರಾ ಆರ್ಡಿನರಿ’ ಏನಾದ್ರೂ ಬೇಕು.
2. ಗಮನ ಸೆಳೆಯುವ ಸೀಕ್ರೆಟ್ ಮಂತ್ರಗಳು
ಜೆನ್-ಝೀ ಕಣ್ಣು ಸೆಳೆಯೋದು ಅಷ್ಟು ಸುಲಭವಲ್ಲ. ಅವರಿಗೆ ಬೇಕಿರೋದು.ಡಾರ್ಕ್ ಕಾಫಿಯಂತಿರೋ ದೃಶ್ಯ ನೋಡಿದ ತಕ್ಷಣ ಮೈ ಜುಂ ಎನ್ನಬೇಕು.ಹಳೆಯ ಹ್ಯಾಪ್ಪಿಡೆಂಟ್ ಅಥವಾ ರಮೇಶ್ ಸುರೇಶ್ ಜಾಹೀರಾತನ್ನು ಈಗಿನ ಕಾಲದ ಮೀಮ್ ಮಾಡಿ ತೋರಿಸಿದ್ರೆ ಅವರಿಗೆ ಖುಷಿ.ಸ್ವಲ್ಪ ವಿಚಿತ್ರವಾಗಿದ್ರೂ ಪರವಾಗಿಲ್ಲ ಅದು ಬೋರ್ ಆಗಿರಬಾರದು.
3. ಇದು ನಿಜವೋ ಅಥವಾ ಸುಳ್ಳೋ? ಎನ್ನುವ ಡ್ರಾಮಾ
ಈಗಿನ ಲಕ್ಸುರಿ ಬ್ರ್ಯಾಂಡ್‌ಗಳು ಬಿಲ್‌ಬೋರ್ಡ್‌ಗಳನ್ನ ನಂಬುತ್ತಿಲ್ಲ. ಬದಲಿಗೆ ಇಂಟರ್ನೆಟ್‌ನಲ್ಲಿ ಸಿಜಿಐ (CGI) ಬಳಸಿ ಅದ್ಭುತ ಲೋಕ ಸೃಷ್ಟಿಸುತ್ತಿವೆ. ನೋಡಿದ ತಕ್ಷಣ ಇದು ನಿಜವಾ? ಅಂತ ಅನಿಸಿ ಶೇರ್ ಮಾಡಬೇಕು. ಸ್ವಲ್ಪ ಜಾಸ್ತಿ ಡ್ರಾಮಾ ಇದ್ರೆನೇ ಇಲ್ಲಿ ಬೆಲೆ. ಸಾಧಾರಣವಾಗಿರೋದು ಅಂದ್ರೆ ಇವರಿಗೆ ಬೋರಿಂಗ್ ಅಂತ ಅರ್ಥ.
4. ಬ್ರ್ಯಾಂಡ್ ಈಗ ನಿಮ್ಮ ಗೆಳೆಯ
ಈಗಿನ ಕಾಲದಲ್ಲಿ ಗೆಲ್ಲೋದು ಮನುಷ್ಯತ್ವ ಇರೋ ಬ್ರ್ಯಾಂಡ್‌ಗಳು ಮಾತ್ರ. ಸ್ವಿಗ್ಗಿ, ಜೊಮಾಟೋ ಅಥವಾ ಡ್ಯೂಒಲಿಂಗೋದಂತಹ ಆ್ಯಪ್‌ಗಳು ಕಳುಹಿಸೋ ಮೆಸೇಜ್‌ಗಳು ಹೇಗಿರುತ್ತೆ ಗೊತ್ತಾ? ಯಾರೋ ಗೆಳೆಯ ಮೆಸೇಜ್ ಮಾಡಿದ ಹಾಗೆ ಇರುತ್ತೆ. ಜಾಹೀರಾತಿನ ತರಹ ಇರಲ್ಲ. ಬ್ರ್ಯಾಂಡ್ ಕೂಡ ನಿಮ್ಮಂತೆಯೇ ಒಬ್ಬ ವ್ಯಕ್ತಿ ಅಂತ ಅನಿಸಿದಾಗ ಮಾತ್ರ ಇಂದಿನ ತಲೆಮಾರು ಅದನ್ನ ಒಪ್ಪಿಕೊಳ್ಳುತ್ತೆ.

